Monday, June 29, 2026
Google search engine
Homeಮನರಂಜನೆದಿನದಲ್ಲೇ 500 ಕೋಟಿ ಬಾಚಿ ದಾಖಲೆ ಬರೆದ ದುರಂಧರ್‌ -2

ದಿನದಲ್ಲೇ 500 ಕೋಟಿ ಬಾಚಿ ದಾಖಲೆ ಬರೆದ ದುರಂಧರ್‌ -2

ರಣವೀರ್‌ ಸಿಂಗ್‌ ಅಭಿನಯಿಸಿ ಆದಿತ್ಯ ಧಾರ್‌ ನಿರ್ದೇಶಿಸಿದ ದುರಂಧರ್-‌2 ಚಿತ್ರ ಭರ್ಜರಿ ಆರಂಭ ಪಡೆದಿದ್ದು, ಮೊದಲ ವಾರಾಂತ್ಯ ಮುಗಿಯುವ ಮುನ್ನವೇ 500 ಕೋಟಿ ರೂ. ಕ್ಲಬ್‌ ಸೇರಿಕೊಂಡಿದ್ದು, ಹೊಸ ದಾಖಲೆಗಳನ್ನು ಬರೆಯುತ್ತಿದೆ.

ಧುರಂದರ್‌ -2 ಚಿತ್ರ ಬಿಡುಗಡೆ ಆದ ಮೂರೇ ದಿನದಲ್ಲಿ 500 ಕೋಟಿ ರೂ. ಗಳಿಸಿದೆ. ಭಾರತದಲ್ಲಿ 354 ಕೋಟಿ ರೂ. ಗಳಿಸಿದರೆ ವಿದೇಶದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದೆ ಎಂದು ಹೇಳಲಾಗಿದ್ದು, 500 ಕೋಟಿ ರೂ. ಕ್ಲಬ್‌ ಸೇರಿದೆ.

ಬಿಡುಗಡೆಯಾದ ಮೊದಲೆರಡು ದಿನಗಳಲ್ಲಿ ಭಾರತದಲ್ಲಿ ಸಿನಿಮಾ 226.27 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 113 ಕೋಟಿ ರೂ. ಸಂಗ್ರಹಿಸಿದ ದುರಂಧರ್-‌೨ ಒಟ್ಟು 339.27 ಕೋಟಿ ರೂ. ಸಂಗ್ರಹವಾಗಿದೆ. ಎಲ್ಲಾ ಭಾಷೆಗಳಲ್ಲೂ ಸೇರಿ ಒಟ್ಟಾರೆ 354 ಗಳಿಸಿದೆ.

ವಿಶ್ವಾದ್ಯಂತ 501.04 ಕೋಟಿ ರೂ. ಗಳಿಕೆ ಮಾಡಿದೆ. ಉತ್ತರ ಅಮೆರಿಕಾದ ಬಾಕ್ಸ್ ಆಫೀಸ್‌ನಲ್ಲಿ (ಯುಎಸ್ಎ ಮತ್ತು ಕೆನಡಾ) ಅಭೂತಪೂರ್ವ ಪ್ರದರ್ಶನ ಕಾಣುತ್ತಿದೆ. ಇಲ್ಲಿ ಬಿಡುಗಡೆಯಾದ ಮೂರನೇ ದಿನದಂದು ಚಿತ್ರದ ಒಂದು ದಿನದ ಗಳಿಕೆ $4.0 ಮಿಲಿಯನ್ (35 ಕೋಟಿ ರೂ.) ನಿಂದ $4.5 ಮಿಲಿಯನ್ (40 ಕೋಟಿ ರೂ.) ತಲುಪಿದೆ.

ಧುರಂಧರ್ 2 ಈಗಾಗಲೇ ಕಳೆದ ಕೆಲವು ವರ್ಷಗಳ ಹಿಂದಿನ ಸಿನಿಮಾಗಳ ದೊಡ್ಡ ಹಿಟ್‌ಗಳನ್ನು ಮೀರಿಸಿದೆ. ಬಿಡುಗಡೆಯಾದ ಮೊದಲ ಎರಡು ದಿನಗಳಲ್ಲಿ ಈ ಚಿತ್ರವು 226.27 ಕೋಟಿ ರೂ. ಗಳಿಸಿದ್ದರೂ, ಶಾರುಖ್ ಖಾನ್ ಅವರ ಜವಾನ್, ಪಠಾಣ್ ಮತ್ತು ರಣಬೀರ್ ಕಪೂರ್ ಅವರ ಅನಿಮಲ್ ನಂತಹ ಹಿಟ್ ಚಿತ್ರಗಳನ್ನು ಹಿಂದಿಕ್ಕಿದೆ. ಪಠಾಣ್ ಮತ್ತು ಜವಾನ್ ಬಿಡುಗಡೆಯಾದ ಎರಡು ದಿನಗಳಲ್ಲಿ ಕ್ರಮವಾಗಿ 127.50 ಕೋಟಿ ಮತ್ತು 128.23 ಕೋಟಿ ರೂ. ಗಳಿಸಿದರೆ, ಅನಿಮಲ್ 130.07 ಕೋಟಿ ರೂ. ಗಳಿಸಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments