ನವದೆಹಲಿ (ಪಿಟಿಐ): ಕಡಿಮೆ ಬೆಲೆಗೆ ಅನಿಯಮಿತ ಡೇಟಾ ಸೌಲಭ್ಯವನ್ನು ಒದಗಿಸುವ ಯೋಜನೆಗಳ ಶುಲ್ಕವನ್ನು ಹೆಚ್ಚಿಸಲು ಅವಕಾಶ ಇದೆ ಎಂದು ಭಾರ್ತಿ ಏರ್‌ಟೆಲ್ ಕಂಪನಿಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಜೂನ್ ತ್ರೈಮಾಸಿಕದ ಹಣಕಾಸಿನ ಫಲಿತಾಂಶದ ಕುರಿತು ಮಾಧ್ಯಮಕ್ಕೆ ತ್ರೈಮಾಸಿಕ ವರದಿ ಜೊತೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಗೋಪಾಲ್ ವಿಟ್ಟಲ್, ‘ಆರ್ಥಿಕವಾಗಿ ಕಂಪನಿಯ ಹೊಡಿಕೆಯನ್ನು ಹೆಚ್ಚಿಸಲೇಬೇಕು’ ಎಂದು ತಿಳಿಸಿದ್ದಾರೆ.
ಜೂನ್ ತ್ರೈಮಾಸಿಕದಲ್ಲಿ ಕಂಪನಿಗೆ ನಷ್ಟದ ನಿವ್ವಳ ಲಾಭವು ಶೇ. 37.3ರಷ್ಟು ಹೆಚ್ಚಳ ಕಂಡಿದ್ದು ₹8,167 ಕೋಟಿಗೆ ತಲುಪಿದೆ. ಭಾರತ ಮತ್ತು ಆಫ್ರಿಕಾದ ಕಾರ್ಯಾಚರಣೆಗಳು ಬೆಳವಣಿಗೆ ಕಂಡಿರುವುದು ಈ ಏರಿಕೆಗೆ ನೆರವಾಗಿದೆ.
ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಕಾರ್ಯಾಚರಣೆ ವರಮಾನವು ಶೇ. 18.3ರಷ್ಟು ಜಾಸ್ತಿಯಾಗಿದ್ದು ₹58,539 ಕೋಟಿಗೆ ತಲುಪಿದೆ. ಕಂಪನಿಯ ಪ್ರತಿ ಬಳಕೆದಾರರಿಂದ ಪಡೆಯುವ ಸರಾಸರಿ ವರಮಾನವು ಈಗ ₹264ಕ್ಕೆ ಹೆಚ್ಚಿದೆ. ಇದು ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹250 ಆಗಿತ್ತು.



