Monday, July 20, 2026
Google search engine
Homeಮನರಂಜನೆಬೆಂಗಳೂರಿನಲ್ಲಿ 'ಸರಿಗಮಪ' ಆಡಿಷನ್; ಸಂಗೀತ ಪ್ರತಿಭೆಗಳಿಗೆ ಸುವರ್ಣಾವಕಾಶ!

ಬೆಂಗಳೂರಿನಲ್ಲಿ ‘ಸರಿಗಮಪ’ ಆಡಿಷನ್; ಸಂಗೀತ ಪ್ರತಿಭೆಗಳಿಗೆ ಸುವರ್ಣಾವಕಾಶ!

ಜೀ ಟಿವಿಯ ಜನಪ್ರಿಯ ಸಂಗೀತ ಕಾರ್ಯಕ್ರಮ ‘ಸರಿಗಮಪ’ ಹೊಸ ಸೀಸನ್‌ನೊಂದಿಗೆ ಮರಳಿ ಬರುತ್ತಿದೆ. ಸಂಗೀತಕ್ಕೆ ಯಾವುದೇ ಭಾಷೆಯ ಗಡಿಗಳಿಲ್ಲ ಎಂಬ ಸಂದೇಶವನ್ನು ಈ ಬಾರಿಯ ಪ್ರೋಮೋದಲ್ಲಿ ಅದ್ಭುತವಾಗಿ ತೋರಿಸಲಾಗಿದೆ. ಈ ಸೀಸನ್‌ನಲ್ಲಿ 100ಕ್ಕೂ ಹೆಚ್ಚು ಕಲಾವಿದರು ಸೇರಿ ಸಂಗೀತದ ಹಬ್ಬವನ್ನೇ ಸೃಷ್ಟಿಸಲಿದ್ದಾರೆ. ಜೊತೆಗೆ ಈ ಬಾರಿ ಬೆಂಗಳೂರಿನಲ್ಲಿ ಕೂಡ ಆಡಿಷನ್ ನಡೆಯಲಿದ್ದು, ಸಂಗೀತ ಪ್ರಿಯರಿಗೆ ಅದ್ಬುತ ಅವಕಾಶ ಸಿಗಲಿದೆ.

ಈಗಾಗಲೇ ವಾರಣಾಸಿ, ಲಕ್ನೋ, ದೆಹಲಿ, ಚಂಡೀಗಢ, ಜೈಪುರ ಮತ್ತು ಮುಂಬೈನಲ್ಲಿ ನಡೆದ ಆಡಿಷನ್‌ಗಳಿಗೆ ಸಾವಿರಾರು ಸಿಂಗರ್ಸ್ ಭಾಗವಹಿಸಿ ಭರ್ಜರಿ ಬೆಂಬಲ ನೀಡಿದ್ದಾರೆ. ಈಗ ಈ ಹುಡುಕಾಟ ಮುಂದಿನ ಹಂತಕ್ಕೆ ತಲುಪಿದ್ದು, ಬೆಂಗಳೂರು, ನಾಗ್ಪುರ ಮತ್ತು ಇಂದೋರ್‌ನಲ್ಲಿ ಆಡಿಷನ್‌ಗಳು ನಡೆಯಲಿವೆ.

ಆಡಿಷನ್ ಸ್ಥಳಗಳ ವಿವರ:

ಬೆಂಗಳೂರು (ಜುಲೈ 19): ಯುನೈಟೆಡ್ ಮಿಷನ್ ಡಿಗ್ರಿ ಕಾಲೇಜು, ಪಿ. ಕಳಿಂಗ ರಾವ್ ರಸ್ತೆ, ಸಂಪಂಗಿರಾಮನಗರ (ಟೌನ್ ಹಾಲ್ ಬಳಿ), ಬೆಂಗಳೂರು – 560027.

ನಾಗ್ಪುರ (ಜುಲೈ 18): ವಿಬ್ಗೈರ್ ವರ್ಲ್ಡ್ ಸ್ಕೂಲ್, 103, ಎನ್ ಅಂಬಾಜರಿ ರಸ್ತೆ, ನ್ಯೂ ರಾಮ್‌ದಸ್‌ಪೇಠ್, ನಾಗ್ಪುರ, ಮಹಾರಾಷ್ಟ್ರ – 440010.

ಇಂದೋರ್ (ಜುಲೈ 19): ಆದರ್ಶ ಶಿಶು ವಿಹಾರ್ ಹೈಯರ್ ಸೆಕೆಂಡರಿ ಸ್ಕೂಲ್, 1398/1, ಬಿಚೋಲಿ ರಸ್ತೆ, ಬಂಗಾಳಿ ಸ್ಕ್ವೇರ್ ಹತ್ತಿರ, ಇಂದೋರ್ – 452016.

ಆಸಕ್ತರು 9152915218 ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿ ನೋಂದಾಯಿಸಿಕೊಳ್ಳಬಹುದು. ಬಳಿಕ ನಿಮಗೆ SMS ಮೂಲಕ ಆಡಿಷನ್ ಲಿಂಕ್ ಸಿಗುತ್ತದೆ. ಅಥವಾ 8655780787 ಈ ಸಂಖ್ಯೆಗೆ ವಾಟ್ಸಾಪ್ (WhatsApp) ಮೂಲಕ ನಿಮ್ಮ ವಿವರಗಳು ಹಾಗೂ ಎರಡು ಆಡಿಯೋ ಅಥವಾ ವಿಡಿಯೋ ಕ್ಲಿಪ್‌ಗಳನ್ನು ಕಳುಹಿಸಿ ಆಡಿಷನ್ ನೀಡಬಹುದು. ಇದರ ಜೊತೆಗೆ, ನೀವು ನೇರವಾಗಿ saregamapaauditions.zee5.com ವೆಬ್‌ಸೈಟ್‌ಗೂ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments