ನವದೆಹಲಿ: ಕನ್ನಡದಲ್ಲಿ ಲೇಖಕ ಅಮರೇಶ್ ನುಗಡೊನಿ ಅವರ ‘ದಡ ಸೇರಿಸು ತಂದೆ’ ಕಥಾ ಸಂಕಲನಕ್ಕೆ 2025ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಒಲಿದಿದೆ.
2025ರ ಡಿಸೆಂಬರ್ನಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ರದ್ದುಗೊಂಡ ನಂತರ ಸೋಮವಾರ ಪ್ರಶಸ್ತಿ ಪಟ್ಟಿ ಪ್ರಕಟಿಸಲಾಗಿದ್ದು, ಈ ಬಾರಿ ಒಟ್ಟು 24 ಲೇಖಕರಿಗೆ ಪ್ರಶಸ್ತಿ ಲಭಿಸಿದೆ.
ವಾರ್ಷಿಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಇಂದು ಘೋಷಣೆ ಮಾಡಲು ಸಾಹಿತ್ಯ ಅಕಾಡೆಮಿ ಸಂತಸಗೊಂಡಿದೆ. ಒಟ್ಟು 24 ಭಾಷೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದ್ದು, ಅದರಲ್ಲಿ 8 ಕವನ, 4 ಕಾದಂಬರಿ, 6 ಸಣ್ಣ ಕಥೆಗಳ ಪುಸ್ತಕ, 2 ಪ್ರಬಲ, 1 ಸಾಹಿತ್ಯ ವಿಮರ್ಶೆ, 1 ಆತ್ಮಚರಿತ್ರೆ, 2 ಸ್ಮರಣೆಯ ಪುಸ್ತಕಗಳು ಈ ಬಾರಿ ಪ್ರಶಸ್ತಿಗೆ ಭಾಜನವಾಗಿವೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ತಿಳಿಸಿದೆ.
ಮಾಜಿ ರಾಯಭಾರಿ ಹಾಗೂ ಇಂಗ್ಲಿಷ್ ಲೇಖಕ ನವತೇಜ್ ಸರ್ನಾ ಅವರ ‘ಕ್ರಿಮ್ಸನ್ ಸ್ಪ್ರಿಂಗ್’ ಕಾದಂಬರಿ ಮತ್ತು ಹಿಂದಿ ಲೇಖಕರಾಗಿರುವ ಮಮ್ತಾ ಕಾಲಿಯಾ “ಜೀತೆ ಜೀ ಅಲಹಾಬಾದ್” ಸ್ಮರಣಾ ಸಂಪುಟ ಈ ಬಾರಿ ಪ್ರಶಸ್ತಿಗೆ ಭಾಜನವಾಗಿದೆ.
ಇದೇ ಮಾರ್ಚ್ 31ರಂದು ಈ ಪ್ರಶಸ್ತಿಗಳನ್ನು ಪುರಸ್ಕೃತರಿಗೆ ನೀಡಲಾಗುವುದು. ಈ ವೇಳೆ ತಾಮ್ರ ಫಲಕ, ಶಾಲು ಮತ್ತು 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅಕಾಡೆಮಿ ಮಾಹಿತಿ ನೀಡಿದೆ.
ಪ್ರಶಸ್ತಿ ವಿಜೇತ ಇತರೆ ಲೇಖಕರು ಮತ್ತು ಅವರ ಕೃತಿ:
ಬೆಂಗಾಳಿಯ ಪ್ರಸನ್ ಬಂಡೋಪಾದ್ಯಾಯ ಅವರ “ಶ್ರೇಷ್ಠ ಕವಿತಾ”,
ಗುಜರಾತಿಯಲ್ಲಿ ಯೋಗೇಶ್ ವೈದ್ಯ ಅವರ “ಭಟ್ಟಖದಕಿ”,
ಕನ್ನಡದಲ್ಲಿ ಅಮರೇಶ್ ನುಗಡೋನಿ ಅವರ “ದಡ ಸೇರಿಸು ತಂದೆ”,
ಮಲಯಾಣಂನಲ್ಲಿ ಎನ್ ಪ್ರಭಾಕರನ್ ಅವರ “ಮಾಯಮನುಶ್ಯರ್”,
ಮರಾಠಿಯಲ್ಲಿ ರಾಜು ಭವಿಸ್ಕಾರ್ ಅವರ “ಕಲ್ಯಾನಿಲ್ಯ ರೇಷ”,
ಪಂಜಾಬಿಯಲ್ಲಿ ಜಿಂದ್ರೆ ಅವರ “ಸೇಫ್ಟಿ ಕಿಟ್”,
ರಾಜಸ್ಥಾನಿಯಲ್ಲಿ ಜಿತೇಂದ್ರ ಕುಮಾರ್ ಸೋನಿ ಅವರ “ಭರ್ಖಾಮ”,
ತಮಿಳಿನಲ್ಲಿ ಸಾ ತಮಿಳ್ಸೆಲ್ವಂ ಅವರ “ತಮಿಳ್ ಸಿರುಕಥಿಯಿನಿ ಥಡಂಗಳ್”,
ಉರ್ದುವಿನಲ್ಲಿ ಪ್ರೀತ್ಪಾಲ್ ಸಿಂಗ್ ಬೆತಬ್ ಅವರ “ಸಫರ್ ಜಾರಿ ಹೇ”,
ತೆಲುಗುದಲ್ಲಿ ನಂದಿನಿ ಸಿಂದ್ ರೆಡ್ಡಿ ಅವರ “ಅನಿಮೇಶ”,
ಸಿಂಧಿಯಲ್ಲಿ ಭಗವಾನ್ ಅತ್ಲಾನಿ ಅವರ “ವಾಗೂ”,
ಸಂತಾಲಿಯಲ್ಲಿ ಸುಮಿತ್ರಾ ಸೊರೆನ್ ಅವರ “ಮಿಡ್ ಬಿರ್ನಾ ಚೆನ್ನೆ ಸಾವ್ ಇನಾಗ್ ಸಗಾಯ್”,
ಸಂಸ್ಕೃತದಲ್ಲಿ ಮಹಾಮಹೋಪಾಧ್ಯಾಯ ಸಾಹು ಭದ್ರೇಶ್‌ದಾಸ್ ಅವರ “ಪ್ರಸ್ಥಾನಚತುಸ್ತಯೇ ಬ್ರಹ್ಮಘೋಷಃ”,
ಒಡಿಯಾದಲ್ಲಿ ಗಿರಿಜಾಕುಮಾರ್ ಬಲಿಯಾರ್ ಸಿಂಗ್ ಅವರ “ಪದಪುರಾಣ’,
ನೇಪಾಳಿಯಲ್ಲಿ ಪ್ರಕಾಶ್ ಭಟ್ಟರು ಅವರ `ನೇಪಾಳಿ ಪರಂಪರೆಕ್ ಸಂಸ್ಕೃತಿ ರಾ ಸಭ್ಯತಾ ಕೊ ಡುಕುಟಿ’
ಮಣಿಪುರದಲ್ಲಿ ಮಣಿಪುರದ ಹಾಬಾಮ್ ನಳಿನಿ ಅವರ `ಕಂಗ್ಲಾಂದ್ರಿಬಾ ಇಪುಟ್’



