Wednesday, September 30, 2026
Google search engine
HomeದೇಶBREAKING: ಟ್ಯೂಷನ್ ಹೋಗು ಅಂತ ಹೇಳಿದ್ದಕ್ಕೆ ಖ್ಯಾತ ನಟನ ಪುತ್ರ 50ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

BREAKING: ಟ್ಯೂಷನ್ ಹೋಗು ಅಂತ ಹೇಳಿದ್ದಕ್ಕೆ ಖ್ಯಾತ ನಟನ ಪುತ್ರ 50ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

ಟ್ಯೂಷನ್ ಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಖ್ಯಾತ ಹಿಂದಿ ಮತ್ತು ಗುಜರಾತಿ ಕಿರುತೆರೆ ನಟನ 14 ವರ್ಷದ ಪುತ್ರ 50ನೇ ಅಂತಸ್ತಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಮುಂಬೈನಲ್ಲಿ ನಡೆದಿದೆ.

ಕಂಡಿವಾಲಿಯ ಅಂಪಾರ್ಟ್ ಮೆಂಟ್ ನ 51ನೇ ಅಂತಸ್ತಿನಲ್ಲಿ ಕುಟುಂಬ ವಾಸವಾಗಿತ್ತು.ಮನೆಯಿಂದ ಕೆಲವು ಮಹಡಿ ಇಳಿದ ನಂತರ ಬಾಲಕ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಯಿ ಸಂಜೆ 7 ಗಂಟೆ ಸುಮಾರಿಗೆ ಟ್ಯೂಷನ್ ಗೆ ಹೋಗುವಂತೆ ಪದೇಪದೆ ಹೇಳಿದರೂ ಬಾಲಕ ಕಿವಿ ಮೇಲೆ ಹಾಕಿಕೊಂಡಿಲ್ಲ. ಇದರಿಂದ ತಾಯಿ ಟ್ಯೂಷನ್ ಗೆ ಹೋಗುವಂತೆ ಒತ್ತಾಯಿಸಿದ್ದಾಗ ಮನೆಯಿಂದ ಹೊರಗೆ ಬಾಲಕ ಹೊರಟಿದ್ದಾನೆ.

ಬಾಲಕ ಮನೆಯಿಂದ ಹೊರಟ ಕೆಲವೇ ನಿಮಿಷಗಳ ನಂತರ ಅಪಾರ್ಟ್ ಮೆಂಟ್ ಸೆಕ್ಯೂರೆಟಿ ಗಾರ್ಡ್ ಮನೆಗೆ ಬಂದು ಈ ಆಘಾತಕಾರಿ ವಿಷಯ ತಿಳಿಸಿದ್ದಾನೆ. ಹೆತ್ತವರು ಕೂಡಲೇ ಸ್ಥಳಕ್ಕೆ ಹೋದಾಗ ಮಗ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಆಘಾತಕ್ಕೆ ಒಳಗಾಗಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ತನಿಖೆ ನಡೆಸುತ್ತಿದ್ದಾರೆ. ಬಾಲಕ ಎಷ್ಟನೇ ಮಹಡಿ ಮೇಲಿಂದ ಬಿದ್ದಿದ್ದಾನೆ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments