ಬೊಲೆರೊ ವಾಹನ ಮತ್ತು ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 5 ಮಂದಿ ಮೃತಪಟ್ಟ ದಾರುಣ ಘಟನೆ ಕೋಲಾರದಲ್ಲಿ ಸಂಭವಿಸಿದೆ.
ಮುಳಬಾಗಿಲು ತಾಲೂಕಿನ ನಂಗಲಿ ಎಂಬಲ್ಲಿ ಬುಧವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಬೊಲೆರೊ ಡಿಕ್ಕಿ ಹೊಡೆದ ರಭಸಕ್ಕೆ 3 ಬೈಕ್ ಗಳಲ್ಲಿ ಇದ್ದ 5 ಮಂದಿ ಅಸುನೀಗಿದ್ದಾರೆ.
ಕೂಲಿ ಕೆಲಸ ಮುಗಿಸಿಕೊಂಡು ಕಾರ್ಮಿಕರು ಮನೆಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕೋನಕುಂಟೆ ಗ್ರಾಮದ ರಾಧಪ್ಪ (46, ವೆಂಕಟರಾಮಪ್ಪ (45) ಪತ್ನಿ ಅಲಮೇಲಮ್ಮ (30) ಮತ್ತು ಇಬ್ಬರು ಅಪರಿಚಿತರು ಮೃತಪಟ್ಟಿದ್ದಾರೆ.
ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.