Home ಮನರಂಜನೆ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸುದೀಪ್, ಅನುಪಮಾ ಗೌಡಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ

2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸುದೀಪ್, ಅನುಪಮಾ ಗೌಡಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ

ರಾಜ್ಯ ಸರ್ಕಾರ 2109ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

by Editor
0 comments
sudeep

ರಾಜ್ಯ ಸರ್ಕಾರ 2109ನೇ ಸಾಲಿನ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಪಿ. ಶೇಷಾದ್ರಿ ನಿರ್ದೇಶನದ ಮೋಹನದಾಸ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.

ಬುಧವಾರ ರಾಜ್ಯ ಸರ್ಕಾರ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟಿಸಿದ್ದು, ಪೈಲ್ವಾನ್ ಚಿತ್ರದ ಅಭಿನಯಕ್ಕಾಗಿ ಕಿಚ್ಚ ಸುದೀಪ್ ಹಾಗೂ ತ್ರಯಂಬಕಂ ಚಿತ್ರದ ಅಭಿನಯಕ್ಕಾಗಿ ಅನುಪಮಾ ಗೌಡ ಅವರಿಗೆ ಶ್ರೇಷ್ಠ ನಟ ಹಾಗೂ ಶ್ರೇಷ್ಠ ನಟಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

anupama gowda

ಅನುಪಮಾ ಗೌಡ

ಡಾರ್ಲಿಂಗ್ ಕೃಷ್ಣ ಅಭಿನಯದ ಲವ್ ಮಾಕ್ ಟೆಲ್ ಚಿತ್ರ ಎರಡನೇ ಅತ್ಯುತ್ತಮ ಚಿತ್ರ ಹಾಗೂ ಆರ್ಘ್ಯಂ ಚಿತ್ರ ಮೂರನೇ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.

ವಿಶೇಷ ಸಾಮಾಜಿಕ ಕಳಕಳಿಯ ಚಿತ್ರವಾಗಿ ಎಸ್. ಮಂಜುನಾಥ್ ನಿರ್ದೇಶನದ ಕನ್ಹೇರಿ ಹಾಗೂ ಡಾ.ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಇಂಗ್ಲೆಂಡ್ v/s ಇಂಗ್ಲೆಂಡ್ ಚಿತ್ರಗಳು ಉತ್ತಮ ಮನರಂಜನಾ ಚಿತ್ರವಾಗಿ ಪ್ರಶಸ್ತಿಗೆ ಆಯ್ಕೆಯಾಗಿವೆ.

banner

ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೆಮಿಸ್ಟ್ರೀ ಆಫ್ ಕರಿಯಪ್ಪ ಚಿತ್ರಕ್ಕಾಗಿ ತಬಲಾ ನಾಣಿ ಹಾಗೂ ಬ್ರಾಹ್ಮಿ ಚಿತ್ರಕ್ಕಾಗಿ ಅನೂಷಾ ಕೃಷ್ಣ ಅವರಿಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅತ್ಯುತ್ತಮ ಕಥೆ ಪ್ರಶಸ್ತಿ ಇಲ್ಲಿ ಇರಲಾರೆ, ಅಲ್ಲಿ ಹೋಗಲಾರೆ ಚಿತ್ರಕ್ಕಾಗಿ ಜಯಂತ್ ಕಾಯ್ಕಿಣಿ ಅವರಿಗೆ ಲಭಿಸಿದೆ. ಅತ್ಯುತ್ತಮ ಸಂಭಾಷಣೆಗಾಗಿ ಅಮೃತಮತಿ ಚಿತ್ರಕ್ಕಾಗಿ ಬರಗೂರು ರಾಮಚಂದ್ರಪ್ಪ ಅವರಿಗೆ ಪ್ರಶಸ್ತಿ ದೊರೆತಿದೆ. ಯಜಮಾನ ಚಿತ್ರದ ಸಂಗೀತಕ್ಕಾಗಿ ಹರಿಕೃಷ್ಣ ಅವರಿಗೆ ಪ್ರಶಸ್ತಿ ದೊರೆತಿದೆ.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Latest news
ದೆಹಲಿ ಗಣರಾಜ್ಯೋತ್ಸವದಲ್ಲಿ ಕಲ್ಲಿನಲ್ಲಿ ಅರಳಿದ ಶಿಲ್ಪಕಲೆಯ ಲಕ್ಕುಂಡಿ ಅನಾವರಣ! ಇ-ಸೇವೆಯಲ್ಲಿ ಕರ್ನಾಟಕ ನಂ.1: ರಾಷ್ಟ್ರೀಯ ಆಡಳಿತ ಸೇವಾ ಮೌಲ್ಯಮಾಪನ ವರದಿ BIG BREAKING ಪುಷ್ಪಕ್ ಎಕ್ಸ್ ಪ್ರೆಸ್ ನಲ್ಲಿ ಅಗ್ನಿ ದುರಂತ ವದಂತಿ: ಹಲವರ ಸಾವು ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನ: ದೋಸ್ತಿ ಜನಾರ್ದನ ರೆಡ್ಡಿ ವಿರುದ್ಧ ಶ್ರೀರಾಮುಲು ಗಂಭೀರ ಆರೋಪ 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಸುದೀಪ್, ಅನುಪಮಾ ಗೌಡಗೆ ಒಲಿದ ಶ್ರೇಷ್ಠ ನಟ, ನಟಿ ಪ್ರಶಸ್ತಿ ಗಣರಾಜ್ಯೋತ್ಸವ ದಿನ ಜೀ ಟಿವಿಯಲ್ಲಿ ಭೈರತ್ ರಣಗಲ್ ಪ್ರಸಾರ ಅಮ್ಮ- ಮಗಳ ಬಾಂಧವ್ಯದ ಮೇಲೆ ಸೇಡಿನ ಕಾಡ್ಗಿಚ್ಚು; ಬರ್ತಿದೆ ಹೊಸ ಧಾರಾವಾಹಿ 'ನಾ ನಿನ್ನ ಬಿಡಲಾರೆ' ! ಬಾಹ್ಯಕಾಶದಿಂದ ಮಹಾಕುಂಭ ಮೇಳ ಹೇಗೆ ಕಾಣುತ್ತೆ ಗೊತ್ತಾ? ಉಪಗ್ರಹ ಚಿತ್ರ ಬಿಡುಗಡೆ ಸೌಹಾರ್ದ ಬ್ಯಾಂಕ್ ದುಡ್ಡು ಏನು ಮಾಡಿದೆ ಅಂತ ಗೊತ್ತು: ಯತ್ನಾಳ್ ಗೆ ಜಿಟಿ ದೇವೇಗೌಡ ತಿರುಗೇಟು ನನ್ನ ಮೇಲೆ ಕ್ರಮ ಕೈಗೊಳ್ಳಲು ನಾಯಕರಿಗೆ ಧಮ್ ಬೇಕು: ಜಿಟಿ ದೇವೇಗೌಡ ಸವಾಲು