Home ಜಿಲ್ಲಾ ಸುದ್ದಿ ಒಂದೇ ದಿನದಲ್ಲಿಅನುಕಂಪದ ಉದ್ಯೋಗ ನೀಡಿ ಮಾನವೀಯತೆ ಮೆರೆದ ತುಮಕೂರು ಜಿಲ್ಲಾಧಿಕಾರಿ!

ಒಂದೇ ದಿನದಲ್ಲಿಅನುಕಂಪದ ಉದ್ಯೋಗ ನೀಡಿ ಮಾನವೀಯತೆ ಮೆರೆದ ತುಮಕೂರು ಜಿಲ್ಲಾಧಿಕಾರಿ!

by Editor
0 comments
tumakur dc

ಅಪಘಾತದಲ್ಲಿ ನಿಧನರಾದ ಅಗ್ನಿಶಾಮಕ ಶಾಮಕ ವಾಹನ ಚಾಲಕನ ಪತ್ನಿಗೆ ಒಂದೇ ದಿನದಲ್ಲಿ  ಸರ್ಕಾರದಿಂದ ಆದೇಶ ತರಿಸಿಕೊಂಡು ಅನುಕಂಪದ ಉದ್ಯೋಗ ನೀಡುವ ಮೂಲಕ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾನವೀಯತೆ ಮೆರೆದಿದ್ದಾರೆ.

ತುರುವೇಕೆರೆ ತಾಲೂಕು ಡಿ ಕಲ್ಕೆರೆಯ ಪರಮೇಶ್ವರ್ ಅಗ್ನಿಶಾಮಕ ವಾಹನದ ಚಾಲಕರಾಗಿ ಉದ್ಯೋಗದಲ್ಲಿದ್ದರು.  ಕರ್ತವ್ಯ ಮುಗಿಸಿ ಮನೆಗೆ ಬರುವಾಗ 2023ರಲ್ಲಿ ಅಪಘಾತದಲ್ಲಿ ಮೃತರಾಗಿದ್ದರು. ಈ ಪ್ರಕರಣ ಇಲಾಖೆ ಹಂತದಲ್ಲಿ ಇತ್ಯರ್ಥವಾಗಿ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಇಂದು ಆದೇಶವಾಗಿತ್ತು. ತಕ್ಷಣ ಜಿಲ್ಲಾಧಿಕಾರಿಗಳು ತಮ್ಮ ಸಿಬ್ಬಂದಿ ಮೂಲಕ ಮೃತ ಪರಮೇಶ್ವರ್ ಅವರ ಪತ್ನಿ ರೋಹಿಣಿ ಅವರನ್ನು ಕಚೇರಿಗೆ ಕರೆದು ಮಾತನಾಡಿಸಿದರು.

ಮೂರು ವರ್ಷದ ತಮ್ಮ ಮಗು ಹಾಗೂ ಅತ್ತೆಯೊಂದಿಗೆ ಬಂದಿದ್ದ ರೋಹಿಣಿಯವರನ್ನು ತಮ್ಮ ಕಚೇರಿಯಲ್ಲೇ ಕೂರಿಸಿಕೊಂಡು ಕೇವಲ ಅರ್ಧ ತಾಸಿನಲ್ಲಿ ಅನುಕಂಪದ ಉದ್ಯೋಗದ ನೇಮಕಾತಿ ಆದೇವನ್ನು ಸಂತ್ರಸ್ಥ ಮಹಿಳೆಗೆ ನೀಡಿದರು.

ಕುಣಿಗಲ್ ತಾಲೂಕಿನಲ್ಲಿ ಡಿ ವರ್ಗದ ನೌಕರರಾಗಿ ನೇಮಕಾತಿಗೆ ಆದೇಶಿಸಿ ರೋಹಿಣಿಯವರಿಗೆ ಆದೇಶ ಪತ್ರ ನೀಡಿದರು. ನೇಮಕಾತಿ ಆದೇಶ ಸಿದ್ಧವಾಗುವವರೆಗೆ ಅರ್ಧ ತಾಸು ತಮ್ಮಕಚೇರಿಯಲ್ಲಿ  ಪಕ್ಕದಲ್ಲೇ ಕುರ್ಚಿಯಲ್ಲಿ ಕೂರಿಸಿಕೊಂಡ ಜಿಲ್ಲಾಧಿಕಾರಿಗಳು ಮಗುವಿಗೆ ಬಿಸ್ಕತ್ತು, ಚಾಕ್ಲೆಟ್ ನೀರು ತರಿಸಿ ಕೊಟ್ಟಿದ್ದು ಅವರ ಅಂತಃಕರಣದ ಭಾವವನ್ನು ತೋರಿತು.

banner

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ಬೀಡಾಡಿ ಹಸುಗಳ ಕುತ್ತಿಗೆಗೆ ಬೆಳಕಿನ ಪಟ್ಟಿ: ಯುಪಿಯಲ್ಲಿ ವಿನೂತನ ಪ್ರಯೋಗ! Bigg Boss 11 ಟಿಆರ್ ಪಿಯಲ್ಲಿ ಬಿಗ್ ಬಾಸ್ ಹೊಸ ದಾಖಲೆ: ಸುದೀಪ್ ಕೊಟ್ಟ ವಿವರ ಏನು? ಚಿಕ್ಕಮಗಳೂರು: ಇಬ್ಬರು ಮಕ್ಕಳ ಎದುರೇ ಪ್ರಿಯಕರನಿಂದ ಕೊಲೆಯಾದ ಗೃಹಿಣಿ! ಬಂಡುಕೋರರ ವಶಕ್ಕೆ ಡಾಮಸ್ಕೊ: ಸಿರಿಯಾ ಅಧ್ಯಕ್ಷ ಅಸ್ಸಾದ್ ಪರಾರಿ! 2ನೇ ಟೆಸ್ಟ್: ಆಸ್ಟ್ರೇಲಿಯಾ 10 ವಿಕೆಟ್ ಜಯಭೇರಿ, ಸರಣಿ 1-1ರಿಂದ ಸಮ ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಸುಭಾಷ್ ಘಾಯ್ ಆಸ್ಪತ್ರೆಗೆ ದಾಖಲು! ಶೋಕಾಸ್ ನೋಟಿಸ್‍ಗೆ ಯತ್ನಾಳ್ ಉತ್ತರ ಗಮನಿಸಿ ಮುಂದಿನ ನಿರ್ಧಾರ: ರಾಧಾಮೋಹನ್ ದಾಸ್ ಅಗ್ರವಾಲ್ ಕಿದ್ವಾಯಿಯಲ್ಲಿ ಒಂದೇ 24 ಲಕ್ಷ ಆರ್ ಟಿಪಿಸಿಆರ್ ಪರೀಕ್ಷೆ, 146 ಕೋಟಿ ಬಿಲ್: ಡಿಸಿಎಂ ಡಿಕೆ ಶಿವಕುಮಾರ್ ಶ್ರೀರಂಗ ಕುಡಿಯವ ನೀರು ಪೂರೈಸುವ ಯೋಜನೆ 2026ಕ್ಕೆ ಪೂರ್ಣ: ರಾಜ್ಯ ಸರ್ಕಾರ 2ನೇ ಟೆಸ್ಟ್: ಸೋಲಿನ ಸುಳಿಯಲ್ಲಿ ಭಾರತ