ಬೆಂಗಳೂರು:ಮದ್ಯದ ಮೇಲಿನ ತೆರಿಗೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ರೂಪಿಸಿರುವ ಆಲ್ಕೊಹಾಲ್ ಇನ್ ಬೇವರೇಜ್ ಆಧರಿತ ಹೊಸ ಅಬಕಾರಿ ನೀತಿಯು ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ.
ನೂತನ ನೀತಿ ಜಾರಿಯಿಂದ ಕಳೆದ 6 ದಶಕಗಳಿಂದ ಜಾರಿಯಲ್ಲಿದ್ದ ಬಲ್ಕ್ ಲೀಟರ್ ಆಧರಿತ ತೆರಿಗೆ ವ್ಯವಸ್ಥೆಗೆ ತೆರೆ ಬಿದ್ದಿದ್ದು, ಕರ್ನಾಟಕವು ದೇಶದಲ್ಲೇ ಮೊದಲ ಬಾರಿಗೆ ಬಲ್ಕ್ ಆಧರಿತ ತೆರಿಗೆ ನೀತಿಯನ್ನು ಅನುಷ್ಠಾನಗೊಳಿಸುತ್ತಿರುವ ರಾಜ್ಯವಾಗಿದೆ.
ಆಲೋಹಾಲ್ ಇನ್ ಬೇವರೇಜ್ – ವಿವಿಧ ಮದ್ಯದಲ್ಲಿನ ಮದ್ಯದ ಪ್ರಮಾಣ ಆಧರಿತ ಹೊಸ ಅಬಕಾರಿ ನೀತಿಯನ್ನು ಜಾರಿಗೆ ತರಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ.
ಈ ಹೊಸ ನೀತಿಯು ಇಂದಿನಿಂದ ಸೋಮವಾರದಿಂದ ರಾಜ್ಯಾದ್ಯಂತ ಜಾರಿಗೆ ಬಂದಿದೆ. ಈ ಮೂಲಕ ಕಳೆದ 6 ದಶಕಗಳಿಂದ ಜಾರಿಯಲ್ಲಿರುವ ಬಲ್ ಲೀಟರ್ ಆಧರಿತ ತೆರಿಗೆ ಪದ್ಧತಿ ವ್ಯವಸ್ಥೆಯು ಮುಗಿಯಲಿದೆ.
ಇದರಿಂದ ಮದ್ಯದ ಬೆಲೆ ಏರಿಕೆ ಆಗಲಿದೆ. ಕರ್ನಾಟಕದಲ್ಲಿ ಈಗಾಗಲೇ ಮದ್ಯದ ಬೆಲೆಯು ದುಬಾರಿಯಾಗಿದೆ. ಸರ್ಕಾರವು ಏಪ್ರಿಲ್ 18ರಂದು ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕರಿಂದ ಆಕ್ಷೇಪಣೆ ಹಾಗೂ ಸಲಹೆಗಳನ್ನು ಆಹ್ವಾನಿಸಿತ್ತು. ಬಂದ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕ ಕರ್ನಾಟಕ ಅಬಕಾರಿ (ಅಬಕಾರಿ ಸುಂಕ ಮತ್ತು ಶುಲ್ಕ) (2ನೇ ತಿದ್ದುಪಡಿ) ನಿಯಮಗಳು-2026 ಅನ್ನು ಅಂತಿಮಗೊಳಿಸಲಾಗಿತ್ತು.
ಹೊಸ ನೀತಿಯ ಪ್ರಕಾರ, ಬ್ರಾಂಡೆ, ಎಸ್ಕಿ, ರಮ್, ಜನ್, ಬಿಯರ್, ವೈನ್ ಸೇರಿದಂತೆ ವಿವಿಧ ಮದ್ಯಗಳಲ್ಲಿ ಇರುವ ಆಸ್ಕೋಹಾಲ್ ಪ್ರಮಾಣ ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಫ್ಲ್ಯಾಬ್‌ಗಳನ್ನು ಕಡಿತಗೊಳಿಸಿ ಕೇವಲ 8 ಫ್ಲ್ಯಾಬ್‌ಗಳಿಗೆ ಸೀಮಿತಗೊಳಿಸಲಾಗಿದೆ.
ಅಬಕಾರಿ ಇಲಾಖೆಯ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸುವ ಕಡಿಮೆ ದರದ ಮದ್ಯ ವಿಭಾಗದ ಮೇಲೆ ಈ ನೀತಿಯ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಲಿದೆ. ವಿಶೇಷವಾಗಿ ಹೆಚ್ಚು ಮಾರಾಟವಾಗುವ 180 ಮಿಲಿ ಟೆಟ್ರಾ ಪ್ಯಾಕ್‌ಗಳ ವಿಸ್ಕಿ, ರಮ್, ಬ್ರಾಂಡಿ, ಜಿನ್ ಹಾಗೂ ವೋಡ್ಕಾ ಬೆಲೆ ಕನಿಷ್ಠ ಶೇ.20ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದೇ ವೇಳೆ ಪ್ರೀಮಿಯಂ ಮದ್ಯ ಬ್ರಾಂಡ್‌ಗಳ ಬೆಲೆ ಶೇ.16 ರಿಂದ ಶೇ.20ವರೆಗೆ ಇಳಿಕೆಯಾಗುವ ಸಾಧ್ಯತೆ ಇದೆ. ಇದರಿಂದ ಬಹುರಾಷ್ಟ್ರೀಯ ಪ್ರೀಮಿಯಂ ಬ್ರಾಂಡ್‌ಗಳಿಗೆ ಲಾಭವಾಗಬಹುದು. ಆದರೆ, ಸ್ಥಳೀಯ ಡಿಸ್ಟಿಲರಿಗಳು ಮತ್ತು ಪ್ರಾದೇಶಿಕ ಉತ್ಪಾದಕರಿಗೆ ಹಿನ್ನಡೆ ಉಂಟಾಗಬಹುದು ಎಂದು ಉದ್ಯಮ ವಲಯ ಆತಂಕ ವ್ಯಕ್ತಪಡಿಸಿದೆ. ಕಡಿಮೆ ಬೆಲೆಯ ಭಾರತೀಯ ಮದ್ಯ ಉತ್ಪಾದಕರಿಗೆ ಈ ಹೊಸ ವ್ಯವಸ್ಥೆ ಹೊರೆ ಆಗಬಹುದು. ಸ್ಥಳೀಯ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಯಾವ ಮದ್ಯ ಏರಿಕೆ ?
ಬ್ರಾಂಡಿ, ವಿಸ್ಕಿ, ರಮ್, ಜಿನ್, ಬಿಯರ್ ಹಾಗೂ ವೈನ್ ಸೇರಿದಂತೆ ವಿವಿಧ ಮದ್ಯಗಳ ಬೆಲೆ ಏರಿಕೆಯಾಗಲಿದೆ. ಈ ಮದ್ಯದಲ್ಲಿರುವ ಆಲೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲಾಗುತ್ತದೆ. ಇದರಿಂದ ಈಗಿರುವ 16 ಅಬಕಾರಿ ಫ್ಲ್ಯಾಬ್‌ಗಳನ್ನು ಕಡಿತಗೊಳಿಸಿ ಕೇವಲ 8 ಸ್ಪ್ಯಾಬ್‌ಗಳಿಗೆ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ಅಬಕಾರಿ ಇಲಾಖೆಯ ಆದಾಯದಲ್ಲಿ ಪ್ರಮುಖ ಪಾತ್ರ ವಹಿಸುವ ಕಡಿಮೆ ದರದ ಮದ್ಯ ವಿಭಾಗದ ಮೇಲೆ ಈ ನೀತಿಯ ಪರಿಣಾಮ ಹೆಚ್ಚಾಗಿ ಆಗುವ ಸಾಧ್ಯತೆಯಿದೆ.



