Monday, September 16, 2024
Google search engine
Homeವಾಣಿಜ್ಯವೈದ್ಯಕೀಯ ಆಹಾರ “ಅವೆಸ್ತಾಆಯುರ್ವೈದ್” ಮಾರುಕಟ್ಟೆಗೆ

ವೈದ್ಯಕೀಯ ಆಹಾರ “ಅವೆಸ್ತಾಆಯುರ್ವೈದ್” ಮಾರುಕಟ್ಟೆಗೆ

ವೈಜ್ಞಾನಿಕವಾಗಿ ಮಾನ್ಯತೆಯುಳ್ಳ “ಅವೆಸ್ತಾಆಯುರ್ವೈದ್” ಎಂಬ ವೈದ್ಯಕೀಯ ಆಹಾರಗಳು ಹಾಗೂ ಆಹಾರಕ್ರಮ ಪೂರಕಾಹಾರಗಳನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆ ಮಾಡಲು ಪ್ರಮುಖ ಸಹಭಾಗಿತ್ವ ಘೋಷಿಸಿದ ಅವೆಸ್ತಾಜೆನ್ ಲಿಮಿಟೆಡ್ ಮತ್ತು ಅಪೋಲೋ ಆಯುರ್ ವೈದ್ ರಾಷ್ಟ್ರ.

ಅವೆಸ್ತಾಜೆನ್ ಲಿಮಿಟೆಡ್ (Avesthagen) ಮತ್ತು, ಅಪೋಲೋ ಹಾಸ್ಪಿಟಲ್ಸ್ ಗ್ರೂಪ್ ಕಂಪನಿಯಾದ ಕೇರಳ ಫರ್ಸ್ಟ್ ಹೆಲ್ತ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ನ ಒಂದು ಘಟಕವಾದ ಅಪೋಲೋ ಆಯುರ್ವೈದ್, ವಿನೂತನವಾದ, ವೈಜ್ಞಾನಿಕ ಮಾನ್ಯತೆಯುಳ್ಳ ವೈದ್ಯಕೀಯ-ಆಹಾರಗಳು ಮತ್ತು ಆಹಾರಕ್ರಮ ಪೂರಕಾಹಾರಗಳ ಶ್ರೇಣಿಯನ್ನು ವಿನ್ಯಾಸಗೊಳಿಸಿ, ಮಾನ್ಯತೆಗೊಳಿಸಿ, ಉತ್ಪಾದಿಸಿ ಮಾರುಕಟ್ಟೆ ಮಾಡಲು ತಮ್ಮ ಪ್ರಮುಖ ಸಹಬಾಗಿತ್ವವನ್ನು ಘೋಷಿಸಿದ್ದು, ಇವು ಗುಣಮಟ್ಟ, ಸಾಮರ್ಥ್ಯ ಮತ್ತು ಸುರಕ್ಷತೆಗಾಗಿ ಹೊಸ ಉದ್ಯಮ ಮಾನದಂಡವನ್ನು ಸ್ಥಾಪಿಸಲಿವೆ.

ಜಂಟಿ ಬ್ರ್ಯಾಂಡ್ ಹೆಸರು “ಅವೆಸ್ತಾಆಯುರ್ವೈದ್” ಅಡಿ ಮಾರುಕಟ್ಟೆ ಮಾಡಲು ಗುರಿಯಿರುವ ಈ ಉತ್ಪನ್ನಗಳು, ನವಯುಗದ ಗ್ರಾಹಕ ಮತ್ತು ವೈದ್ಯಚೀಟಿ ಆರೋಗ್ಯ ಉತ್ಪನ್ನಗಳಿಗಾಗಿ ಆಯುರ್ವೇದದ ನೀತಿಗಳಿರುವ ವೈದ್ಯಕೀಯ ಪೋಷಣೆಯ ಸಂಯೋಜನೆಯನ್ನು ಪ್ರೋತ್ಸಾಹಿಸುವ ಗುರಿ ಹೊಂದಿವೆ. ಒಂದು ನಿರ್ದಿಷ್ಟ ಕಾಯಿಲೆ ಅಥವಾ ಲಕ್ಷಣಸಮೂಹ ಅಥವಾ ರೋಗಸ್ಥ ಸ್ಥಿತಿಯ ನಿರ್ದಿಷ್ಟ ಆಹಾರಕ್ರಮ ನಿರ್ವಹಣೆಯ ಸಮಸ್ಯೆಯನ್ನು ನಿವಾರಿಸುತ್ತವೆ. ಇವುಗಳ ವಿಶಿಷ್ಟ ಪೋಷಣಾ ಅಗತ್ಯಗಳನ್ನು ವ್ಯವಸ್ಥಾತ್ಮಕ ವೈದ್ಯಕೀಯ ಮೌಲ್ಯಮಾಪನದ ಮೂಲಕ ಸ್ಥಾಪಿಸಲಾಗಿದೆ.

ಭರವಸೆಯ ಸಸ್ಯೋತ್ಪನ್ನ ಅಭ್ಯರ್ಥಿಗಳ ಮೇಲೆ ಆಧಾರಿತವಾದ ನೈಸರ್ಗಿಕ ಜೈವಿಕಕ್ರಿಯಾವಸ್ತುಗಳನ್ನು, ಮಾಲೀಕತ್ವದ ಜೈವಿಕಸಕ್ರಿಯತಾ ಶೋಧ ಇಂಜಿನ್ ಆದ ಅವೆಸ್ತಾಜೆನ್‌ದ ADePt® ಮತ್ತು ವಿಶೇಷವಾದ ಜೈವಿಕಸಕ್ರಿಯತಾ ಪರೀಕ್ಷಾ ವಿಧಾನವಾದ MetaGrid® ಮೂಲಕ ಅಭಿವೃದ್ಧಿಪಡಿಸಿ ಮಾನ್ಯತೆಗೊಳಿಸಲಾಗುತ್ತದೆ. ಉದ್ಯಮ-ಮುಂಚೂಣಿಯ ಉತ್ಪನ್ನ ಸುರಕ್ಷತೆ ಹಾಗೂ ಸಾಮರ್ಥ್ಯ ಪ್ರೊಫೈಲ್ ಖಾತರಿಪಡಿಸಲು ಈ ಸಹಯೋಗವು ಕಠಿಣವಾದ ವೈಜ್ಞಾನಿಕ ಮತ್ತು ಚಿಕಿತ್ಸಾತ್ಮಕ ಮಾನ್ಯತೆಯ ಮೇಲೆ ಒತ್ತು ನೀಡಲಿದೆ.

ರೋಗಿ ಆರೈಕೆಯನ್ನು ವರ್ಧಿಸಿ, ಸಮಗ್ರ ಸ್ವಾಸ್ಥ್ಯವನ್ನು ಪ್ರೋತ್ಸಾಹಿಸಿ, ಸಂಯೋಜಿತ ವೈದ್ಯಕೀಯ ಹಾಗೂ ಆಧುನಿಕ ವೈದ್ಯಕೀಯ ಪೋಷಣೆಯನ್ನು ಹೆಚ್ಚಿಸುವಂತಹ ವಿನೂತನ ತಂತ್ರಗಳನ್ನು ಬಳಸಿ, ನಿಖರವಾದ ವೈದ್ಯಕೀಯ ಆಹಾರಗಳನ್ನು ವಿನ್ಯಾಸಗೊಳಿಸಿ, ಉತ್ಪಾದಿಸಿ ಮಾರುಕಟ್ಟೆ ಮಾಡುವುದಕ್ಕಾಗಿ ಅವೆಸ್ತಾಜೆನ್ ಮತ್ತು ಅಪೋಲೋ ಆಯುರ್ವೈದ್, ತಮ್ಮ ನೈಪುಣ್ಯತೆ ಹಾಗೂ ಜ್ಞಾನವನ್ನು ಸಮ್ಮಿಲನಗೊಳಿಸಲಿವೆ.

ಮಧುಮೇಹ, ತೂಕ ನಿರ್ವಹಣೆ, ಹೃದ್ರೋಗ ಪರಿಸ್ಥಿತಿಗಳು ಹಾಗೂ ಜೀರ್ಣಕ್ರಿಯೆ ತೊಂದರೆಗಳು ಮುಂತಾದ ದೀರ್ಘಾವಧಿ ಕಾಯಿಲೆಗಳ ನಿರ್ವಹಣೆಯು ಪ್ರಮುಖ ಗಮನ ಕೇಂದ್ರೀಕರಣ ಕ್ಷೇತ್ರಗಳಾಗಿರಲಿವೆ. ಹೆಚ್ಚುವರಿಯಾಗಿ, ಈ ಸಹಭಾಗಿತ್ವವು, ಆಂಕೋ_ಪೋಷಣೆ, ಬೌದ್ಧಿಕ ಆರೋಗ್ಯ ಹಾಗೂ ಮಾನಸಿಕ ಸ್ವಾಸ್ಥ್ಯದ ಸಮಸ್ಯೆಗಳನ್ನು ಪರಿಹರಿಸಿ, ಆಧುನಿಕ ವೈದ್ಯಕೀಯ ಪೋಷಣೆಗೆ ಒಂದು ಸಮಗ್ರವಾದ ದೃಷ್ಟಿಕೋನ ಖಾತರಿಪಡಿಸಲಿದೆ.

ಅವೆಸ್ತಾಜೆನ್‌ನ ಅಧೀನ ಸಂಸ್ಥೆಗಳಾದ ಅವೆಸ್ತಾ ನಾರ್ಡಿಕ್ ರಿಸರ್ಚ್ ಪ್ರೈ ಲಿ., ಹಾಗೂ ಅವೆಸ್ತಾ ಗುಡ್ ಅರ್ತ್ ಫುಡ್ಸ್ ಪ್ರೈ ಲಿ., ಉತ್ಪನ್ನಗಳ ಉತ್ಪಾದನೆಯ ಜವಾಬ್ದಾರಿ ವಹಿಸಿಕೊಂಡಿದ್ದರೆ, ಅಪೋಲೋ ಆಯುರ್ವೈದ್ ಈ ಒಪ್ಪಂದದಡಿ ಉತ್ಪನ್ನಗಳ ಮಾರುಕಟ್ಟೆಯ ಜವಾಬ್ದಾರಿ ವಹಿಸಿಕೊಳ್ಳುತ್ತದೆ. ಉತ್ಪನ್ನ ಅಭಿವೃದ್ಧಿ ಜಂಟಿ ಹೊಣೆಗಾರಿಕೆಯಾಗಿರುತ್ತದೆ.

ಅಪೋಲೋ ಹಾಸ್ಪಿಟಲ್ಸ್‌ನ ವೈಸ್ ಚೇರ್ ಪರ್ಸನ್ ಮತ್ತು ಅಪೋಲೋ ಆಯುರ್ವೈದ್‌ನ ಚೇರ್ ಪರ್ಸನ್, ಡಾ. ಪ್ರೀತಾ ರೆಡ್ಡಿ, “ಅಪೋಲೋ ಹಾಸ್ಪಿಟಲ್ಸ್‌ನಲ್ಲಿ ನಾವು, ಆರೋಗ್ಯ ಹಾಗೂ ಸ್ವಾಸ್ಥ್ಯವನ್ನು ವರ್ಧಿಸುವಂತಹ ವಿನೂತನ ಪರಿಹಾರಗಳನ್ನು ನಿರಂತರವಾಗಿ ಕಂಡುಹಿಡಿಯುವುದಕ್ಕೆ ನಮ್ಮನ್ನು ಮುನ್ನಡೆಸುವ ರೋಗಿ ಆರೈಕೆಗೆ ಬದ್ಧರಾಗಿದ್ದೇವೆ. ಅಪೋಲೋ ಆಯುರ್ವೈದ್ ಮತ್ತು ಅವೆಸ್ತಾಜೆನ್ ನಡುವಿನ ಈ ಪ್ರಮುಖ ಸಹಭಾಗಿತ್ವವು, ಆಯುರ್ವೇದದ ಕಾಲಾತೀತ ವಿವೇಚನೆಯನ್ನು ಅತ್ಯಾಧುನಿಕವಾದ ವೈಜ್ಞಾನಿಕ ಮಾನ್ಯತೆಯೊಂದಿಗೆ ಸಂಯೋಜನೆ ಮಾಡುವಲ್ಲಿ ಒಂದು ಪ್ರಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ.

ಅವೆಸ್ತಾ ಆಯುರ್ವೈದ್ ಶ್ರೇಣಿಯ ವೈಜ್ಞಾನಿಕವಾಗಿ ಮಾನ್ಯತೆಯುಳ್ಳ ವೈದ್ಯಕೀಯ ಆಹಾರಗಳು ಹಾಗೂ ಆಹಾರಕ್ರಮ ಪೂರಕಾಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ನಾವು ನಮ್ಮ ರೋಗಿಗಳ ವಿಶಿಷ್ಟ ಪೌಷ್ಟಿಕ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆ, ಒಳಗಿನಿಂದಲೇ ಶಮನಿಕೆಯನ್ನು ಪ್ರೋತ್ಸಾಹಿಸುವ ಸಮಗ್ರ ಆರೋಗ್ಯಶುಶ್ರೂಷೆಗೆ ಹೊಸ ದೃಷ್ಟಿಕೋನ ಒದಗಿಸುವಲ್ಲಿ ಮುನ್ನೆಲೆಯಲ್ಲಿರುತ್ತೇವೆ. ಒಂದುಗೂಡಿ ನಾವು, ವೈದ್ಯಕೀಯ ಪೋಷಣೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸಿ, ನಾವು ಸೇವೆ ಒದಗಿಸುವ ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತೀಕೃತವಾದ ಹಾಗೂ ಪರಿಣಾಮಕಾರಿಯಾದ ಆರೈಕೆಯನ್ನು ಒದಗಿಸಲು ಬದ್ಧರಾಗಿದ್ದೇವೆ.” ಎಂದು ಹೇಳಿದರು.

ಅವೆಸ್ತಾಜೆನ್ ಲಿಮಿಟೆಡ್‌ನ ಚೇರ್ ಪರ್ಸನ್ ಮತ್ತು ನಿರ್ವಾಹಕ ನಿರ್ದೇಶಕ ಡಾ. ವಿಲ್ಲೂ ಮೋರಾವಾಲಾ ಪಟೇಲ್ ಸಹಭಾಗಿತ್ವದ ಸಾಮರ್ಥ್ಯದ ಬಗ್ಗೆ ಅಪಾರ ಉತ್ಸಾಹ ವ್ಯಕ್ತಪಡಿಸುತ್ತಾ, “ಅಪೋಲೋ ಆಯುರ್ವೈದ್‌ನೊಂದಿಗಿನ ಈ ಸಹಭಾಗಿತ್ವವು ಒದಗಿಸಬಲ್ಲ ಅವಕಾಶಗಳಿಂದ ನಾವು ಉತ್ಸುಕರಾಗಿದ್ದೇವೆ. ಅತ್ಯಾಧುನಿಕ ಆಧುನಿಕ ತಂತ್ರಜ್ಞಾನದ ಜೈವಿಕಸಕ್ರಿಯ ವಸ್ತುಗಳನ್ನು ಆಯುರ್ವೇದದೊಂದಿಗೆ ಸಂಯೋಜಿಸುವ ಮೂಲಕ ನಾವು ರೋಗಿಗಳಿಗೆ ಇನ್ನೂ ಹೆಚ್ಚು ವೈಯಕ್ತೀಕೃತವಾದ ಹಾಗೂ ಪರಿಣಾಮಕಾರಿಯಾದ ಚಿಕಿತ್ಸಾ ಆಯ್ಕೆಗಳನ್ನು ಒದಗಿಸಬಹುದು.

ಅವೆಸ್ತಾ ಆಯುವೈದ್, ರೋಗಪರಿಸ್ಥಿತಿಗಳನ್ನು ತಡೆಗಟ್ಟಲು ಅಥವಾ ನಿವಾರಿಸಲು ವಿನ್ಯಾಸಗೊಂಡ ವಿನೂತನ ಸಸ್ಯ-ಆಧಾರಿತ ಪೋಷಣಾ ಉತ್ಪನ್ನಗಳ ಶ್ರೇಣಿಯನ್ನು ಅಭಿವೃದ್ಧಿಪಡಿಸಿ ಮಾರುಕಟ್ಟೆ ಮಾಡುವ ಮೂಲಕ ಜೀವನಶೈಲಿ ನಿರ್ವಹಣೆ ಹಾಗೂ ಒಟ್ಟಾರೆ ಆರೋಗ್ಯಕ್ಕೆ ಬೆಂಬಲ ಒದಗಿಸಲಿದೆ. ಆರೋಗ್ಯಕರವಾದ, ವೈದ್ಯಕೀಯವಾಗಿ ಮಾನ್ಯತೆಯುಳ್ಳ ಆಹಾರಗಳ ಸೇವನೆಯ ಮೂಲಕ ಜನರು ಸಂಭಾವ್ಯ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಔಷಧೋಪಚಾರಗಳ ಅಗತ್ಯವನ್ನು ಕಡಿಮೆ ಮಾಡಿಕೊಳ್ಳಬಹುದು.” ಎಂದರು.

ಅಪೋಲೋ ಆಯುರ್ವೈದ್‌ದ ನಿರ್ವಾಹಕ ನಿರ್ದೇಶಕ ರಾಜೀವ್ ವಾಸುದೇವನ್ ತಮ್ಮ ಮಾತುಗಳನ್ನು ಸೇರಿಸುತ್ತಾ, “ಆಯುರ್ವೇದ ವೈದ್ಯಕೀಯ ಶುಶ್ರೂಷೆಯಲ್ಲಿ ಅಪೋಲೋ ಆಯುರ್ವೈದ್‌ದ ನೈಪುಣ್ಯತೆ ಮತ್ತು ಅಂತರ್ದೃಷ್ಟಿಯನ್ನು ಈಗ, ಹೊಸಪೀಳಿಗೆಯ ನಿಖರತೆಯೊಂದಿಗೆ ವಿನ್ಯಾಸಗೊಳಿಸಲಾದ ಅವೆಸ್ತಾ ಆಯುರ್ವೈದ್ ವೈದ್ಯಕೀಯ ಆಹಾರ ಮತ್ತು ಆಹಾರಕ್ರಮ ಪೂರಕಾಹಾರಗಳಿಗಾಗಿ ಅವೆಸ್ತಾಜೆನ್‌ದ ಅತ್ಯಾಧುನಿಕ ವೈಜ್ಞಾನಿಕ ಮಾನ್ಯತೆಯ ಮೂಲಕ ವರ್ಧಿಸಬಹುದು. ಇದು ತನ್ನ ವಿಧದಲ್ಲೇ ಮೊಟ್ಟಮೊದಲನೆಯದಾದ ಪ್ರಮುಖ ಸಹಭಾಗಿತ್ವವಾಗಿದ್ದು, ನಿಖರವಾದ ಆಯುರ್ವೇದ ವೈದ್ಯಕೀಯ ವಿಜ್ಞಾನವನ್ನು ಜೈವಿಕ ತಂತ್ರಜ್ಞಾನ, ಸಿಸ್ಟಮ್ಸ್ ಜೀವಶಾಸ್ತ್ರದೊಂದಿಗೆ ವರ್ಧಿಸುವ ಮೂಲಕ, ರೋಗಿಗಳಿಗೆ ವಿಶಿಷ್ಟ ಪ್ರಯೋಜನ ಏರ್ಪಡಿಸುವಂತಹ ಸಸ್ಯೋತ್ಪನ್ನ-ಜೈವಿಕಸಕ್ರಿಯತೆಯುಳ್ಳ ವೈಯಕ್ತೀಕೃತ ಆರೋಗ್ಯ ಪರಿಹಾರಗಳನ್ನು ಒದಗಿಸಬಹುದು.” ಎಂದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments