Monday, June 1, 2026
Google search engine
Homeಮನರಂಜನೆವಿಮಾನದಲ್ಲಿ ಮಲ್ಲಿಗೆ ಮುಡಿದ `ದೃಶ್ಯಂ’ ನಟಿಗೆ ಬಿತ್ತು 1 ಲಕ್ಷ ರೂ. ದಂಡ!

ವಿಮಾನದಲ್ಲಿ ಮಲ್ಲಿಗೆ ಮುಡಿದ `ದೃಶ್ಯಂ’ ನಟಿಗೆ ಬಿತ್ತು 1 ಲಕ್ಷ ರೂ. ದಂಡ!

ವಿಮಾನದಲ್ಲಿ ಪ್ರಯಾಣಿಸುವಾಗ ಮಲ್ಲಿಗೆ ಹೂವು ಮುಡಿದ ಕನ್ನಡದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿರುವ ಮಲಯಾಳಂನ ಖ್ಯಾತ ನಟಿ ನವ್ಯಾ ನಾಯರ್ ಗೆ 1 ಲಕ್ಷ ರೂ. ದಂಡ ವಿಧಿಸಲಾಗಿದೆ.

ಮೆಲ್ಬೋರ್ನ್ ಏರ್​​​ಪೋರ್ಟ್​​ನಲ್ಲಿ ತೊಂದರೆಗೆ ಸಿಲುಕಿದ ನಟಿ: ಹೌದು, ಇತ್ತೀಚೆಗೆ ನವ್ಯಾ ನಾಯರ್ ಮಲ್ಲಿಗೆಯನ್ನು ಹೊತ್ತೊಯ್ದಿದ್ದಕ್ಕಾಗಿ ಮೆಲ್ಬೋರ್ನ್ ಏರ್​​​ಪೋರ್ಟ್​​ನಲ್ಲಿ ತೊಂದರೆಗೆ ಸಿಲುಕಿದರು. ತಮ್ಮ ಬಳಿ ಮಲ್ಲಿಗೆ ಇದ್ದದ್ದಕ್ಕಾಗಿ ಆಸ್ಟ್ರೇಲಿಯಾ ವಿಮಾನ ನಿಲ್ದಾಣದ ಸಿಬ್ಬಂದಿಯಿಂದ ಭಾರಿ ದಂಡ ವಿಧಿಸಲಾಯಿತು ಎಂದು ಹೇಳಿಕೊಂಡಿದ್ದಾರೆ.

ಮಲಯಾಳಿ ಅಸೋಸಿಯೇಷನ್ ​​ಆಫ್ ವಿಕ್ಟೋರಿಯಾ ಆಯೋಜಿಸಿದ್ದ ‘ಓಣಂ ಆಚರಣೆ’ಯಲ್ಲಿ ಭಾಗವಹಿಸಲು ನವ್ಯಾ ಮೆಲ್ಬೋರ್ನ್‌ಗೆ ತೆರಳಿದ್ದಾಗ ಈ ಘಟನೆ ನಡೆದಿದೆ. ನವ್ಯಾ ನಾಯರ್ ಕನ್ನಡದಲ್ಲಿ ದೃಶ್ಯಂ, ಗಜ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ತಾಜಾ ಹೂವುಗಳು ಮತ್ತು ಸಸ್ಯ ಸಾಮಗ್ರಿ ಇಟ್ಟುಕೊಳ್ಳುವುದಕ್ಕೆ ಇದೆ ಕಟ್ಟುನಿಟ್ಟಿನ ನಿಷೇಧ: ವಿಮಾನ ನಿಲ್ದಾಣದ ಅಧಿಕಾರಿಗಳು ನಟಿಯ ಬ್ಯಾಗ್​ನಲ್ಲಿ ಸರಿ-ಸುಮಾರು 15 ಸೆಂಟಿಮೀಟರ್​ ಉದ್ದದ ಮಲ್ಲಿಗೆ ಹೂವಿನ ಮಾಲೆ ಇದ್ದದ್ದನ್ನು ಕಂಡುಕೊಂಡರು. ಆಸ್ಟ್ರೇಲಿಯಾದ ಜೈವಿಕ ಭದ್ರತೆ ಮತ್ತು ಕಸ್ಟಮ್ಸ್ ಕಾನೂನುಗಳ ಅಡಿಯಲ್ಲಿ, ತಾಜಾ ಹೂವುಗಳು ಮತ್ತು ಸಸ್ಯ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಈ ನಿಮಯ ಉಲ್ಲಂಘನೆಯು ದೇಶದ ಕೃಷಿ ಮತ್ತು ಪರಿಸರಕ್ಕೆ ಗಂಭೀರ ಅಪಾಯವನ್ನುಂಟು ಮಾಡಬಹುದು ಎಂಬ ಕಾರಣದಿಂದ, ಆಸ್ಟ್ರೇಲಿಯಾ ಕೃಷಿ ಇಲಾಖೆಯು ನಟಿಯ ಮೇಲೆ 1980 ಆಸ್ಟ್ರೇಲಿಯನ್ ಡಾಲರ್ (ಸುಮಾರು 1.14 ಲಕ್ಷ ರೂ.) ದಂಡ ವಿಧಿಸಿದೆ.

ನವ್ಯಾ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ದಂಡವನ್ನು ಸ್ವಯಂ ಅಪಹಾಸ್ಯ ಮಾಡಿದ್ದಾರೆ. ವಿಡಿಯೋದಲ್ಲಿ, ಅವರು ವಿಮಾನ ನಿಲ್ದಾಣದಲ್ಲಿ ಆಹಾರ ಸೇವಿಸುವುದು, ವಿಮಾನ ಹತ್ತುವುದು, ಶಾಪಿಂಗ್ ಮಾಡುವುದು ಮತ್ತು ಮಲ್ಲಿಗೆ ಮುಡಿದು, ಸಾಂಪ್ರದಾಯಿಕ ಕೇರಳ ಸೀರೆಯಲ್ಲಿ ಆಕರ್ಷಕವಾಗಿ ಓಡಾಡುತ್ತಿರುವುದನ್ನು ಕಾಣಬಹುದು. “ನನಗೆ ದಂಡ ವಿಧಿಸುವ ಮೊದಲ ದೃಶ್ಯಗಳು” ಎಂದು ಕ್ಯಾಪ್ಷನ್​ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments