Saturday, May 16, 2026
Google search engine
Homeಅಪರಾಧಮರ್ಯಾದೆ ಹೆದರಿ ಬಾವಿಗೆ ಹಾರಿ ಅಪ್ಪ-ಮಗ ಆತ್ಮಹತ್ಯೆ, ತಾಯಿ ಸ್ಥಿತಿ ಗಂಭೀರ

ಮರ್ಯಾದೆ ಹೆದರಿ ಬಾವಿಗೆ ಹಾರಿ ಅಪ್ಪ-ಮಗ ಆತ್ಮಹತ್ಯೆ, ತಾಯಿ ಸ್ಥಿತಿ ಗಂಭೀರ

ಅತಿಯಾದ ಸಾಲಬಾಧೆಯಿಂದ ಮರ್ಯಾದೆಗೆ ಹೆದರಿ ಒಂದೇ ಕುಟುಂಬದ ಮೂವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ-ಮಗ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ.

ಕುಂದಾಪುರದ ತೆಕ್ಕಟ್ಟೆಯ ಕಂಚುಗಾರುಬೆಟ್ಟು ನಿವಾಸಿ ತಂದೆ ಮಾಧವ ದೇವಾಡಿಗ (56) ಹಾಗೂ ಮಗ ಗಿರೀಶ್ ದೇವಾಡಿಗ (22) ಮೃತಪಟ್ಟಿದ್ದು, ಪತ್ನಿ ತಾರಾ ದೇವಾಡಿಗ ಸ್ಥಿತಿ ಗಂಭೀರವಾಗಿದೆ.

ಮಾಧವ ಎಂಬುವವರು ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೈತುಂಬ ಸಾಲ ಮಾಡಿಕೊಂಡಿದ್ದರು, ಇನ್ನೊಂದೆಡೆ ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ಗಳು ನೋಟಿಸ್ ನೀಡಿದ್ದರು, ಇದರಿಂದ ಮರ್ಯಾದೆಗೆ ಅಂಜಿ ಡೆತ್ ನೋಟ್ ಬರೆದಿಟ್ಟು ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾಧವ ಹಾಗೂ ಗಿರೀಶ್ ಆತ್ಮಹತ್ಯೆಗೆ ಶರಣಾಗಿದ್ದರು, ಪತಿ ಹಾಗೂ ಮಗ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದು ಅದೇ ಬಾವಿಗೆ ತಾರಾ ಕೂಡ ಬಾವಿಗೆ ಹಾರಿದ್ದು, ಈ ವೇಳೆ ಕಿರುಚಾಟ ಶಬ್ದ ಕೇಳಿ ಸ್ಥಳೀಯರು ರಕ್ಷಿಸಿದ್ದಾರೆ.

ತಾರಾ ಅವರನ್ನು ರಕ್ಷಣೆ ಮಾಡಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ. ಇನ್ನು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮೇಲಕ್ಕೆ ಎತ್ತಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments