ಯಾದಗಿರಿ: ಕೃಷಿ ಹೊಂಡದಲ್ಲಿ ಈಜುಲು ಹೋಗಿದ್ದ ಒಂದೇ ಕುಟುಂಬದ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ಜರುಗಿದೆ.
ಗ್ರಾಮದ ರಾಜೀವ್ ಬಾಲಪ್ಪ ಮಕ್ಕಳಾದ ಹನುಮೇಶ (7), ಶರತ್ (6), ಮಲ್ಲಪ್ಪ ಬಾಲಪ್ಪ ಪುತ್ರ ಕಿರಣ್ (6) ಹಾಗೂ ರಾಜೀವ್ ಸಹೋದರಿ ಗುಬ್ಬಮ್ಮ ಬಸಪ್ಪ ಪುತ್ರಿ ಬಸಮ್ಮ (11) ಮೃತ ದುರ್ದೈವಿಗಳು.
ಬಿಸಿಲಿನ ತಾಪದಿಂದ ಜಮೀನಿನಲ್ಲಿದ್ದ ಕೃಷಿ ಹೊಂಡದಲ್ಲಿ ನೀರಿಗೀಳಿದ ಮಕ್ಕಳಿಗೆ ಅದೇ ಕೃಷಿ ಹೊಂಡ ಮೃತ್ಯಕೂಪವಾಗಿದೆ.
ಶಾಲೆಗೆ ರಜೆ ಇದ್ದ ಕಾರಣಕ್ಕೆ ಮಕ್ಕಳು ಕೃಷಿ ಹೊಂಡಕ್ಕೆ ಹೋಗಿದ್ದರು ಈ ವೇಳೆ ಈ ದುರ್ಘಟನೆ ನಡೆದಿದೆ. ಮಕ್ಕಳನ್ನು ಕಳೆದುಕೊಂಡು ಪಾಲಕರು ಆಘಾತಗೊಂಡಿದ್ದು, ಮೃತ ಮಕ್ಕಳ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೆಂಭಾವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



