Wednesday, July 1, 2026
Google search engine
Homeದೇಶವೋಡಾಫೋನ್-ಐಡಿಯಾಗೆ ಬಿಗ್ ರಿಲೀಫ್: 87,695 ಕೋಟಿ ರೂ. ನೆರವಿಗೆ ಕೇಂದ್ರ ಸಂಪುಟ ಅನುಮೋದನೆ

ವೋಡಾಫೋನ್-ಐಡಿಯಾಗೆ ಬಿಗ್ ರಿಲೀಫ್: 87,695 ಕೋಟಿ ರೂ. ನೆರವಿಗೆ ಕೇಂದ್ರ ಸಂಪುಟ ಅನುಮೋದನೆ

ಸಾಲದ ಸುಳಿಗೆ ಸಿಲುಕಿರುವ ಟೆಲಿಕಾಂ ದೈತ್ಯ ಸಂಸ್ಥೆ ವೊಡಾಫೋನ್- ಐಡಿಯಾ ನೆರವಿಗೆ ಕೇಂದ್ರ ಸಚಿವ ಸಂಪುಟ 87,695 ಕೋಟಿ ರೂ. ಆರ್ಥಿಕ ನೆರವು ನೀಡಲು ಅನುಮೋದಿಸಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲಲ್ಇ ಟೆಲಿಕಾಂ ಕಂಪನಿಯ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಬಾಕಿ ಮೊತ್ತ ಪಾವತಿಗಳಲ್ಲಿ ಹೆಚ್ಚಿನ ಭಾಗವನ್ನು ಸ್ಥಗಿತಗೊಳಿಸುವ ಬೆಂಬಲ ಪ್ಯಾಕೇಜ್ ಘೋಷಿಸಿದೆ.

ವೊಡಾಫೋನ್ ಐಡಿಯಾದ 87,695 ಕೋಟಿ ರೂ.ಗಳ ಎಜಿಆರ್ ಬಾಕಿಗಳನ್ನು ಡಿಸೆಂಬರ್ 31 ರ ಹೊತ್ತಿಗೆ ಸ್ಥಗಿತಗೊಳಿಸಲಾಗುವುದು. ಈ ಬಾಕಿ ಮೊತ್ತವನ್ನು ಕಂಪನಿ ತಕ್ಷಣ ಪಾವತಿಸಬೇಕಾಗಿಲ್ಲ. ಬದಲಿಗೆ 2031–32 (ಎಫ್‌ವೈ 32)ರಿಂದ 2041 ರವರೆಗೆ ಅಂದರೆ  10 ವರ್ಷಗಳ ದೀರ್ಘಾವಧಿಯಲ್ಲಿ ಪಾವತಿಸಬೇಕಾಗಿದೆ.

ಸ್ಥಗಿತಗೊಳಿಸಿದ ಮೊತ್ತವನ್ನು ನಂತರದ ಹಂತದಲ್ಲಿ ದೂರಸಂಪರ್ಕ ಇಲಾಖೆ (ಡಿಒಟಿ) ಮರು ಮೌಲ್ಯಮಾಪನ ಮಾಡುತ್ತದೆ ಎಂದು ವರದಿ ಹೇಳಿದೆ. ಆದಾಗ್ಯೂ, 201819 ಆರ್ಥಿಕ ವರ್ಷದಲ್ಲಿ ಎಜಿಆರ್ ಹೊಣೆಗಾರಿಕೆಗಳಿಗೆ ಪರಿಹಾರ ಅನ್ವಯಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಈ ಬಾಕಿಗಳು ಬದಲಾಗದೆ ಉಳಿಯುತ್ತವೆ ಮತ್ತು ಅಸ್ತಿತ್ವದಲ್ಲಿರುವ ಮರುಪಾವತಿ ವೇಳಾಪಟ್ಟಿಯ ಪ್ರಕಾರ ಎಫ್‌ವೈ 26 ಮತ್ತು ಎಫ್‌ವೈ 31 ರ ನಡುವೆ ವೊಡಾಫೋನ್ ಐಡಿಯಾ ಪಾವತಿಸಬೇಕಾಗುತ್ತದೆ.

ಕಡಿತ ಪರಿಶೀಲನಾ ಮಾರ್ಗಸೂಚಿಗಳು ಮತ್ತು ಲೆಕ್ಕಪರಿಶೋಧನಾ ವರದಿಗಳ ಆಧಾರದ ಮೇಲೆ ಟೆಲಿಕಾಂ ಇಲಾಖೆಯು ಸ್ಥಗಿತಗೊಳಿಸಿದ AGR ಬಾಕಿಗಳನ್ನು ಪರಿಶೀಲಿಸುತ್ತದೆ. ಈ ಪರಿಶೀಲನಾ ಪ್ರಕ್ರಿಯೆಯು ವೊಡಾಫೋನ್ ಐಡಿಯಾಗೆ ತನ್ನ ದೀರ್ಘಕಾಲೀನ ಆರ್ಥಿಕ ಹೊರೆಯನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತದೆ ಎಂದು ವರದಿ ತಿಳಿಸಿದೆ.

ಸರ್ಕಾರ ನೇಮಿಸಿದ ಸಮಿತಿಯು ಮರುಮೌಲ್ಯಮಾಪನ ಮಾಡಿದ ಮೊತ್ತದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.  ವೊಡಾಫೋನ್ ಐಡಿಯಾದಲ್ಲಿ ಸರ್ಕಾರದ ಸುಮಾರು ಶೇಕಡಾ 49 ರಷ್ಟು ಪಾಲನ್ನು ರಕ್ಷಿಸುವುದು, ಬಾಕಿಗಳ ಕ್ರಮಬದ್ಧ ಮರುಪಾವತಿಯನ್ನು ಖಚಿತಪಡಿಸುವುದು, ದೂರಸಂಪರ್ಕ ವಲಯದಲ್ಲಿ ಸ್ಪರ್ಧೆಯನ್ನು ಕಾಯ್ದುಕೊಳ್ಳುವುದು ಮತ್ತು ದೇಶಾದ್ಯಂತ ಸುಮಾರು 20 ಕೋಟಿ ವೊಡಾಫೋನ್ ಐಡಿಯಾ ಚಂದಾದಾರರ ಹಿತಾಸಕ್ತಿಗಳನ್ನು ಕಾಪಾಡುವುದು ಸಚಿವ ಸಂಪುಟದ ಈ ಕ್ರಮದ ಗುರಿಯಾಗಿದೆ.

2018 ಮತ್ತು 2019 ರ AGR ಬಾಕಿಗಳನ್ನು ಈಗಾಗಲೇ ಭಾರತದ ಸುಪ್ರೀಂ ಕೋರ್ಟ್‌ನ 2020 ರ ಆದೇಶದ ಅಡಿಯಲ್ಲಿ ಅಂತಿಮಗೊಳಿಸಲಾಗಿದೆ ಮತ್ತು ಆದ್ದರಿಂದ ಯಾವುದೇ ಪರಿಹಾರವಿಲ್ಲದೆ ಪಾವತಿಸುವುದನ್ನು ಮುಂದುವರಿಸಲಾಗುತ್ತದೆ ಎಂದು ವರದಿಗಳು ಸ್ಪಷ್ಟಪಡಿಸಿವೆ.

ಈ ಬೆಳವಣಿಗೆಯ ನಂತರ, ವೊಡಾಫೋನ್ ಐಡಿಯಾ ಷೇರುಗಳು ಮಾರುಕಟ್ಟೆಯಲ್ಲಿ ಒತ್ತಡಕ್ಕೆ ಒಳಗಾದವು. ಮಧ್ಯಾಹ್ನ 3:05 ರ ಸುಮಾರಿಗೆ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (NSE) ಷೇರು ಸುಮಾರು 10.8 ರೂ.ಗೆ ವಹಿವಾಟು ನಡೆಸುತ್ತಿದ್ದು, ಶೇ. 10.36 ರಷ್ಟು ಕುಸಿತ ಕಂಡಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments