Thursday, May 14, 2026
Google search engine
Homeರಾಜ್ಯಧರ್ಮಸ್ಥಳದಲ್ಲಿ ಸಾಮೂಹಿಕ ಹೂತಿಟ್ಟ ಪ್ರಕರಣ: ನೇತ್ರಾವತಿ ನದಿ ಬಳಿ ಸೇರಿ 15 ಕಡೆ ಗುರುತು ಪತ್ತೆ

ಧರ್ಮಸ್ಥಳದಲ್ಲಿ ಸಾಮೂಹಿಕ ಹೂತಿಟ್ಟ ಪ್ರಕರಣ: ನೇತ್ರಾವತಿ ನದಿ ಬಳಿ ಸೇರಿ 15 ಕಡೆ ಗುರುತು ಪತ್ತೆ

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ ಐಟಿ ಪೊಲೀಸರು ಸ್ಥಳ ಮಹಜರು ಪ್ರಕ್ರಿಯೆ ಆರಂಭಿಸಿದ್ದು, ಶವ ಹೂತಿಟ್ಟಿರುವ ಬಗ್ಗೆ ಹೇಳಿಕೆ ನೀಡಿದ್ದ ವ್ಯಕ್ತಿ 15 ಕಡೆ ಸ್ಥಳ ಗುರುತು ಹಿಡಿದಿದ್ದಾರೆ.

ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಮಧ್ಯಭಾಗದ ಕಾಡು, ಸ್ನಾನಘಟ್ಟದ ಎಡಭಾಗದ ಅರಣ್ಯ ಭಾಗದಲ್ಲಿ ವ್ಯಕ್ತಿ 20 ಸ್ಥಾನಗಳನ್ನು ಗುರುತಿಸಿದ್ದಾರೆ. ಗುರುತು ಹಿಡಿಯಲಾದ 15 ಸ್ಥಾನಗಳ ಪೈಕಿ 8 ಸ್ಥಳಗಳು ನೇತ್ರಾವತಿ ನದಿ ಸುತ್ತಮುತ್ತ ಆಗಿದ್ದರೆ, ಉಳಿದ 9ರಿಂದ 12 ಸ್ಥಳಗಳು ನದಿಗೆ ಸಮೀಪವಾದ ಹೆದ್ದಾರಿಯಲ್ಲಿ ಆಗಿವೆ.

ಧರ್ಮಸ್ಥಳದಲ್ಲಿ ಒಳಚರಂಡಿ ಕಾರ್ಮಿಕನಾಗಿದ್ದ ವ್ಯಕ್ತಿ 1998ರಿಂದ 2014ರ ಅವಧಿಯಲ್ಲಿ ನೂರಾರು ಶವಗಳನ್ನು ಈ ಭಾಗದಲ್ಲೇ ನಾನು ಹೂತಿದ್ದೇನೆ ಎಂದು ಹೇಳಿಕೆ ನೀಡಿದ್ದು, ಧರ್ಮಸ್ಥಳದಲ್ಲಿ ಸಾಮೂಹಿಕ ಮಹಿಳೆಯರ ಶವಗಳನ್ನು ಹೂತಿದ್ದಾಗಿ ನೀಡಿದ ಹೇಳಿಕೆಯಿಂದ ಸಂಚಲನ ಸೃಷ್ಟಿಸಿದೆ.

ಎರಡೂ ಸ್ಥಳಗಳು 1 ಕಿ.ಮೀ. ವ್ಯಾಪ್ತಿಯಲ್ಲೇ ಇವೆ. ಎಸ್‌ ಐಟಿ ಅಧಿಕಾರಿಗಳು ಸುಮಾರು 2 ಗಂಟೆಗಳ ಕಾಲ ಮಹಜರು ಪರಿಶೀಲನೆ ನಡೆದಿದೆ. ಒಂದು ಅಜುಕುರ್ಕಿ ಕಡೆ ಹರಿಯವ ನದಿ ಆಗಿದ್ದರೆ, ಮತ್ತೊಂದು ಕನ್ಯಾಡಿ ಹೋಗುವ ನದಿ ಪಕ್ಕದ ರಸ್ತೆಯಾಗಿದೆ.

ದೂರುದಾರ ತಂದಿರುವ ತಲೆಬುರುಡೆಯಲ್ಲಿದ್ದ ಮಣ್ಣಿನ ತಾಳೆಗಾಗಿ ನೇತ್ರಾವತಿ ಸ್ನಾನಘಟ್ಟದ ಅರಣ್ಯ ಪ್ರದೇಶದಲ್ಲಿ ಮಣ್ಣನ್ನು ಎಸ್‌ಐಟಿ ಸಂಗ್ರಹಿಸಲಾಗಿದೆ. ನಂತರ ದೂರುದಾರನನ್ನು ಧರ್ಮಸ್ಥಳ ಪೊಲೀಸ್ ಠಾಣೆಗೆ ಎಸ್‌ಐಟಿ ತಂಡ ಕರೆದೊಯ್ದಿದೆ.

ಎಸ್‌ಐಟಿ ವಿಚಾರಣೆ ವೇಳೆ ದೂರುದಾರ, ತಲೆ ಬುರುಡೆಯನ್ನು ನೇತ್ರಾವತಿ ಸ್ನಾನಘಟ್ಟದ ಬಳಿಯಿಂದ ಹೊರತೆಗೆದಿರುವುದಾಗಿ ತಿಳಿಸಿದ್ದ. ಈ ಹಿನ್ನೆಲೆ ಎಸ್‌ಐಟಿ ತಂಡವು ವಿಧಿ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು, ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಳಿಕ ಸ್ಥಳ ಮಹಜರು ಆರಂಭಿಸಿದ್ದರು.

ಎಸ್‌ಐಟಿ ಅಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಮತ್ತು ಎಸ್ಪಿ ಸಿ.ಎ.ಸೈಮನ್, ಅರಣ್ಯ ಇಲಾಖೆಯ ರೇಂಜರ್ ತ್ಯಾಗರಾಜ್ ಸೇರಿ ಇನ್ನಿತರರ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments