Friday, May 15, 2026
Google search engine
Homeವಿದೇಶ೨೩ ಲಕ್ಷ ಭಾರತೀಯರಿಗೆ ಸಂಕಷ್ಟ: ಸೌದಿ ಅರೆಬಿಯಾದಲ್ಲಿ ಹೊಸ ಕಾರ್ಮಿಕ ಕಾನೂನು ಜಾರಿ

೨೩ ಲಕ್ಷ ಭಾರತೀಯರಿಗೆ ಸಂಕಷ್ಟ: ಸೌದಿ ಅರೆಬಿಯಾದಲ್ಲಿ ಹೊಸ ಕಾರ್ಮಿಕ ಕಾನೂನು ಜಾರಿ

ಆಧುನಿಕ ಜಗತ್ತಿನ ಜೀತ ಪದ್ಧತಿ ಎಂದೇ ಕರೆಯಲಾಗುವ 50 ವರ್ಷ ಪುರಾತನ ʼಕಾಫಿಲ್‌ʼ ಪ್ರಾಯೋಜಕ ವ್ಯವಸ್ಥೆಯ ಕಾನೂನಿನಲ್ಲಿ ಬದಲಾವಣೆ ತರಲು ಸೌದಿ ಅರೆಬಿಯಾ ಮುಂದಾಗಿದೆ. ಇದರಿಂದ ಆ ದೇಶದಲ್ಲಿ ಕೆಲಸ ಮಾಡುತ್ತಿರುವ 2.3 ದಶಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.

ಕಾಫಿಲ್‌ ನಿಯಮದ ಪ್ರಕಾರ ಕಾರ್ಮಿಕರು ಉದ್ಯೋಗ ಬದಲಾವಣೆ ಮಾಡಬೇಕಾದರೆ ಅಥವಾ ದೇಶ ತೊರೆಯುವ ನಿರ್ಧಾರ ಕೈಗೊಳ್ಳುವಂತಿಲ್ಲ. ಒಂದು ವೇಳೆ ಈ ಬಗ್ಗೆ ನಿರ್ಧರಿಸಿದರೆ ಅಂತಹ ಕಾರ್ಮಿಕ ಪ್ರಯಾಣ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ದೇಶ ತೊರೆಯದಂತೆ ನಿರ್ಬಂಧ ವಿಧಿಸುವ ಅಧಿಕಾರ ಹೊಂದಿರುತ್ತದೆ.

ಹೆಚ್ಚಿನ ಸಂಬಳ ಸಿಗುವುದು ಎಂಬ ಕಾರಣಕ್ಕಾಗಿ ಕತಾರ್‌ ನಲ್ಲಿ ಉದ್ಯೋಗ ಬಯಸಲು ಮುಂದಾದ ಕರ್ನಾಟಕದ 46 ವರ್ಷದ ನರ್ಸ್‌ ಜಸಿಂತಾ ಮೆಂಡೋನ್ಕಾ ಸುಲಿಗೆ ಆರೋಪದಲ್ಲಿ ಬಂಧಿಸಲಾಗಿತ್ತು. ಆದರೆ ನಂತರ 4.3 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಆದರೆ ರಾಜತಾಂತ್ರಿಕ ಮಾತುಕತೆ ನಂತರ ಅವರ ಬಿಡುಗಡೆಗೆ ಪ್ರಯತ್ನ ನಡೆದಿತ್ತು. ಇಂತಹ ಹಲವು ಪ್ರಕರಣಗಳು ಸೌದಿ ಅರೆಬಿಯಾದಲ್ಲಿ ಸಾಮಾನ್ಯವಾಗಿವೆ.

ಈಗ ಅಂತಹ ಭಯಾನಕ ಘಟನೆಗಳು ಸಂಭವಿಸದೇ ಇರಲು ಕಾಫಿಲ್‌ ನಿಯಮದ ಬದಲಾವಣೆಗೆ ಆಗ್ರಹಿಸಲಾಗಿದೆ. ಇಸ್ರೇಲ್‌ ಮತ್ತು ಬಹರೇನ್‌ ದೇಶಗಳಲ್ಲಿ ಈಗಾಗಲೇ ಈ ರೀತಿಯ ಕಾನೂನುಗಳನ್ನು ರದ್ದುಗೊಳಿಸಲಾಗಿದ್ದು, ಇದೀಗ ಸೌದಿ ಅರೆಬಿಯಾ ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಟೀಕೆ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರುತ್ತಿದೆ ಎಂದು ಹೇಳಲಾಗಿದೆ.

ಒಂದು ವೇಳೆ ಸೌದಿ ಅರೆಬಿಯಾ ಈ ರೀತಿಯ ಕಾನೂನು ಜಾರಿಗೆ ತಂದರೆ ಕಾಫಿಲ್‌ ನಿಯಮದ ಪ್ರಕಾರ ಕಾರ್ಮಿಕರಾಗಿ ದುಡಿಯುತ್ತಿರುವ 23 ಲಕ್ಷಕ್ಕೂ ಅಧಿಕ ಭಾರತೀಯರು ಕೆಲಸ ಕಳೆದುಕೊಳ್ಳುವ ಭೀತಿಗೆ ಸಿಲುಕಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments