Thursday, July 2, 2026
Google search engine
Homeದೇಶಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರ ಡಿಸಿಎಂ?

ಚಂದ್ರಬಾಬು ನಾಯ್ಡು ಪುತ್ರ ಲೋಕೇಶ್ ಆಂಧ್ರ ಡಿಸಿಎಂ?

ಹೈದರಾಬಾದ್: ನೆರೆಯ ತಮಿಳುನಾಡಿನಂತೆ ಆಂಧ್ರದಲ್ಲಿಯೂ ಸಿಎಂ ಪುತ್ರ ಡಿಸಿಎಂ ಆಗುವ ದಿನ ದೂರವಿಲ್ಲ. ಇದರಿಂದ ನಟ ಪವನ್ ಕಲ್ಯಾಣ್ ಸಮನಾದ ಸ್ಥಾನ ಗಿಟ್ಟಿಸಲಿದ್ದು, ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಆಂಧ್ರ ಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ, ಸಚಿವ ನಾರಾ ಲೋಕೇಶ್ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂದು ಆಡಳಿತಾರೂಢ ತೆಲುಗು ದೇಶಂ ಪಕ್ಷದ ಒಳಗೆ ಒತ್ತಡ ಹೆಚ್ಚಾಗಿದೆ.

ನಾರಾ ಲೋಕೇಶ್ ಸದ್ಯ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಐಟಿ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ. ಜನಸೇನಾ ವರಿಷ್ಠ ಪವನ್ ಕಲ್ಯಾಣ್ ಅವರು ಸರ್ಕಾರದ ಏಕೈಕ ಉಪಮುಖ್ಯಮಂತ್ರಿಯಾಗಿದ್ದಾರೆ.

ಲೋಕೇಶ್ ಅವರಿಗೆ ಉನ್ನತ ಹುದ್ದೆ ನೀಡಲು ಪಕ್ಷದಲ್ಲಿ ತೀವ್ರ ಸ್ವರೂಪದ ಒತ್ತಡವಿದೆ. `ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಲೋಕೇಶ್ ಅವರನ್ನು ಡಸಎಂ ಹುದ್ದೆಯಲ್ಲಿ ನೋಡಲು ಆಶಿಸುತ್ತಿದ್ದಾರೆ’ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಕೆ. ರಘು ರಾಮಕೃಷ್ಣ ರಾಜು ಹೇಳಿದ್ದಾರೆ.

ಪವನ್ ಕಲ್ಯಾಣ್ ಅವರಿಗೆ ಸಮನಾಗಿ ಲೋಕೇಶ್ ಅವರಿಗೆ ಉನ್ನತ ಹುದ್ದೆ ನೀಡಿದರೆ ಜನಸೇನಾ ಪಕ್ಷಕ್ಕೆ ಕೊಂಚ ಕಳವಳ ಉಂಟಾಗಬಹುದು. ಆದರೆ, ಅಂತಿಮ ನಿರ್ಧಾರ ಮುಖ್ಯಮಂತ್ರಿ ನಾಯ್ಡು ಅವರದ್ದೇ ಆಗಿರುತ್ತದೆ.

ಪಕ್ಷ ಮತ್ತು ಸರ್ಕಾರದ ಚುಕ್ಕಾಣಿಯನ್ನು ಸೂಕ್ತ ಸಮಯದಲ್ಲಿ ಲೋಕೇಶ್ ಅವರಿಗೆ ನೀಡುವುದಾಗಿ ನಾಯ್ಡು ಅವರೇ ಈ ಹಿಂದೆ ಹೇಳಿದ್ದಾರೆ ಎಂದು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.

‘ಇತ್ತೀಚೆಗೆ ಲೋಕೇಶ್ ನೇತೃತ್ವದಲ್ಲಿ ನಡೆದ ಪಕ್ಷದ ಸದಸ್ಯತ್ವ ಅಭಿಯಾನದಲ್ಲೂ ಈ ಬೇಡಿಕೆ ಭುಗಿಲೆದ್ದಿದೆ. ಈ ಅಭಿಯಾನ ೧ ಕೋಟಿ ಸದಸ್ಯತ್ವವನ್ನು ಪಕ್ಷ ಮಾಡಿಕೊಂಡಿದೆ. ಅಲ್ಲದೆ, ಲೋಕೆಶ್ ಅವರನ್ನು ಭವಿಷ್ಯದ ನಾಯಕನೆಂದು ಬಿಂಬಿಸುವ ಸಮಯ ಬಂದಾಗಿದೆ’ಎಂದೂ ಅವರು ಹೇಳಿದ್ದಾರೆ.

ಟಿಡಿಪಿ ಮೂಲಗಳ ಪ್ರಕಾರ, ಲೋಕೇಶ್ ಅವರನ್ನು ಉಪಮುಖ್ಯಮಂತ್ರಿ ಮಾಡುವ ವಿಚಾರವನ್ನು ಪಕ್ಷದ ಆಂತರಿಕ ಸಭೆಯಲ್ಲಿ ಚರ್ಚಿಸಲಾಗಿದೆ. ಆದರೆ ನಾಯ್ಡು ಈ ವಿಷಯದ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ನಾಯ್ಡು ಉಪಸ್ಥಿತರಿದ್ದ ಕಡಪ ಜಿಲ್ಲೆಯ ಮೈದುಕೂರಿನಲ್ಲಿ ನಡೆದ ಸಭೆಯಲ್ಲಿ ಟಿಡಿಪಿಯ ಹಿರಿಯ ಮುಖಂಡ ಶ್ರೀನಿವಾಸ್ ರೆಡ್ಡಿ ಅವರು ಈ ಪ್ರಸ್ತಾಪ ಮಾಡಿದ್ದಾರೆ.

ಯುವಕರು ಮತ್ತು ಪಕ್ಷದ ಬೆಂಬಲಿಗರಲ್ಲಿ ವಿಶ್ವಾಸ ಮೂಡಿಸಲು ಲೋಕೇಶ್ ಅವರನ್ನು ಉನ್ನತ ಸ್ಥಾನಕ್ಕೆ ಏರಿಸುವಂತೆ ಸಿಎಂಗೆ ಅವರು ಒತ್ತಾಯಿಸಿದ್ದರು.  ಇದರೊಂದಿಗೆ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ. ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಲೋಕೇಶ್ ಶ್ರಮಿಸುತ್ತಿದ್ದಾರೆ ಎಂದಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments