Thursday, May 14, 2026
Google search engine
Homeಕ್ರೀಡೆಕೊನೆರೂ ಹಂಪಿ ಮಣಿಸಿದ ದಿವ್ಯಾ ಮಹಿಳಾ ವಿಶ್ವ ಚೆಸ್ ಚಾಂಪಿಯನ್

ಕೊನೆರೂ ಹಂಪಿ ಮಣಿಸಿದ ದಿವ್ಯಾ ಮಹಿಳಾ ವಿಶ್ವ ಚೆಸ್ ಚಾಂಪಿಯನ್

ಬಾಟುಮಿ, ಜಾರ್ಜಿಯಾ: ಭಾರತದ 19 ವರ್ಷದ ಯುವ ಚೆಸ್‌ ಆಟಗಾರ್ತಿ ದಿವ್ಯಾ ದೇಶಮುಖ್ ಭಾರತದವರೇ ಆದ ಅಗ್ರಮಾನ್ಯ ಗ್ರ್ಯಾಂಡ್‌ ಮಾಸ್ಟರ್‌ ಕೊನೇರೂ ಹಂಪಿಯನ್ನು ಮಣಿಸಿ 2025ರ ಫೀಡೆ ಮಹಿಳಾ ವಿಶ್ವಕಪ್‌ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.

ಸೋಮವಾರ (ಜು.28) ಇಲ್ಲಿ ನಡೆದ ಫೈನಲ್‌ನ ರೋಚಕ ಟೈ-ಬ್ರೇಕ್‌ನಲ್ಲಿ ಭಾರತದ ಅಗ್ರಮಾನ್ಯ ಗ್ರ್ಯಾಂಡ್‌ ಮಾಸ್ಟರ್‌ ಕೊನೇರು ಹಂಪಿಯವರನ್ನು ಸೋಲಿಸಿ, ದಿವ್ಯಾ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.

ಈ ಗೆಲುವಿನೊಂದಿಗೆ, ದಿವ್ಯಾ ಭಾರತದ ನಾಲ್ಕನೇ ಮಹಿಳಾ ಗ್ರ್ಯಾಂಡ್‌ ಮಾಸ್ಟರ್ ಆಗಿ ಸ್ಥಾನ ಪಡೆದಿದ್ದಾರೆ ಮತ್ತು 2026 ರ ಮಹಿಳಾ ಕ್ಯಾಂಡಿಡೇಟ್ಸ್ ಟೂರ್ನಿಮೆಂಟ್‌ ಗೆ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ನಾಗಪುರದ ಈ ಯುವ ಪ್ರತಿಭೆ, ಸೆಮಿಫೈನಲ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಚೀನಾದ ತಾನ್ ಝಾಂಗ್‌ಯಿಯವರನ್ನು 1.5-0.5 ರಿಂದ ಸೋಲಿಸಿ ಫೈನಲ್‌ಗೆ ಪ್ರವೇಶಿಸಿದ್ದರು.

ಫೈನಲ್‌ಗೇರುವ ಪಯಣದಲ್ಲಿ ವಿಶ್ವ ಶ್ರೇಯಾಂಕದ 6ನೇ ಸ್ಥಾನದ ಝೂ ಜಿನರ್ ಮತ್ತು ಭಾರತದ ಗ್ರಾ÷್ಯಂಡ್‌ಮಾಸ್ಟರ್ ಹರಿಕಾ ದ್ರೋಣವಳ್ಳಿಯವರನ್ನು ಸೋಲಿಸಿದ ದಿವ್ಯಾ, ತಮ್ಮ ದಿಟ್ಟ ಆಟದ ಶೈಲಿಯಿಂದ ಎಲ್ಲರ ಗಮನ ಸೆಳೆದರು.

ಫೈನಲ್‌ನ ರೋಚಕ ಕ್ಷಣಗಳು

ಫೈನಲ್‌ನಲ್ಲಿ ದಿವ್ಯಾ ಮತ್ತು ಕೊನೇರು ಹಂಪಿಯವರ ನಡುವಿನ ಮೊದಲ ಎರಡು ಕ್ಲಾಸಿಕಲ್ ಪಂದ್ಯಗಳು ತೀವ್ರ ಸ್ಪರ್ಧೆಯ ನಂತರ ಡ್ರಾನಲ್ಲಿ ಕೊನೆಗೊಂಡವು. ಇದರಿಂದ ಫಲಿತಾಂಶವನ್ನು ನಿರ್ಧರಿಸಲು ರಾಪಿಡ್ ಟೈ-ಬ್ರೇಕ್‌ಗೆ ದಾರಿ ಮಾಡಿಕೊಟ್ಟಿತು.

ಟೈ-ಬ್ರೇಕ್‌ನ ಮೊದಲ ರಾಪಿಡ್ ಆಟದಲ್ಲಿ, ದಿವ್ಯಾ ತಮ್ಮ ಆಕ್ರಮಣಕಾರಿ ಆರಂಭಿಕ ಚಾಲನೆಯೊಂದಿಗೆ ಹಂಪಿಯವರ ರಕ್ಷಣೆಗೆ ಸವಾಲು ಎಸೆದರು. ಆದರೆ ಹಂಪಿ ತಿರುಗೇಟು ನೀಡಿ ಆ ಆಟವನ್ನು ಡ್ರಾನಲ್ಲಿ ಕೊನೆಗೊಳಿಸಿದರು.

ಎರಡನೇ ರಾಪಿಡ್ ಆಟದಲ್ಲಿ, ದಿವ್ಯಾ ತಮ್ಮ ಶಾಂತ ಚಿತ್ತ ಮತ್ತು ಚಾಣಾಕ್ಷ ಲೆಕ್ಕಾಚಾರದಿಂದ ಕಿಂಗ್ಸ್ ಇಂಡಿಯನ್ ಡಿಫೆನ್ಸ್‌ ನಲ್ಲಿ ಹಂಪಿಯವರನ್ನು ಮೀರಿಸಿದರು.

ಕೇವಲ ೩೮ ನಡೆಗಳಲ್ಲಿ ದಿವ್ಯಾ ನಿರ್ಣಾಯಕ ಗೆಲುವನ್ನು ದಾಖಲಿಸಿದರು. ಈ ಗೆಲುವು ದಿವ್ಯಾರಿಗೆ ಟೂರ್ನಮೆಂಟ್‌ನ ಟ್ರೋಫಿಯನ್ನು ತಂದಿತು, ಜೊತೆಗೆ ಭಾರತದ ಚೆಸ್ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಬರೆಯಿತು.

ಪ್ರಶಸ್ತಿ ಜೊತೆಗೆ ಜಿಎಂ ಪಟ್ಟ

ಈ ಗೆಲುವು ದಿವ್ಯಾರಿಗೆ 50,000 ಡಾಲರ್‌ಬಹುಮಾನದ ಜೊತೆಗೆ ಗ್ರ್ಯಾಂಡ್‌ ಮಾಸ್ಟರ್‌ ಪಟ್ಟವನ್ನು ತಂದಿದೆ. ಇದು ಫಿಡೇ ನೇರ ಪ್ರಶಸ್ತಿ ನಿಯಮದಡಿ ಸಾಧ್ಯವಾಗಿದೆ. `ನಾನು ಗೆದ್ದ ಕ್ಷಣವನ್ನು ವಿವರಿಸಲು ಪದಗಳಿಲ್ಲ. ಇದು ನನ್ನ ಕನಸಿನ ಗುರಿಯಾಗಿತ್ತು,” ಎಂದು ದಿವ್ಯಾ ತಮ್ಮ ಗೆಲುವಿನ ಬಳಿಕ ತಿಳಿಸಿದರು.

ಈ ಐತಿಹಾಸಿಕ ಸಾಧನೆಯನ್ನು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು `ಗಟ್ಟಿತನ ಮತ್ತು ಸಂಕಲ್ಪದ ಸಂಕೇತ” ಎಂದು ಶ್ಲಾಘಿಸಿದ್ದಾರೆ.

ಈ ಟೂರ್ನಮೆಂಟ್‌ನಲ್ಲಿ ಭಾರತದ ಚೆಸ್ ಶಕ್ತಿಯನ್ನು ಎತ್ತಿ ತೋರಿಸಿದ ದಿವ್ಯಾ ಮತ್ತು ಹಂಪಿ, ೨೦೨೬ ರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್‌ನಲ್ಲಿ ವಿಶ್ವ ಚಾಂಪಿಯನ್‌ಶಿಪ್‌ಗೆ ಸ್ಪರ್ಧಿಸಲಿದ್ದಾರೆ. ದಿವ್ಯಾರ ಈ ಗೆಲುವು ಭಾರತದ ಮಹಿಳಾ ಚೆಸ್‌ನ ಚಿನ್ನದ ಯುಗವನ್ನು ಮತ್ತಷ್ಟು ಬಲಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments