Thursday, May 14, 2026
Google search engine
Homeರಾಜ್ಯಮೈಸೂರು ಕೋರ್ಟ್ ಗೆ ಬಾಂಬ್ ಬೆದರಿಕೆ ಕರೆ

ಮೈಸೂರು ಕೋರ್ಟ್ ಗೆ ಬಾಂಬ್ ಬೆದರಿಕೆ ಕರೆ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಹಳೆ ನ್ಯಾಯಾಲಯಕ್ಕೆ ಹುಸಿ ಬಾಂಬ್ ಕರೆ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪ ಬಹಿಷ್ಕರಿಸಿ ಎಲ್ಲರೂ ಹೊರ ಬಂದ ಘಟನೆ ನಡೆದಿದೆ.

ಎಂದಿನಂತೆ ಹಳೆ ಕೋರ್ಟ್ ನಲ್ಲಿ ಕಲಾಪಗಳು ನಡೆಯುತ್ತಿದ್ದವು. ಈ ವೇಳೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನಲೆಯಲ್ಲಿ ಕೋರ್ಟ್ ಕಲಾಪಗಳನ್ನು ಅರ್ಧಕ್ಕೆ ಮೊಟಕುಗೊಳಿಸಿ ಎಲ್ಲರೂ ಹೊರ ಬಂದಿದ್ದಾರೆ‌.
ಇನ್ನೂ ಒಮ್ಮೆಲೆ ವಕೀಲರೆಲ್ಲರೂ ರಸ್ತೆಗೆ ಬಂದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಪೊಲೀಸ್ ಅಧಿಕಾರಿಗಳ ತಂಡವೇ ಆಗಮಿಸಿದೆ.

ಸಮೀಪದಲ್ಲೇ ಮುಖ್ಯಮಂತ್ರಿ ಕಾರ್ಯಕ್ರಮವಿದ್ದು, ಇಂತಹ ವೇಳೆ ನ್ಯಾಯಾಲಯದ ಕಟ್ಟಡಕ್ಕೆ ಬೆದರಿಕೆ ಕರೆ ಬಂದಿರಿವುದು ಎಲ್ಲರನ್ನೂ ಗಾಬರಿಗೊಳಿಸಿದೆ‌.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments