Sunday, July 12, 2026
Google search engine
Homeಅಪರಾಧಪಾರ್ಕಿಂಗ್ ಗಲಾಟೆ: ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿಯ ಭೀಕರ ಹತ್ಯೆ

ಪಾರ್ಕಿಂಗ್ ಗಲಾಟೆ: ಬಾಲಿವುಡ್ ನಟಿ ಹುಮಾ ಖುರೇಷಿ ಸಂಬಂಧಿಯ ಭೀಕರ ಹತ್ಯೆ

ಪಾರ್ಕಿಂಗ್ ವಿಷಯದಲ್ಲಿ ಬಾಲಿವುಡ್ ನಟ ಹುಮಾ ಖುರೇಷಿ ಅವರ ಸೋದರನ್ನು ಹೊಡೆದು ಕೊಲೆಗೈದ ಭೀಕರ ಘಟನೆ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದಿದೆ.

ಪಾರ್ಕಿಂಗ್ ಸ್ಥಳದ ವಿವಾದದ ನಂತರ ಗುರುವಾರ ರಾತ್ರಿ ನಟಿ ಹುಮಾ ಖುರೇಷಿ ಅವರ ಸೋದರಸಂಬಂಧಿ ಆಸಿಫ್ ಖುರೇಷಿ ಅವರನ್ನು ಹಲ್ಲೆ ನಡೆಸಿ ಭೀಕರವಾಗಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಮನೆಯ ಮುಂದೆ ದ್ವಿಚಕ್ರ ವಾಹನ ನಿಲ್ಲಿಸಬೇಡಿ ಎಂದು ಆಸೀಫ್ ಖುರೇಷಿ ವಾಹನ ಸವಾರರಿಗೆ ಹೇಳಿದ್ದಾರೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ವಾಹನ ಸವಾರ ಬೆದರಿಕೆ ಹಾಕಿ ಮತ್ತೆ ಬರುತ್ತೇನೆ ಎಂದು ಹೇಳಿ ಹೋಗಿದ್ದಾನೆ.

ರಾತ್ರಿ 9.45ರ ವೇಳೆಗೆ ವ್ಯಕ್ತಿ ತನ್ನ ಸೋದರನ ಜೊತೆ ಬಂದು ಆಸೀಫ್ ಖುರೇಷಿಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ತನ್ನ ಸೋದರರನ್ನು ರಕ್ಷಣೆಗೆ ಕರೆದಿದ್ದು, ಆತ ಬರುವಷ್ಟರಲ್ಲಿ ರಕ್ತ ತುಂಬಾ ಹರಿದಿದ್ದರಿಂದ ಮೃತಪಟ್ಟಿದ್ದಾರೆ ಎಂದು ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

ಇದಕ್ಕೂ ಮುನ್ನ ಸಿಸಿಟಿವಿ ರೆಕಾರ್ಡಿಂಗ್‌ನಲ್ಲಿ ಆರೋಪಿಗಳಲ್ಲಿ ಒಬ್ಬನಾದ ಯುವಕ ಆಸಿಫ್ ಖುರೇಷಿ ಕಡೆಗೆ ನಡೆದು ಬಂದು ಹಲ್ಲೆ ಮಾಡಿದ್ದಾನೆ. ಇಬ್ಬರೂ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುವಾಗ ಪರಸ್ಪರ ತಳ್ಳಲು ಪ್ರಾರಂಭಿಸಿದರು. ಒಬ್ಬ ಮಹಿಳೆ ಮಧ್ಯಸ್ಥಿಕೆ ವಹಿಸಲು ಪ್ರಯತ್ನಿಸಿದರೂ ಆಕೆಯನ್ನು ಪಕ್ಕಕ್ಕೆ ತಳ್ಳಿ ಹಲ್ಲೆ ನಡೆಸಲಾಗಿದೆ.

ಇದೇ ವೇಳೆ ಮತ್ತೊಬ್ಬ ಹೊಡೆದಾಟದಲ್ಲಿ ಕೈ ಜೋಡಿಸಿದ್ದು, ಇಬ್ಬರು ಸೇರಿ ಹಲ್ಲೆ ನಡೆಸಿದ್ದರಿಂದ ಆಸೀಫ್ ಖುರೇಷಿ ಕೊಲೆಯಾಗಿದ್ದಾನೆ.

ನೆರೆಹೊರೆಯವರು ಮಧ್ಯಸ್ಥಿಕೆ ವಹಿಸಿ ಸಂಘರ್ಷವನ್ನು ಪರಿಹರಿಸಲು ಪ್ರಯತ್ನಿಸುತ್ತಾರೆ. ಏತನ್ಮಧ್ಯೆ, ಇಬ್ಬರು ಆರೋಪಿಗಳು ಆಸಿಫ್ ಖುರೇಷಿ ಮೇಲೆ ಮುಗಿಬಿದ್ದಿದ್ದಾರೆ.  ನಂತರ ಸ್ವಲ್ಪ ಹೊತ್ತಿನ ನಂತರ ಗುಂಪಿನಿಂದ ಹೊರಗೆ ಹೋಗಿದ್ದ ವ್ಯಕ್ತಿ ಮತ್ತೆ ಮರಳಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments