Thursday, November 21, 2024
Google search engine
Homeತಾಜಾ ಸುದ್ದಿರ್ಯಾಗಿಂಗ್ ಗೆ ಎಂಬಿಬಿಎಸ್ ವಿದ್ಯಾರ್ಥಿ ಬಲಿ: 15 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು!

ರ್ಯಾಗಿಂಗ್ ಗೆ ಎಂಬಿಬಿಎಸ್ ವಿದ್ಯಾರ್ಥಿ ಬಲಿ: 15 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು!

ಹಿರಿಯ ವಿದ್ಯಾರ್ಥಿಗಳು ಬೆಂಚ್ ಮೇಲೆ 3 ಗಂಟೆಗಳ ಕಾಲ ನಿಲ್ಲಿಸಿ ರ್ಯಾಗಿಂಗ್ ಮಾಡಿದ್ದರಿಂದ ನೊಂದ ಮೊದಲ ವರ್ಷದ ಮೆಡಿಕಲ್ ವಿದ್ಯಾರ್ಥಿ ಮೃತಪಟ್ಟ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ.

ಧರ್ಪುರ್ ಪಠಾಣ್ ನಲ್ಲಿರುವ ಜಿಎಂಇಆರ್ ಎಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ರ್ಯಾಗಿಂಗ್ ಮಾಡಿದ್ದಾರೆ.

ಗುಜರಾತ್ ಮೂಲದ ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ 18 ವರ್ಷದ ಅನಿಲ್ ಮೆಹಥಾನಿಯಾ ಮೃತಪಟ್ಟಿದ್ದಾನೆ.

ಮೊದಲ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು ಹಾಸ್ಟೇಲ್ ಗೆ ಹೋದಾಗ ಪರಿಚಯ ಮಾಡಿಕೊಳ್ಳವಂತೆ ಸುಮಾರು 3 ಗಂಟೆಗಳ ಕಾಲ ಕಿರುಕುಳ ನೀಡಲಾಗಿದೆ. ‘ಪರಿಚಯ’ ಪರಿಚಯ ಅಂತ ಪದೇಪದೆ ವಿದ್ಯಾರ್ಥಿಗಳಿಂದ ಹೇಳಿಸಿದ್ದಾರೆ.

ಅನಿಲ್ ರ್ಯಾಗಿಂಗ್ ವೇಳೆ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಆತ ಮೃಪತಟ್ಟಿದ್ದಾನೆ.

ಅನಿಲ್ ಕುಟುಂಬಸ್ಥರು ನೀಡಿದ ದೂರಿನ ಆಧಾರದ ಮೇಲೆ 15 ಹಿರಿಯ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments