Saturday, May 16, 2026
Google search engine
Homeಕ್ರೀಡೆ41 ಎಸೆತ 15 ಸಿಕ್ಸರ್, 144 ರನ್: ಭಾರತ ಎ ತಂಡದಲ್ಲಿ ಸೂರ್ಯವಂಶಿ ಆರ್ಭಟ!

41 ಎಸೆತ 15 ಸಿಕ್ಸರ್, 144 ರನ್: ಭಾರತ ಎ ತಂಡದಲ್ಲಿ ಸೂರ್ಯವಂಶಿ ಆರ್ಭಟ!

ಯುವ ಸ್ಫೋಟಕ ಬ್ಯಾಟ್ಸ್ ಮನ್ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಶತಕ ಸಿಡಿಸಿ ಉದಯೋನ್ಮುಖ ಏಷ್ಯಾಕಪ್ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೆಟ್ಸ್ ವಿರುದ್ಧ ಭಾರತ 4 ವಿಕೆಟ್ ಗೆ 297 ರನ್ ಗಳ ಬೃಹತ್ ಮೊತ್ತ ದಾಖಲಿಸಿದೆ.

ದೋಹಾದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಪರ ವೈಭವ್ ಸೂರ್ಯವಂಶಿ 32 ಎಸೆತಗಳಲ್ಲಿ ಶತಕ ಪೂರೈಸಿ ಗಮನ ಸೆಳೆದರು.

ವೈಭವ್ ಸೂರ್ಯವಂಶಿ 42 ಎಸೆತಗಳಲ್ಲಿ 11 ಬೌಂಡರಿ ಮತ್ತು 15 ಸಿಕ್ಸರ್ ನೆರವಿನೊಂದಿಗೆ 144 ರನ್ ಸಿಡಿಸಿದರು. ವೈಭವ್ ಎರಡನೇ ವಿಕೆಟ್ ಗೆ ನಮನ್ ಧೀರ್ ಜೊತೆ 163 ರನ್ ಜೊತೆಯಾಟ ನಿಭಾಯಿಸಿದರು. ಇದರಲ್ಲಿ ನಮನ್ 34 ರನ್ ಕೊಡುಗೆ ಮಾತ್ರ ಆಗಿದ್ದು, ವೈಭವ್ ಆರ್ಭಟಕ್ಕೆ ಸಾಕ್ಷಿಯಾಗಿತ್ತು.

13ನೇ ಓವರ್ ಗೆ ವೈಭವ್ ಸೂರ್ಯವಂಶಿ ನಿರ್ಗಮನದ ನಂತರ ನಾಯಕ ಜಿತೇಶ್ ಕುಮಾರ್ 32 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 83 ರನ್ ಚಚ್ಚಿ ತಂಡದ ಮೊತ್ತ 300ರ ಗಡಿ ಸಮೀಪ ಕೊಂಡೊಯ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments