Monday, June 29, 2026
Google search engine
Homeಬೆಂಗಳೂರುಕಾಲ್ತುಳಿತ ದುರಂತಕ್ಕೆ ಸರ್ಕಾರ, ಆರ್ ಸಿಬಿಯೇ ಹೊಣೆ, ನಾವಲ್ಲ: ಕೆಎಸ್ ಸಿಎ ಹೈಕೋರ್ಟ್ ದೂರು

ಕಾಲ್ತುಳಿತ ದುರಂತಕ್ಕೆ ಸರ್ಕಾರ, ಆರ್ ಸಿಬಿಯೇ ಹೊಣೆ, ನಾವಲ್ಲ: ಕೆಎಸ್ ಸಿಎ ಹೈಕೋರ್ಟ್ ದೂರು

ಆರ್ ಸಿಬಿ (rcb) ಗೆಲುವಿನ ಸಂಭ್ರಮಾಚರಣೆಗೆ ಕರೆ ನೀಡಿದ ರಾಜ್ಯ ಸರ್ಕಾರ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ದುರಂತಕ್ಕೆ ಹೊಣೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಹೈಕೋರ್ಟ್ ಗೆ ದೂರು ನೀಡಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರಿಕೆಟ್ ನಡೆಸಿಕೊಡುವುದಷ್ಟೇ ಜವಾಬ್ದಾರಿ ಹೊಂದಿದ್ದು, ಅಭಿಮಾನಿಗಳನ್ನು ನಿಯಂತ್ರಿಸುವ ಜವಾಬ್ದಾರಿ ಹಾಗೂ ಕಾರ್ಯಕ್ರಮ ಹಮ್ಮಿಕೊಂಡಿದ್ದು ರಾಜ್ಯ ಸರ್ಕಾರ ಮತ್ತು ಆರ್ ಸಿಬಿದ್ದಾಗಿತ್ತು. ದುರಂತದಲ್ಲಿ ನಮ್ಮ ಪಾತ್ರ ಏನೂ ಇರಲಿಲ್ಲ ಎಂದು ಕೆಎಸ್ ಸಿಎ ದೂರಿನಲ್ಲಿ ಹೇಳಿಕೊಂಡಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ವಿಧಾನಸೌಧ ಮೆಟ್ಟಿಲುಗಳ ಮೇಲೆ ನಿರ್ಮಿಸಿದ್ದ ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದಾರೆ. ಸರ್ಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ತಮ್ಮನ್ನು ಗುರಿ ಮಾಡಲಾಗಿದೆ ಎಂದು ಅರ್ಜಿಯಲ್ಲಿ ಕೆಎಸ್​​ಸಿಎ ಆರೋಪಿಸಿದೆ.

ಘಟನೆಯ ಹೊಣೆಯನ್ನು ಕೆಎಸ್​​ಸಿಎ ಮೇಲೆ ಹೊರಿಸಲು ಯತ್ನಿಸಲಾಗುತ್ತಿದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನದಟ್ಟಣೆ ನಿರ್ವಹಣೆ ಆರ್​ಸಿಬಿ ಹಾಗೂ ಪೊಲೀಸರ ಕರ್ತವ್ಯ. ಕರ್ನಾಟಕದ ಕ್ರಿಕೆಟ್ ನಿಯಂತ್ರಣವಷ್ಟೇ ಕೆಎಸ್​​ಸಿಎ ಜವಾಬ್ದಾರಿ ಎಂದು ಸಂಸ್ಥೆ ಹೇಳಿದೆ.

ಕೆಎಸ್​​ಸಿಎ ಆಡಳಿತ ಮಂಡಳಿಯವರನ್ನು ಬಂಧಿಸಲು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಮಾಧ್ಯಮಗಳ ಮೂಲಕವೇ ಸಿಎಂ ಬಂಧಿಸುವ ಆದೇಶ ನೀಡಿದ್ದಾರೆ. ಪೊಲೀಸರನ್ನು ಅಮಾನತುಗೊಳಿಸುವ ಮೂಲಕ ಲೋಪ ಒಪ್ಪಿಕೊಂಡಿದ್ದಾರೆ. ಈಗ ಕೆಎಸ್​​ಸಿಎ ಮೇಲೆ ಹೊಣೆ ಹೊರಿಸಲು ಯತ್ನಿಸುತ್ತಿದ್ದಾರೆ ಎಂದು ರಿಟ್ ಅರ್ಜಿಯಲ್ಲಿ ಆರೋಪಿಸಲಾಗಿದೆ.

ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಘಟನೆಗೆ ಸರ್ಕಾರ ಹೊಣೆಯಲ್ಲ. ಚಿನ್ನಸ್ವಾಮಿ ಸ್ಟೇಡಿಯಂ ಹೊರಗೆ ನಡೆದ ದುರಂತಕ್ಕೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆ ನಡೆದ ದಿನವೇ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು.

ನಂತರ ಘಟನೆ ಸಂಬಂಧ ಯಾವುದೇ ಎಫ್ಐಆರ್ ದಾಖಲಾಗಿರಲಿಲ್ಲ. 11 ಅಸಹಜ ಸಾವು ಪ್ರಕರಣಗಳನ್ನು ಅಷ್ಟೇ ದಾಖಲಿಸಲಾಗಿತ್ತು. ನಂತರ ಜನ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಮತ್ತು ಪ್ರತಿಪಕ್ಷಗಳಿಂದ ತೀವ್ರ ಒತ್ತಡ ಎದುರಾಗುತ್ತಿದ್ದಂತೆಯೇ ಆರ್​​ಸಿಬಿ ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಘಟನೆ ಆರ್​ಸಿಬಿ ಮಾರ್ಕೆಟಿಂಗ್​ ಮುಖಸ್ಥ​​​​​​​ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments