Monday, May 25, 2026
Google search engine
Homeಅಪರಾಧಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕರೆಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ವಂಚನೆ: ಸ್ವಿಗ್ಗಿ ಡೆಲಿವರಿ ಬಾಯಿ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕರೆಗಳಿಂದ ಸರ್ಕಾರಕ್ಕೆ ಕೋಟ್ಯಂತರ ರೂ.ವಂಚನೆ: ಸ್ವಿಗ್ಗಿ ಡೆಲಿವರಿ ಬಾಯಿ ಸೇರಿ ಇಬ್ಬರು ಅರೆಸ್ಟ್

ಬೆಂಗಳೂರು: ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ, ಸರ್ಕಾರ ಹಾಗೂ ದೂರಸಂಪರ್ಕ ಸಂಸ್ಥೆಗಳಿಗೆ ಕೋಟ್ಯಾಂತರ ರೂ ವಂಚನೆ ಮಾಡುತ್ತಿದ್ದ ಸ್ವಿಗ್ಗಿ ಡೆಲಿವರಿ ಬಾಯ್ ಸೇರಿ ಇಬ್ಬರನ್ನು ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಮಲ್ಲಪುರಂನ ಟ್ಯಾಕ್ಸ್ ಕನ್ಸ್‍ಲ್ಟೆಂಟ್ ಮಹಮ್ಮದ್ ಸಫಾಫ್(33)ಹಾಗೂ ವೈಟ್‍ಫೀಲ್ಡ್ ನ
ಇಮ್ಮಡಿಹಳ್ಳಿಯ ಸ್ವಿಗ್ಗಿ ಡೆಲಿವರಿ ಬಾಯ್ ಮಹಮ್ಮದ್ ಫಯಾಜ್(25)ಬಂಧಿತ ಆರೋಪಿಗಳಾಗಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತರಿಂದ 10 ಲಕ್ಷ ಮೌಲ್ಯದ

9 ಸಿಮ್ ಬಾಕ್ಸ್ ಗಳು, 1 ಮೊಬೈಲ್, 6 ರೌಟರ್ ಗಳು ,1 ಲ್ಯಾಪ್‍ಟಾಪ್, 702 ಸಿಮ್ ಕಾರ್ಡ್‍ಗಳು (ಎರ್ ಟೆಲ್ 511,ಬಿಎಸ್ ಡನ್ ಎಲ್ 155,ವೋಡಾ ಪೋನ್ 36) ವಶಪಡಿಸಿಕೊಳ್ಳಲಾಗಿದೆ.

ವಶಪಡಿಸಿಕೊಂಡ ಸಿಮ್ ಕಾರ್ಡ್‍ಗಳನ್ನು ಇತರ ಸೈಬರ್ ಅಪರಾಧಗಳಿಗೂ ಬಳಸಿರುವ ಶಂಕೆಯಿದ್ದು, ತನಿಖೆ ಮುಂದುವರೆದಿದೆ. ಸರಕಾರ ಹಾಗೂ ದೂರಸಂಪರ್ಕ ಕಂಪನಿಗಳಿಗೆ ಆಗಿರುವ ಕೋಟ್ಯಾಂತರ ರೂ ನಷ್ಟದ ಪ್ರಮಾಣವನ್ನು ಲೆಕ್ಕಹಾಕಬೇಕಾಗಿದೆ ಎಂದು ತಿಳಿಸಿದರು.

ಕಳೆದ ಜು.30ರಂದು ಭಾರತಿ ಏರ್‌ ಟೆಲ್ ಲಿಮಿಟೆಡ್‍ನ ನೋಡಲ್ ಅಧಿಕಾರಿ ಸಂತೋಷ್ ಕುಮಾರ್ ಸೈಬರ್ ಕ್ರೈಂ ಠಾಣೆಯಲ್ಲಿ ನೀಡಿದ ದೂರಿನಲ್ಲಿ ವೈಟ್‌ ಫೀಲ್ಡ್ ನ ಇಮ್ಮಡಿಹಳ್ಳಿ ಮುಖ್ಯರಸ್ತೆಯ ರಾಮ ಮಂದಿರದ ಬಳಿ ಕೆಲವರು ಸಿಮ್ ಕಾರ್ಡ್ ಗಳನ್ನು ಬಳಸಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಉಂಟುಮಾಡುವ ರೀತಿಯಲ್ಲಿ, ಕಂಪನಿಗೆ ನಷ್ಟ ಉಂಟುಮಾಡುತ್ತಾ, ಮಾನ್ಯತೆ ಇಲ್ಲದ ಟೆಲಿಫೋನ್ ಎಕ್ಸ್ ಚೇಂಜ್ ನಡೆಸುತ್ತಿರುವುದನ್ನು ತಿಳಿಸಿದ್ದರು.

ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ದೂರಸಂಪರ್ಕ ಇಲಾಖೆ ಅಧಿಕಾರಿಗಳು ಹಾಗೂ ಏರ್‍ ಟೆಲ್ ಸೇವಾ ದಾತೆಯ ಸಹಕಾರದೊಂದಿಗೆ ಆ.1 ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಮಹಮ್ಮದ್ ಸಫಾಫ್ ನನ್ನು ಪತ್ತೆಹಚ್ಚಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದು, ಆರೋಪಿಯು ಅದೇ ದಿನ ವಿಚಾರಣೆಗೆ ಹಾಜರಾಗಿದ್ದು, ಅಂತರರಾಷ್ಟ್ರೀಯ ಕರೆಗಳನ್ನು ಸ್ಥಳೀಯ ದರದಲ್ಲಿ ಮಾರ್ಗಮಾಡಲು ಇಮ್ಮದಿಹಳ್ಳಿಯಲ್ಲಿ ಸಿಮ್ ಬಾಕ್ಸ್ ಸ್ಥಾಪಿಸಿದ್ದನ್ನು ಬಾಯ್ಬಿಟ್ಟಿದ್ದಾನೆ‌.

ಆತನನ್ನು ಸುದೀರ್ಘ ವಿಚಾರಣೆ ನಡೆಸಿ, ಮತ್ತಿಬ್ಬರು ಅಪರಾಧದಲ್ಲಿ ಭಾಗಿಯಾದ ಮಾಹಿತಿ ಪಡೆದು ಸ್ವಿಗ್ಗಿ ಡೆಲಿವರಿ ಬಾಯ್ ಮಹಮ್ಮದ್ ಫಯಾಜ್ ನನ್ನು ವಶಕ್ಕೆ ಪಡೆಯಲಾಗಿದೆ. ಇವರ ಜೊತೆ ಓರ್ವ ವ್ಯಕ್ತಿಯು ವಿದೇಶದಲ್ಲಿ ವಾಸವಿದ್ದು,ಆತನಿಗೆ ಫಯಾಜ್ ಬೆಂಗಳೂರಿನಿಂದ ನೆರವು ನೀಡುತ್ತಿದ್ದ.

ವಿದೇಶದಲ್ಲಿರುವ ವ್ಯಕ್ತಿಯು, ಅಲ್ಲಿರುವ ಬಡ ಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಮಾತನಾಡಲು ಅಂತರರಾಷ್ಟ್ರೀಯ ಕರೆಗಳ ವೆಚ್ಚ ಹೆಚ್ಚಾಗುತ್ತದೆ ಎಂಬ ಕಾರಣ ನೀಡಿ, ತಮ್ಮ ವಿಧಾನದಲ್ಲಿ ಈ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿದರೆ ಲಾಭವಾಗುತ್ತದೆ ಎಂದು ತಿಳಿಸಿದ್ದನು.

ಇದಕ್ಕೆ ಒಪ್ಪಿದ ಆರೋಪಿಯು, ವೈಟ್‍ಫೀಲ್ಡ್‍ನ ಇಮ್ಮಡಿಹಳ್ಳಿ ಮುಖ್ಯರಸ್ತೆಯ ಬಾಡಿಗೆ ಮನೆಯಲ್ಲೇ ಸಿಮ್ ಬಾಕ್ಸ್‍ಗಳನ್ನು ಬಳ, ರಹಸ್ಯ ಟೆಲಿಪೋನ್ ಎಕ್ಸೈಂಜ್ ಸ್ಥಾಪನೆ ಮಾಡಿದ್ದನು. ವಿದೇಶದಿಂದ ಕೂರಿಯರ್ ಮೂಲಕ ಕಳುಹಿಸಲಾದ ಸಿಮ್ ಬಾಕ್ಸ್ ಗಳನ್ನು ಬಳಸಿ, ಮತ್ತೊರ್ವ ಸಹಚರನ ಸಹಾಯದಿಂದ ಈ ಕೃತ್ಯವೆಸಗುತ್ತಿದ್ದು, ಇದರಿಂದ ಆರೋಪಿಗೆ ಪ್ರತಿ ತಿಂಗಳು 4 ರಿಂದ 5 ಲಕ್ಷದವರೆಗೆ ಹವಾಲಾ ಮಾರ್ಗದಿಂದ ಹಣ ಲಭಿಸುತ್ತಿತ್ತು ಎಂದು ಬಾಯ್ಬಿಟ್ಟಿದ್ದು,ಆತನನ್ನು ಬಂಧಿಸಲಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments