ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಿಂದ 11ನೇ ವಾರ ಕಿರುತೆರೆ ನಟ ಶಿಶಿರ್ ಶಾಸ್ತ್ರಿ ಹೊರಬಿದ್ದಿದ್ದಾರೆ. ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ ಗೋಲ್ಡ್ ಸುರೇಶ್ ಹೊರನಡೆದಿದ್ದಾರೆ.
ಕಳೆದ ನಾಲ್ಕೈದು ವಾರಗಳಿಂದ ಕೊನೆಯ ಹಂತಕ್ಕೆ ಬಂದು ಪಾರಾಗುತ್ತಿದ್ದ ಶಿಶಿರ್ ಶಾಸ್ತ್ರೀ, ಬಿಗ್ ಬಾಸ್ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳಬೇಕು ಎಂದು ಆಸೆಪಟ್ಟಿದ್ದರು. ವಿಪರ್ಯಾಸ ಅಂದರೆ ಹುಟ್ಟುಹಬ್ಬ ಆಚರಿಸಿಕೊಂಡ ಬೆನ್ನಲ್ಲೇ ಹೊರಬಿದ್ದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಕ್ಯಾಪ್ಟನ್ ಆಗಿದ್ದ ಶಿಶಿರ್, 75 ದಿನ ಪೂರೈಸಿದ ನಂತರ ಹೊರಬಿದ್ದಿದ್ದಾರೆ.
ಕಳೆದೆರಡು ವಾರಗಳಿಂದ ಕೊನೆಯ ಹಂತದಲ್ಲಿ ಪಾರಾಗುತ್ತಿದ್ದ ಐಶ್ವರ್ಯ ಮತ್ತು ಚೈತ್ರಾ ಕುಂದಾಪುರ ಪಾರಾಗಿದ್ದಾರೆ. ಅತ್ಯಂತ ಕಡಿಮೆ ಮತ ಪಡೆದವರ ಪೈಕಿ ಈ ಬಾರಿ ಕೊನೆಯ ಎರಡು ಸ್ಪರ್ಧಿಯಾಗಿದ್ದ ಶಿಶಿರ್ ಮತ್ತು ಭವ್ಯಾ ಗೌಡ ಪೈಕಿ ಭವ್ಯಾ ಪಾರಾದರೆ ಶಿಶಿರ್ ಹೊರ ನಡೆದಿದ್ದಾರೆ.
ಇದೇ ವೇಳೆ ತುರ್ತು ಕರೆ ಹಿನ್ನೆಲೆಯಲ್ಲಿ ಮನೆಯ ಕ್ಯಾಪ್ಟನ್ ಆಗಿದ್ದ ಗೋಲ್ಡ್ ಸುರೇಶ್ ಕುಟುಂಬದಲ್ಲಿ ತುರ್ತು ಕರೆ ಹಿನ್ನೆಲೆಯಲ್ಲಿ ವೀಕೆಂಡ್ ನಲ್ಲಿ ಮನೆಯಿಂದ ಹೊರಗೆ ನಡೆದಿದ್ದಾರೆ.