Sunday, August 23, 2026
Google search engine
Homeರಾಜ್ಯಅಬಕಾರಿ ಇಲಾಖೆಗೆ ಬಂಪರ್ ಆದಾಯ: 3 ದಿನದಲ್ಲಿ 587.51 ಕೋಟಿ ರೂ. ಆದಾಯ!

ಅಬಕಾರಿ ಇಲಾಖೆಗೆ ಬಂಪರ್ ಆದಾಯ: 3 ದಿನದಲ್ಲಿ 587.51 ಕೋಟಿ ರೂ. ಆದಾಯ!

ರಾಜ್ಯಾದ್ಯಂತ ಹೊಸ ವರ್ಷಾಚರಣೆಯ ವೇಳೆ ಅಬಕಾರಿ ಇಲಾಖೆ ಬಂಪರ್ ಆದಾಯ ಗಳಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮದ್ಯ ಮಾರಾಟದಿಂದ 166.74 ಕೋಟಿ ರೂ. ಹೆಚ್ಚು ಆದಾಯ ಗಳಿಸಿ ದಾಖಲೆ ಬರೆದಿದೆ.

ಹಜೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯ ಮಾರಾಟವನ್ನು ಮಧ್ಯರಾತ್ರಿ 1 ಗಂಟೆಯವರೆಗೂ ವಿಸ್ತರಿಸಲಾಗಿತ್ತು. ಇದರಿಂದ ಡಿಸೆಂಬರ್ 29ರಿಂದ 31 ಮಧ್ಯರಾತ್ರಿ 1 ಗಂಟೆಯಲ್ಲಿ ಅಬಕಾರಿ ಇಲಾಖೆಗೆ ಒಟ್ಟು 587.51 ಕೋಟಿ ರೂ. ಆದಾಯ ಹರಿದು ಬಂದಿದೆ.

ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ನಿಗದಿತ ಸಮಯವನ್ನು ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 1 ಗಂಟೆಯವರೆಗೆ ವಿಸ್ತರಿಸಲಾಗಿತ್ತು. ವರ್ಷದ ಕೊನೆಯ ಮೂರು ದಿನದಲ್ಲಿ ಐಎಂಎಲ್, ಬಿಯರ್ ಮಾರಾಟದಿಂದ 587.51 ಕೋಟಿ ಆದಾಯವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 166.74 ಕೋಟಿ ರೂ. ಆದಾಯ ಬಂದಿದೆ.

2024ರ ಡಿ.29, 30, 31ರಂದು 8.25 ಲಕ್ಷ ಬಾಕ್ಸ್ IML ಮತ್ತು 5.03 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗುವ ಮೂಲಕ 2024ರಲ್ಲಿ 420.77 ಕೋಟಿ ರೂ ಆದಾಯ ಗಳಿಸಲಾಗಿತ್ತು. 2025ರ ಡಿ.29, 30, 31ರಂದು 9.84 ಲಕ್ಷ ಬಾಕ್ಸ್ IML, ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ 1.59 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಮತ್ತು ಇದೇ ದಿನದಂದು 6.64 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ 1.61 ಲಕ್ಷ ಬಾಕ್ಸ್ ಹೆಚ್ಚುವರಿ ಮಾರಾಟವಾಗಿದೆ. ಐಎಂಎಲ್, ಬಿಯರ್ ಮಾರಾಟದಿಂದ ಈ ವರ್ಷ ಅಬಕಾರಿ 587.51 ಕೋಟಿ ಆದಾಯವಾಗಿದೆ. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 166.74 ಕೋಟಿ ರೂ ಆದಾಯ ಹರದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments