Tuesday, September 29, 2026
Google search engine
Homeರಾಜ್ಯಕೆಎಸ್ಆರ್ ಟಿ‌ಸಿ–ಸಾರಿಗೆ ಮಿತ್ರ” HRMS ಮೊಬೈಲ್ ಆಪ್ (ಆವೃತ್ತಿ 2.0.0) ಬಿಡುಗಡೆ

ಕೆಎಸ್ಆರ್ ಟಿ‌ಸಿ–ಸಾರಿಗೆ ಮಿತ್ರ” HRMS ಮೊಬೈಲ್ ಆಪ್ (ಆವೃತ್ತಿ 2.0.0) ಬಿಡುಗಡೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಸಾರಿಗೆ ಮಿತ್ರ” HRMS ಮೊಬೈಲ್ ಆಪ್ (ಆವೃತ್ತಿ 2.0.0) ಅನ್ನು ಇಂದು ಯಶಸ್ವಿಯಾಗಿ ಬಿಡುಗಡೆ ಮಾಡಿದೆ.

ಈ ಮೊಬೈಲ್ ಆಪ್ ಅನ್ನು ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ, ಕಾರ್ಯಕ್ಷಮತೆ ವೃದ್ಧಿಗೊಳಿಸಲು ಮತ್ತು ನೌಕರರ ಕಲ್ಯಾಣದ ಮೇಲೆ ಬಲವಾದ ಗಮನವನ್ನು ಕೇಂದ್ರೀಕರಿಸಿ ಹೊಸ ವರ್ಷದ ಸಾರ್ಥಕ ಆರಂಭವಾಗಿ ಇದನ್ನು ಬಿಡುಗಡೆಗೊಳಿಸಲಾಗಿದೆ.

HRMS ಮೊಬೈಲ್ ಆಪ್ ಅನ್ನು ನೌಕರರಿಗೆ ತ್ವರಿತ ಸಮಯದಲ್ಲಿ ಮಾನವ ಸಂಪನ್ಮೂಲ ಸೇವೆಗಳನ್ನು ಸ್ಮಾರ್ಟ್ ಫೋನ್ ಮೂಲಕ ಒದಗಿಸುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದೆ. ಪ್ರಮುಖ ವೈಶಿಷ್ಟ್ಯಗಳು:

1. ಜಿಯೋ–ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ
2. ಮಾಸಿಕ ಹಾಜರಾತಿ ವೀಕ್ಷಣೆ.
3. ವೈಯಕ್ತಿಕ ವಿವರಗಳು, ಸೇವಾ ದಾಖಲಾತಿ (ಸರ್ವಿಸ್ ರಿಜಿಸ್ಟರ್) ವಿವರಗಳು, ಕುಟುಂಬ ಸದಸ್ಯರ ಮಾಹಿತಿ ಹಾಗೂ ನಾಮನಿರ್ದೇಶಿತ (ನಾಮಿನಿ) ವಿವರಗಳ ವೀಕ್ಷಣೆ
4. ಮಾಸಿಕ ವೇತನ ಪಟ್ಟಿ (ಪೇ ಸ್ಲಿಪ್)ಗಳನ್ನು ಒಂದೇ ಕ್ಲಿಕ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
5. ರಜೆ ನಿರ್ವಹಣಾ ವ್ಯವಸ್ಥೆ ಮೂಲಕ ಖಾತೆಯಲ್ಲಿರುವ ರಜೆ ವಿವರಗಳ ಪರಿಶೀಲನೆ
6. ಆಂತರಿಕ ಸಂವಹನ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ, ನಿಗಮದ ವಿವಿಧ ವಿಭಾಗಗಳಿಂದ ಹೊರಡಿಸಲಾಗುವ ಸುತ್ತೋಲೆ ವಿವರಗಳ‌‌ ಲಭ್ಯತೆ

ಬೆರಳಂಚಿನಲ್ಲಿ ನೌಕರರಿಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ. ಈ ಸಂದರ್ಭದಲ್ಲಿ ಶ್ರೀ ಅಕ್ರಂಪಾಷ ಭಾಆಸೇ, ವ್ಯವಸ್ಥಾಪಕ ನಿರ್ದೇಶಕರು, ಡಾ.ನಂದಿನಿ ದೇವಿ ಭಾಆಸೇ, ನಿರ್ದೇಶಕರು (ಸಿ&ಪ) ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments