2006ರ ಹೊಸ ವರ್ಷಾಚರಣೆ ಸಂಭ್ರಮದ ನಡುವೆ ನಮ್ಮ ಮೆಟ್ರೋ ಒಂದೇ ದಿನದಲ್ಲಿ 3 ಕೋಟಿಗೂ ಅಧಿಕ ಆದಾಯ ಗಳಿಸಿ ದಾಖಲೆ ಬರೆದಿದೆ.
ಡಿಸೆಂಬರ್ 31ರಂದು ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಸಾರ್ವಜನಿಕರ ಅನುಕೂಲಕ್ಕಾಗಿ ಮಧ್ಯರಾತ್ರಿ 3 ಗಂಟೆಯವರೆಗೂ ರೈಲು ಸಂಚಾರ ವಿಸ್ತರಿಸಿತ್ತು. ಅಲ್ಲದೇ ರೈಲುಗಳ ಸಂಖ್ಯೆಯನ್ನೂ ಹೆಚ್ಚಿಸಿತ್ತು.
ಮೆಟ್ರೋ ರೈಲು ಸೇವೆ ವಿಸ್ತರಣೆಯ ಲಾಭ ಪಡೆದ ಪ್ರಯಾಣಿಕರು ದಾಖಲೆ ಪ್ರಮಾಣದಲ್ಲಿ ಪ್ರಯಾಣಿಸಿದ್ದು, ಮೆಟ್ರೋ ರೈಲಿನಲ್ಲಿ ಒಂದೇ ದಿನ ಬರೋಬ್ಬರಿ 8 ಲಕ್ಷ 93 ಸಾವಿರ 903 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ.
ಬಿಎಂಆರ್ ಸಿಎಲ್ ಸಂಸ್ಥೆಯ ಪಿಎಂಆರ್ ಯಶವಂತ್ ಚೌಹಾಣ್ ಗುರುವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಮೆಟ್ರೋ ರೈಲು ಸೇವೆ ವಿಸ್ತರಣೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆದಿದ್ದಾರೆ. ಯೆಲ್ಲೋ, ಪರ್ಪಲ್ ಮತ್ತು ಗ್ರೀನ್ ಲೈನ್ ಸೇರಿ ಎಲ್ಲ ಮಾರ್ಗಗಳಲ್ಲಿ ಪ್ರಯಾಣಿಕರ ದಾಖಲೆ ಸಂಖ್ಯೆ ಕಂಡುಬಂದಿದೆ.
ಡಿಸೆಂಬರ್ 31ರಂದು ಒಂದೇ ದಿನ ಬರೋಬ್ಬರಿ 8 ಲಕ್ಷ 93 ಸಾವಿರ 903 ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಿದ್ದುಇದರಿಂದ ನಮ್ಮ ಮೆಟ್ರೋಗೆ ರೂ. 3 ಕೋಟಿ 08 ಲಕ್ಷ ಆದಾಯ ಬಂದಿದೆ.
ಡಿಸೆಂಬರ್ 31ರಂದು ಬೆಳಿಗ್ಗೆಯಿಂದ ಸಂಜೆಯವರೆಗೆ 9.93 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದರೆ, ರಾತ್ರಿ 11 ಗಂಟೆ ನಂತರ 40,774 ಮಂದಿ ಪ್ರಯಾಣಿಸಿದ್ದಾರೆ.
ನಮ್ಮ ಮೆಟ್ರೋಗೆ ಪ್ರತಿದಿನ ಸರಾಸರಿ 2.7 ಕೋಟಿ ರೂ. ಆದಾಯವಾಗುತ್ತಿದೆ. ಆದರೆ ಕ್ರಿಸ್ ಮಸ್ ನಂತರ ರಜೆಯ ಕಾರಣ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಪ್ರತಿದಿನ 7 ಲಕ್ಷ ಇದ್ದ ಪ್ರಯಾಣಿಕರ ಸಂಖ್ಯೆ 6 ಲಕ್ಷಕ್ಕೆ ಇಳಿಕೆಯಾಗಿತ್ತು. ಆದರೆ ನಿನ್ನೆ ಒಂದೇ ದಿನ 3 ಕೋಟಿ ರೂ.ಗೂ ಅಧಿಕ ಆದಾಯ ಬಂದಿದೆ ಎಂದು ಅವರು ಹೇಳಿದರು.
ನಮ್ಮ ಮೆಟ್ರೋದಲ್ಲಿ ಭರ್ಜರಿ ಆದಾಯ
ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಲಾಗಿತ್ತು. ಬೆಳಿಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3:10ರವರೆಗೆ ಮೆಟ್ರೋ ರೈಲುಗಳು ಸಂಚರಿಸಿದ್ದವು. ಇದರಿಂದ ತಡರಾತ್ರಿ ಪಾರ್ಟಿ ಮಾಡಿ ಮನೆಗೆ ಮರಳುವವರಿಗೆ ಸುಲಭವಾಗಿತ್ತು. ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಇದು ನಮ್ಮ ಮೆಟ್ರೋ ಇತಿಹಾಸದಲ್ಲಿ ಒಂದು ದಿನದ ದಾಖಲೆಯಾಗಿದೆ.
ಡಿ.31ರಂದು ಒಟ್ಟು 8,93,903 ಪ್ರಯಾಣಿಕರು ಸಂಚಾರ
ಡಿಸೆಂಬರ್ 31ರಂದು ಒಟ್ಟು 8,93,903 ಪ್ರಯಾಣಿಕರು ಮೆಟ್ರೋ ಬಳಸಿದ್ದಾರೆ. ಇದು ಸಾಮಾನ್ಯ ದಿನಗಳಿಗಿಂತ ಭಾರೀ ಹೆಚ್ಚಳ ಕಂಡು ಬಂದಿದೆ. ಒಂದೇ ದಿನದಲ್ಲಿ ನಮ್ಮ ಮೆಟ್ರೋಗೆ ರೂ. 3 ಕೋಟಿ 08 ಲಕ್ಷ ಆದಾಯ ಬಂದಿದೆ. ಇದು ಮೆಟ್ರೋ ಇತಿಹಾಸದಲ್ಲಿ ಒಂದು ದಿನದ ಗರಿಷ್ಠ ಆದಾಯಗಳಲ್ಲಿ ಒಂದಗಿದೆ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಮೆಟ್ರೋ ಸೇವೆಯನ್ನು ವಿಸ್ತರಿಸಿದ್ದು ಯಶಸ್ವಿಯಾಗಿದೆ. ಪ್ರಯಾಣಿಕರ ಸಂಖ್ಯೆ ಏರಿಕೆಯಿಂದ ಮೆಟ್ರೋ ಆದಾಯದಲ್ಲಿ ಭಾರೀ ಬೆಳವಣಿಗೆ ಕಂಡುಬಂದಿದೆ.
ಪ್ರಯಾಣಿಕರ ಪ್ರತಿಕ್ರಿಯೆ!
ಹೊಸ ವರ್ಷಾಚರಣೆಗೆ ಮೆಟ್ರೋ ಸೇವೆ ರಾತ್ರಿ ವಿಸ್ತರಿಸಿದ್ದು ತುಂಬಾ ಸಹಾಯಕವಾಯಿತು ಎಂದು ಪ್ರಯಾಣಿಕರು ಹೇಳಿದ್ದಾರೆ. ತಡರಾತ್ರಿ ಪಾರ್ಟಿ ಮಾಡಿ ಮನೆಗೆ ಮರಳಲು ಮೆಟ್ರೋ ಇದ್ದುದು ಒಳ್ಳೆಯದು. ಟ್ಯಾಕ್ಸಿ ಅಥವಾ ಆಟೋದಲ್ಲಿ ಹೆಚ್ಚು ದುಡ್ಡು ಖರ್ಚಾಗುತ್ತಿತ್ತು ಎಂದು ಒಬ್ಬ ಪ್ರಯಾಣಿಕ ಹೇಳಿದ್ದಾರೆ. ಮತ್ತೊಬ್ಬರು ಸುರಕ್ಷಿತವಾಗಿ ಮನೆಗೆ ತಲುಪಿದೆವು ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಹೊಸ ವರ್ಷಾಚರಣೆಗೆ ಮೆಟ್ರೋ ಸೇವೆಯನ್ನು ವಿಸ್ತರಿಸಿ, ಹೆಚ್ಚುವರಿ ರೈಲುಗಳನ್ನು ಓಡಿಸಲಾಗಿತ್ತು. ಸುರಕ್ಷತೆಗಾಗಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿತ್ತು. ಪ್ರಯಾಣಿಕರ ಸಂಖ್ಯೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿರುವುದು ಮೆಟ್ರೋ ಬಳಕೆಯಲ್ಲಿ ಜನರ ನಂಬಿಕೆ ಹೆಚ್ಚಾಗಿದೆ ಎಂಬುದನ್ನು ತೋರಿಸುತ್ತದೆ.



