Monday, June 8, 2026
Google search engine
Homeರಾಜಕೀಯಬಿಜೆಪಿಯಿಂದ ರಾಜ್ಯಸಭಾ, ವಿಧಾನ ಪರಿಷತ್‌ ಟಿಕೆಟ್‌ ಘೋಷಣೆ: ದೇವೇಗೌಡರಿಗೆ ತಪ್ಪಿದ ಟಿಕೆಟ್!

ಬಿಜೆಪಿಯಿಂದ ರಾಜ್ಯಸಭಾ, ವಿಧಾನ ಪರಿಷತ್‌ ಟಿಕೆಟ್‌ ಘೋಷಣೆ: ದೇವೇಗೌಡರಿಗೆ ತಪ್ಪಿದ ಟಿಕೆಟ್!

ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಸೋಮವಾರ ಬಿಜೆಪಿ ರಾಜ್ಯಸಭೆ ಮತ್ತು ವಿಧಾನಪರಿಷತ್‌ ಅಭ್ಯರ್ಥಿಗಳ ಟಿಕೆಟ್‌ ಘೋಷಣೆ ಮಾಡಿದ್ದು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಟಿಕೆಟ್‌ ಕೈ ತಪ್ಪಿದೆ.

ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭಾ ಚುನಾವಣೆಗೆ ಪ್ರವೇಶಿಸಲು ಬಿಜೆಪಿ ಪ್ರೊ ಎಂ.ನಾಗರಾಜ್​ ಅವರಿಗೆ ಟಿಕೆಟ್​ ನೀಡಿದೆ. ಈ ಮೂಲಕ ಮಿತ್ರ ಪಕ್ಷ ಜೆಡಿಎಸ್‌ ಗೆ ಟಿಕೆಟ್‌ ಬಿಟ್ಟುಕೊಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ.
ಡಲಾಗಿದೆ. ಹಾಗೆಯೇ, ವಿಧಾನಪರಿಷತ್​​ಗೆ ಇಬ್ಬರು ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ಹಲವು ದಿನಗಳ ಗೊಂದಲದ ಬಳಿಕ ಕೊನೆಗೂ ರಾಜ್ಯಸಭೆ ಹಾಗೂ ವಿಧಾನಪರಿಷತ್ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಘೋಷಿಸಿದ್ದು, ರಾಜ್ಯಸಭೆಗೆ ಪ್ರೊ.ಎಂ. ನಾಗರಾಜ್‌ ಅವರಿಗೆ ಟಿಕೆಟ್‌ ನೀಡಿದ್ದರೆ, ವಿಧಾನಪರಿಷತ್‌ ಗೆ ಲಿಂಗರಾಜ್ ಪಾಟೀಲ್​ ಹಾಗೂ ರಘು ಕೌಟಿಲ್ಯ ಅವರಿಗೆ ಬಿಜೆಪಿ ಟಿಕೆಟ್​ ನೀಡಿದೆ.

ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಮತ್ತೆ ರಾಜ್ಯಸಭೆ ಸ್ಥಾನ ನೀಡಲಾಗುತ್ತಿದೆ ಎಂಬ ಚರ್ಚೆಗಳು ಬಲವಾಗಿ ಕೇಳಿಬಂದಿದ್ದವು. ಅಲ್ಲದೆ, ರಾಜ್ಯ ಬಿಜೆಪಿ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಶಾಸಕ ನಿರ್ಮಲ ಕುಮಾರ್ ಸುರಾನ ಹೆಸರುಗಳನ್ನು ಸಹ ಹೈಕಮಾಂಡ್​​ಗೆ ಕಳುಹಿಸಿದೆ ಎನ್ನಲಾಗಿತ್ತು. ಆದರೆ ಹೈಕಮಾಂಡ್ ಇವೆಲ್ಲರನ್ನೂ ಬಿಟ್ಟು ಪ್ರೊ ಎಂ.ನಾಗರಾಜ್ ಅವರಿಗೆ ಮಣೆ ಹಾಕಿದೆ.

ಭಾನುವಾರ ಸಂಜೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ವಿಜಯೇಂದ್ರ ರಾಜ್ಯಸಭೆ ಮತ್ತು ವಿಧಾನಪರಿಷತ್‌ ಟಿಕೆಟ್‌ ಕುರಿತು ಮಾತುಕತೆ ನಡೆಸಿದ್ದು, ಈ ವೇಳೆ ಕುಮಾರಸ್ವಾಮಿ ಅವರ ಕೊನೆಯ ಹಂತದ ಪ್ರಯತ್ನವೂ ವಿಫಲವಾಗಿದೆ. ಈ ಮೂಲಕ ಎರಡು ಸ್ಥಾನಗಳಿಗೆ ಸ್ಪರ್ಧಿಸುವ ಉದ್ದೇಶ ಈಡೇರಲಿಲ್ಲ. ಮೂಲಗಳ ಪ್ರಕಾರ ಎರಡು ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಎಂದು ಊಹಿಸಲಾಗಿತ್ತು.

ರಾಜ್ಯದಿಂದ ನಾಲ್ಕು ರಾಜ್ಯಸಭೆ ಸ್ಥಾನಗಳು ತೆರವಾಗಲಿವೆ. ಈ ಪೈಕಿ ಸಂಖ್ಯಾ ಬಲದಂತೆ ಕಾಂಗ್ರೆಸ್ 3, ಬಿಜೆಪಿ 1 ಸ್ಥಾನ ಗೆಲ್ಲಲು ಅವಕಾಶ ಇದೆ. ಜೂನ್ 18ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಜೂನ್ 8ಕ್ಕೆ(ಇಂದು) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ಪರಿಷತ್ ಸ್ಥಾನಗಳ ಪೈಕಿ ಕಾಂಗ್ರೆಸ್ 4, ಬಿಜೆಪಿ 2 ಸ್ಥಾನ ಸುಲಭ ಗೆಲುವು ಸಾಧ್ಯವಿದೆ. ಅಲ್ಲದೆ, ಮತ್ತೊಂದು ಸ್ಥಾನಕ್ಕೂ ಕಾಂಗ್ರೆಸ್‌ ತನ್ನ ಅಭ್ಯರ್ಥಿ ಕಣಕ್ಕೆ ಇಳಿಸಿ ಗೆಲ್ಲಿಸಿಕೊಳ್ಳಲು ಮುಂದಾಗಿದೆ.

ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ, ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಕೆ.ನಾರಾಯಣ ಅವರ ಅವಧಿ ಜೂನ್ 25ರಂದು ಕೊನೆಗೊಳ್ಳಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಚುನಾಯಿತರಾಗಿರುವ ಜೆಡಿಎಸ್‌ನ ಗೋವಿಂದ ರಾಜು, ಕಾಂಗ್ರೆಸ್‌ನ ನಸೀರ್ ಅಹಮದ್, ತಿಪ್ಪಣ್ಣಪ್ಪ ಕಮಕನೂರ ಹಾಗೂ ಬಿ.ಕೆ.ಹರಿಪ್ರಸಾದ್, ಬಿಜೆಪಿಯ ಎಂ.ಟಿ.ಬಿ.ನಾಗರಾಜ್, ಪ್ರತಾಪ್ ಸಿಂಹ ನಾಯಕ್, ಸುನಿಲ್ ವಲ್ಯಾಪುರೆ ಅವರ ಅವಧಿಯು ಜೂನ್ 30ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ನಡೆಯುತ್ತಿದೆ.

ಕಾಂಗ್ರೆಸ್​ನಿಂದ ಈಗಾಗಲೇ ರಾಜ್ಯಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮನ್ಸೂರ್​ ಅಲಿ ಖಾನ್ ಹಾಗೂ ಪವನ್​ ಖೇರಾ ಕಣಕ್ಕಿಳಿದಿದ್ದಾರೆ. ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಬಿ.ಕೆ.ಹರಿಪ್ರಸಾದ್, ಪಿ.ವಿ.ಮೋಹನ್, ತಿಪ್ಪಣ್ಣಪ್ಪ ಕಮಕನೂರು ಹಾಗೂ ಮಳವಳ್ಳಿ ಶಿವಣ್ಣ ಅವರ ಹೆಸರನ್ನು ಅಂತಿಮಗೊಳಿಸಿದೆ. ಅಲ್ಲದೆ, ತನ್ನ ಐದನೇ ಅಭ್ಯರ್ಥಿಯಾಗಿ ವಿನಯ್ ಕಾರ್ತಿಕ್ ಅವರನ್ನು ಕಣಕ್ಕಿಳಿಸಿದೆ. ಮೊದಲಿಗೆ ನಾಲ್ಕು ಅಭ್ಯರ್ಥಿಗಳನ್ನು ಘೋಷಿಸಿದ್ದ ಎಐಸಿಸಿ ಬಳಿಕ ಐದನೇ ಅಭ್ಯರ್ಥಿಯನ್ನು ಘೋಷಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments