ಬೆಂಗಳೂರು: ಸೃಜನಾತ್ಮಕ ಕ್ಷೇತ್ರಕ್ಕೆ ಅಂತಲೇ ಆರಂಭವಾಗಿರುವ ಭಾರತದ ಮೊದಲ ವಿಶ್ವ ವಿದ್ಯಾನಿಲಯ ವರ್ಲ್ಡ್ ಯುನಿವರ್ಸಿಟಿ ಆಫ್ ಡಿಸೈನ್ 2025ನೇ ಸಾಲಿನ ಶೈಕ್ಷಣಿಕ ಪ್ರವೇಶಾತಿಗೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಬಯಸುವ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಾಸ್ತುಶಿಲ್ಪ, ವಿನ್ಯಾಸ, ಫ್ಯಾಷನ್, ಸಂವಹನ, ದೃಶ್ಯ ಕಲೆಗಳು, ಪ್ರದರ್ಶನ ಕಲೆಗಳು ಮತ್ತು ನಿರ್ವಹಣೆ ಸೇರಿದಂತೆ ತಮ್ಮ ಆಯ್ಕೆಯ ವಿಭಾಗಗಳನ್ನು ಆಯ್ಕೆ ಮಾಡಬಹುದು. ವಿಶ್ವ ವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿರುವ ಈ ಕೋರ್ಸ್‌ಗಳು ತಮ್ಮ ವೃತ್ತಿ ಬದುಕಿನಲ್ಲಿ ಪರಿಣಿತಿಯನ್ನು ಸಾಧಿಸಲು ನೆರವಾಗುತ್ತದೆ.
ವಿದ್ಯಾರ್ಥಿಗಳಿಗೆ ಪ್ರವೇಶಾತಿಯ ಅರ್ಜಿಯು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ ನಲ್ಲಿ ಲಭ್ಯವಿದೆ. ಅರ್ಜಿ ಸಲ್ಲಿಸುವಿಕೆ ಹಂತದಲ್ಲಿ ವಿದ್ಯಾರ್ಥಿಗಳ ವಿಶ್ವ ವಿದ್ಯಾನಿಲಯದ ಡಿಸೈನ್ ಆಪ್ಟಿಟ್ಯೂಡ್ ಪರೀಕ್ಷೆಗೆ ಹಾಜರಾಗಬೇಕು. ಈ ಪರೀಕ್ಷೆಯು 2025 ರ ಜನವರಿ 11 ಮತ್ತು 12 ರಂದು ನಡೆಯಲಿದೆ.
ಸುಮಾರು 30 ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಯಲಿದೆ. ಅರ್ಹತಾ ಪರೀಕ್ಷೆಯು ಆನ್ಲೈನ್ ಮೂಲಕ ನಡೆಯಲಿದೆ. ಅಭ್ಯರ್ಥಿಗಳು ಮನೆಯಲ್ಲಿಯೇ ಪರೀಕ್ಷೆ ಎದುರಿಸಬಹುದು. 2 ಗಂಟೆಗಳ ಕಾಲ ಈ ಪರೀಕ್ಷೆ ನಡೆಯಲಿದ್ದು, ತಾರ್ಕಿಕತೆ, ಮೌಖಿಕ ತಾರ್ಕಿಕತೆ, ಸಾಮಾನ್ಯ ಜ್ಞಾನ ಮತ್ತು ಡ್ರಾಯಿಂಗ್-ಆಧಾರಿತ ಘಟಕವನ್ನು ಒಳಗೊಂಡ ಬಹು-ಆಯ್ಕೆಯ ಪ್ರಶ್ನೆಗಳೊಂದಿಗೆ ವಿಭಾಗಗಳನ್ನು ಒಳಗೊಂಡಿರುತ್ತದೆ.
ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಸಂಜಯ್ ಗುಪ್ತಾ ಮಾತನಾಡಿ, ‘ವರ್ಲ್ಡ್ ಯುನಿವರ್ಸಿಟಿ ಆಫ್ ಡಿಸೈನ್‌ನಲ್ಲಿ ನೀಡಲಾಗುವ ಕೋರ್ಸ್‌ಗಳು ಮಹತ್ವಾಕಾಂಕ್ಷಿ ವಿನ್ಯಾಸಕರ ವಿಶ್ಲೇಷಣಾತ್ಮಕ ಮತ್ತು ಕಾಲ್ಪನಿಕ ಸೃಜನಾತ್ಮಕೆಯನ್ನು ಹೆಚ್ಚಿಸಲು ನೆರವಾಗುತ್ತದೆ ಈ ಕಠಿಣ ಆಯ್ಕೆ ಪ್ರಕ್ರಿಯೆಯಲ್ಲಿ ಡಬ್ಲ್ಯೂಡಿಎಟಿ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮೊಂದಿಗೆ ಸೇರಲು ಮತ್ತು ವಿನ್ಯಾಸದಲ್ಲಿ ಶಿಕ್ಷಣ ಮತ್ತು ಸಂಶೋಧನೆಯ ಮೂಲಕ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವ ರಾಷ್ಟ್ರೀಯ ಪ್ರಯತ್ನಕ್ಕೆ ಕೊಡುಗೆ ನೀಡಲು ವಿನ್ಯಾಸದ ಉತ್ಸಾಹವನ್ನು ಹೊಂದಿರುವ ಎಲ್ಲರನ್ನು ನಾವು ಸ್ವಾಗತಿಸುತ್ತೇವೆ’ ಎಂದರು.
ವಿಶ್ವವಿದ್ಯಾನಿಲಯವು ಡಿಸೈನ್ ಆಪ್ಟಿಟ್ಯೂಡ್ ಟೆಸ್ಟ್ (DAT), ಆರ್ಟ್ ಆಪ್ಟಿಟ್ಯೂಡ್ ಟೆಸ್ಟ್ (AAT) ಮತ್ತು ಜನರಲ್ ಆಪ್ಟಿಟ್ಯೂಡ್ ಟೆಸ್ಟ್ (GAT) ಗಳನ್ನು ಸೃಜನಾತ್ಮಕ ಶಿಕ್ಷಣಕ್ಕಾಗಿ ಅಭ್ಯರ್ಥಿಗಳ ಸೂಕ್ತತೆಯನ್ನು ಮೌಲ್ಯಮಾಪನ ಮಾಡಲು ಮತ್ತು ಸಂಭಾವ್ಯ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲು ನಡೆಸುತ್ತದೆ. ನಿರ್ದಿಷ್ಟ ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಸಿಯುಇಟಿ ಅಂಕಗಳು ಸಹ ಅನ್ವಯಿಸುತ್ತವೆ. ಹೆಚ್ಚುವರಿಯಾಗಿ, ವಿಶ್ವವಿದ್ಯಾನಿಲಯವು ರಾಷ್ಟ್ರೀಯ ಮಟ್ಟದ ಯುಸಿಇಇಡಿ ಮತ್ತು ಸಿಇಇಡಿ ಪರೀಕ್ಷೆಗಳನ್ನು ಹೊಂದಿರುವ ಐಐಟಿ ಬಾಂಬೆಯೊಂದಿಗೆ ಫಲಿತಾಂಶ ಪಾಲುದಾರಿಕೆಯನ್ನು ಹಂಚಿಕೊಳ್ಳುತ್ತದೆ, ಇವುಗಳ ಅಂಕಗಳನ್ನು ಬಿ.ಡಿಇಎಸ್ ( B.Des) ಮತ್ತು ಎಂ.ಡಿಇಎಸ್( M.Des) ಪದವಿ ಕಾರ್ಯಕ್ರಮಗಳಿಗೆ ಪ್ರವೇಶಕ್ಕಾಗಿ ಸ್ವೀಕರಿಸಲಾಗುತ್ತದೆ.
ವಿಶ್ವವಿದ್ಯಾನಿಲಯವು ಶೈಕ್ಷಣಿಕ ಉತ್ಕೃಷ್ಟತೆಯನ್ನು ಪಠ್ಯೇತರ ಚಟುವಟಿಕೆಗಳೊಂದಿಗೆ ಸಂಯೋಜಿಸುವ ಮೂಲಕ ಶಿಕ್ಷಣದಲ್ಲಿ ಮಾನದಂಡಗಳನ್ನು ಹೊಂದಿಸುತ್ತದೆ, ವೃತ್ತಿ ಮತ್ತು ಜೀವನ ಎರಡಕ್ಕೂ ವಿದ್ಯಾರ್ಥಿಗಳನ್ನು ಸಿದ್ಧಪಡಿಸುತ್ತದೆ. ಹರಿಯಾಣದ ಸೋನಿಪತ್‌ನಲ್ಲಿರುವ ವರ್ಲ್ಡ್ ಯೂನಿವರ್ಸಿಟಿ ಆಫ್ ಡಿಸೈನ್ ಭವಿಷ್ಯವನ್ನು ರೂಪಿಸಲು ಸಿದ್ಧವಾಗಿರುವ ಸೃಜನಶೀಲ ವೃತ್ತಿಪರರನ್ನು ಪೋಷಿಸಲು ಸಮರ್ಪಿಸಲಾಗಿದೆ. ಅರ್ಜಿ ಸಲ್ಲಿಕೆಗೆ ಗಡುವು ಜನವರಿ 08, 2025 ಆಗಿದೆ.