ಸನ್ ರೈಸರ್ಸ್ ಹೈದರಾಬಾದ್ ತಂಡದ ಆರಂಭಿಕ ಅಭಿಷೇಕ್ ಶರ್ಮ ಐಪಿಎಲ್ ನಲ್ಲಿ 9 ಶತಕ ಸಿಡಿಸಿ ಆರ್ ಸಿಬಿಯ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.
ಹೈದರಾಬಾದ್ ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 242 ರನ್ ಪೇರಿಸಿತು.
ಇಡೀ ಪಂದ್ಯವನ್ನು ಮುನ್ನಡೆಸಿದ ಅಭಿಷೇಕ್ ಶರ್ಮ 47 ಎಸೆತಗಳಲ್ಲಿ ಶತಕ ಪೂರೈಸಿದ್ದೂ ಅಲ್ಲದೇ 68 ಎಸೆತಗಳಲ್ಲಿ 10 ಬೌಂಡರಿ ಹಾಗೂ 10 ಸಿಕ್ಸರ್ ಒಳಗೊಂಡ 135 ರನ್ ಬಾರಿಸಿ ಕೊನೆಗೂ ಔಟಾಗದೇ ಉಳಿದರು.
ಪ್ರಸಕ್ತ ಐಪಿಎಲ್ ನಲ್ಲಿ ಅಭಿಷೇಕ್ ಗಳಿಸಿದ 2ನೇ ಹಾಗೂ ಒಟ್ಟಾರೆ ಐಪಿಎಲ್ ನಲ್ಲಿ 9ನೇ ಶತಕವಾಗಿದೆ. ಕೊಹ್ಲಿ ಐಪಿಎಲ್ ನಲ್ಲಿ ಒಂದೇ ಆವೃತ್ತಿಯಲ್ಲಿ 4 ಸೇರಿದಂತೆ 9 ಶತಕ ಗಳಿಸಿದ್ದಾರೆ. ಕ್ರಿಸ್ ಗೇಲ್ ಮತ್ತು ಡೇವಿಡ್ ವಾರ್ನರ್ ಕೊಹ್ಲಿಗಿಂತ ಹೆಚ್ಚು ಶತಕ ಗಳಿಸಿದ್ದಾರೆ.
ಟ್ರಾವಿಸ್ ಹೆಡ್ (37), ಇಶಾನ್ ಕಿಶನ್ (25) ಮತ್ತು ಹೆನ್ರಿಚ್ ಕ್ಲಾಸೆನ್ (ಅಜೇಯ 37) ಉತ್ತಮ ಮೊತ್ತ ಪೇರಿಸಲು ಅಭಿಷೇಕ್ ಗೆ ನೆರವಾದರು.



