Tuesday, May 26, 2026
Google search engine
Homeದೇಶಗೃಹರಕ್ಷಕ ದಳದ ಪರೀಕ್ಷೆ ವೇಳೆ ಕುಸಿದುಬಿದ್ದ ಮಹಿಳೆ ಮೇಲೆ ಆಂಬುಲೆನ್ಸ್ ನಲ್ಲಿ ಸಾಮೂಹಿಕ ಅತ್ಯಾಚಾರ!

ಗೃಹರಕ್ಷಕ ದಳದ ಪರೀಕ್ಷೆ ವೇಳೆ ಕುಸಿದುಬಿದ್ದ ಮಹಿಳೆ ಮೇಲೆ ಆಂಬುಲೆನ್ಸ್ ನಲ್ಲಿ ಸಾಮೂಹಿಕ ಅತ್ಯಾಚಾರ!

ಗೃಹರಕ್ಷಕ ದಳದ ಪರೀಕ್ಷೆ ಬರೆಯಲು ಬಂದಿದ್ದ ಮಹಿಳೆಯೊಬ್ಬರು ಅಸ್ವಸ್ಥಗೊಂಡು ಕುಸಿದುಬಿದ್ದಿದ್ದು, ಆಕೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಆಂಬುಲೆನ್ಸ್ ನಲ್ಲಿ ಸಾಮೂಹಿಕ ಅತ್ಯಾಚಾರ ನಡೆದ ಹೃದಯವಿದ್ರಾವಕ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಬುದ್ಧ ಗಯಾದಲ್ಲಿನ ಬಿಹಾರ ಸೇನಾ ಮೈದಾನದಲ್ಲಿ ಜುಲೈ 24ರಂದು ಗೃಹರಕ್ಷಕ ದಳದ ನೇಮಕಾತಿಗಾಗಿ ದೈಹಿಕ ಪರೀಕ್ಷೆ ನಡೆಯುತ್ತಿದ್ದ ವೇಳೆ ಅಸ್ವಸ್ಥಗೊಂಡ 24 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ.

ದೈಹಿಕ ಪರೀಕ್ಷೆ ವೇಳೆ ಮಹಿಳೆ ಕುಸಿದುಬಿದ್ದಿದ್ದರಿಂದ ನಿಯಮದ ಪ್ರಕಾರ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಕರೆಸಲಾಯಿತು. ಪ್ರಜ್ಞೆ ತಪ್ಪಿದ ಆಕೆಯ ಮೇಲೆ ಹಲವಾರು ಮಂದಿ ಆಂಬುಲೆನ್ಸ್ ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಬುದ್ಧ ಗಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ ಐಆರ್ ದಾಖಲಾದ ಕೆಲವೇ ಗಂಟೆಗಳಲ್ಲಿ ಅಂಬುಲೆನ್ಸ್ ಚಾಲಕ ವಿನಯ್ ಕುಮಾರ್ ಮತ್ತು ಮಂಡಳಿತ ತಾಂತ್ರಿಕ ಅಧಿಕಾರಿ ಅಜಿತ್ ಕುಮಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಜ್ಞಾಹೀನಾಳಾಗಿದ್ದ ನನ್ನ ಮೇಲೆ ಮೂರರಿಂದ ನಾಲ್ಕು ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ದೂರು ನೀಡಿದ್ದು, ಅಂಬುಲೆನ್ಸ್ ಸಾಗಿದ ದಾರಿ ಹಾಗೂ ಸಮಯ ಆಧರಿಸಿ ಇಬ್ಬರನ್ನು ಬಂಧಿಸಲಾಗಿದ್ದು, ಇನ್ನಿಬ್ಬರಿಗಾಗಿ ಶೋಧ ಕಾರ್ಯ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments