Monday, June 1, 2026
Google search engine
Homeರಾಜ್ಯರಾಜ್ಯದಲ್ಲಿ ಮಳೆಗೆ 5.20 ಲಕ್ಷ ಹೆಕ್ಟೇರ್ ಬೆಳೆ ನಾಶ, 111 ಮಂದಿ ಮರಣ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮಳೆಗೆ 5.20 ಲಕ್ಷ ಹೆಕ್ಟೇರ್ ಬೆಳೆ ನಾಶ, 111 ಮಂದಿ ಮರಣ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಮುಂಗಾರು ಮಳೆಗೆ ಇದುವರೆಗೆ 5,20,863 ಹೆಕ್ಟೇರ್ ಬೆಳೆ ಹಾನಿ ಉಂಟಾಗಿದ್ದು, 111 ಮಂದಿ ಮೃತಪಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಏಪ್ರಿಲ್ 1ರಿಂದ ಸೆಪ್ಟೆಂಬರ್ 31ರ ಅವಧಿಯಲ್ಲಿ ರಾಜ್ಯದಲ್ಲಿ 5,20,863 ಹೆಕ್ಟೇರ್ ಬೆಳೆ ಹಾನಿ ಆಗಿದೆ ಎಂದರು.

ಬೀದರ್, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ಹಾವೇರಿ, ವಿಜಯಪುರ, ಕಲಬುರಗಿಯಲ್ಲಿ ಈ ಬಾರಿ ಅಧಿಕ ಮಳೆಯಾಗಿದ್ದರಿಂದ ಈ ಭಾಗದಲ್ಲಿ5,19,500 ಈ ಭಾಗದಲ್ಲಿ ಬೆಳಹಾನಿ ಸಂಭವಿಸಿದೆ ಎಂದರು.

ರಾಜ್ಯಾದ್ಯಂತ ಸುರಿದ ಭಾರೀ ಮಳೆಯಿಂದ 111 ಮಂದಿ ಅಸುನೀಗಿದ್ದು, 5 ಲಕ್ಷ ರೂ.ನಂತೆ ಜೀವಹಾನಿಯಾದ ಎಲ್ಲಾ ಕುಟುಂಬಗಳಿಗೆ ಪರಿಹಾರ ನೀಡಲಾಗಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ 5.5 ಕೋಟಿ ರೂ. ಪಾವತಿಸಿದೆ. 1110 ಜಾನುವಾರು ಜೀವಹಾನಿಯಾಗಿದೆ. 1.52 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಅವರು ವಿವರಿಸಿದರು.

ರಾಜ್ಯದಲ್ಲಿ ಮಹಾಮಳೆಗೆ 651 ಮನೆಗಳು ಸಂಪೂರ್ಣ ಹಾಗೂ 9087 ಮನೆಗಳು ಭಾಗಶಃ ಹಾನಿಗೀಡಾಗಿದ್ದು, ಅಂದಾಜು 24.30 ಲಕ್ಷ ರೂ. ಪರಿಹಾರ ನೀಡಲಾಗಿದೆ.

ಮೂಲಭೂತ ಸೌಕರ್ಯಗಳಿಗೆ ಹಾನಿಯಾಗಿಯಾಗಿದ್ದು, 687 ರಾಜ್ಯ ಹೆದ್ದಾರಿ, 1083 ಜಿಲ್ಲಾ ಹೆದ್ದಾರಿ

55558 ಗ್ರಾಮೀಣ ರಸ್ತೆಗಳು, 656 ಸೇತುವೆ ಮತ್ತು ಕಟ್ಟಡಗಳು, 1877 ಶಾಲಾ ಕಟ್ಟಡಗಳು, 160 ಪ್ರಾಥಮಿಕ ಾರೋಗ್ಯ ಕೇಂದ್ರ, 1018 ಅಂಗನವಾಡಿ, 20,280 ವಿದ್ಯುತ್ ಕಂಬಗಳು ಹಾಗೂ 889 ಟ್ರಾನ್ಸ್ ಫಾರ್ಮರ್ ಗಳು ಹಾನಿಗೀಡಾಗಿವೆ ಎಂದು ಅವರು ಹೇಳಿದರು.

ತುಂಗಾಭದ್ರ ಡ್ಯಾಂ ಹೊರತುಪಡಿಸಿ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕಾವೇರಿ ಹಾಗೂ ಕೃಷ್ಣ ಜಲಾಶಯಗಳು ಭರ್ತಿಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments