Monday, May 25, 2026
Google search engine
Homeಕ್ರೀಡೆWPL ಹ್ಯಾರಿಸ್ 40 ಎಸೆತದಲ್ಲಿ 85 ರನ್: ಆರ್‌ ಸಿಬಿ ಆರ್ಭಟಕ್ಕೆ ಮಂಕಾದ ಯುಪಿ ವಾರಿಯರ್ಸ್‌

WPL ಹ್ಯಾರಿಸ್ 40 ಎಸೆತದಲ್ಲಿ 85 ರನ್: ಆರ್‌ ಸಿಬಿ ಆರ್ಭಟಕ್ಕೆ ಮಂಕಾದ ಯುಪಿ ವಾರಿಯರ್ಸ್‌

ಆರಂಭಿಕರಾದ ಗ್ರೇಸ್‌ ಹ್ಯಾರಿಸ್‌ ಮತ್ತು ಸ್ಮೃತಿ ಮಂದಾನ ಸಿಡಿಲಬ್ಬರದ ಆಟದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 9 ವಿಕೆಟ್‌ ಗಳಿಂದ ಯುಪಿ ವಾರಿಯರ್ಸ್‌ ತಂಡವನ್ನು ಹೀನಾಯವಾಗಿ ಸೋಲಿಸಿ ಮಹಿಳೆಯರ ಪ್ರೀಮಿಯರ್‌ ಲೀಗ್‌ ಟಿ-20 ಟೂರ್ನಿಯಲ್ಲಿ ಸತತ ಎರಡನೇ ಗೆಲುವು ದಾಖಲಿಸಿದೆ.

ಡಿವೈ ಪಾಟೀಲ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ತಂಡವನ್ನು ೫ ವಿಕೆಟ್‌ ಗೆ 145 ರನ್‌ ಗೆ ಕಟ್ಟಿಹಾಕಿದ ಆರ್‌ ಸಿಬಿ 7.5 ಓವರ್‌ ಬಾಕಿ ಇರುವಂತೆಯೇ 1 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು.

ಗ್ರೇಸ್‌ ಹ್ಯಾರಿಸ್‌ ಮತ್ತು ಸ್ಮೃತಿ ಮಂದಾನ ಮೊದಲ ವಿಕೆಟ್‌ ಗೆ 137 ರನ್‌ ಜೊತೆಯಾಟದಿಂದ ತಂಡದ ಗೆಲುವು ಖಚಿತಪಡಿಸಿದರು. ಹ್ಯಾರಿಸ್‌ 40 ಎಸೆತಗಳಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ ಒಳಗೊಂಡ 85 ರನ್‌ ಸಿಡಿಸಿ ಪಂದ್ಯದ ದಿಕ್ಕೇ ಬದಲಿಸಿದರು. ಆದರೆ ತಂಡದ ಗೆಲುವಿನ ಹೊಸ್ತಿಲಲ್ಲಿ ವಿಕೆಟ್‌ ಕೈ ಚೆಲ್ಲಿಸಿ ನಿರಾಸೆ ಮೂಡಿಸಿದರು. ಮತ್ತೊಂದು ತುದಿಯಲ್ಲಿ ನಾಯಕಿ ಸ್ಮೃತಿ ಮಂದಾನ 32 ಎಸೆತಗಳಲ್ಲಿ 9 ಬೌಂಡರಿ ಒಳಗೊಂಡ 47 ರನ್‌ ಬಾರಿಸಿ ಅರ್ಧಶತಕದ ಹೊಸ್ತಿಲಲ್ಲಿ ಅಜೇಯರಾಗಿ ಉಳಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ ಯುಪಿ ವಾರಿಯರ್ಸ್‌ ತಂಡ ಶ್ರೇಯಾಂಕಾ ಪಾಟೀಲ್‌ ಮತ್ತು ನಾದಿನೆ ಡಿ ಕ್ಲಾರ್ಕ್‌ ಸ್ಪಿನ್‌ ಬಲೆಗೆ ಬಿದ್ದು ಬೃಹತ್‌ ಮೊತ್ತ ಪೇರಿಸುವಲ್ಲಿ ಎಡವಿತು. ಒಂದು ಹಂತದಲ್ಲಿ ಯುಪಿ ವಾರಿಯರ್ಸ್‌ 50 ರನ್‌ ಗೆ 5 ವಿಕೆಟ್‌ ಕಳೆದುಕೊಂಡು ಕಂಗಾಲಾಗಿತ್ತು.

ಈ ಹಂತದಲ್ಲಿ ಜೊತೆಯಾದ ದೀಪ್ತಿ ಶರ್ಮ ಮತ್ತು ಡಿಯಾಂಡ್ರಾ ಡಾಟಿನ್‌ ಮುರಿಯದ 6ನೇ ವಿಕೆಟ್‌ ಗೆ 93 ರನ್‌ ಜೊತೆಯಾಟದಿಂದ ತಂಡ ಉತ್ತಮ ಮೊತ್ತ ಪೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ದೀಪ್ತಿ ಶರ್ಮ 35 ಎಸೆತಗಳಲ್ಲಿ 5 ಬೌಂಡರಿ ಮತ್ತು 1 ಸಿಕ್ಸರ್‌ ಒಳಗೊಂಡ 45 ರನ್‌ ಬಾರಿಸಿ ಅಜೇಯರಾಗಿ ಉಳಿದರೆ, ಡಾಟಿನ್‌ 37 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಸಹಾಯದಿಂದ 40 ರನ್‌ ಚಚ್ಚಿ ಔಟಾಗದೇ ಉಳಿದರು.
ಶ್ರೇಯಾಂಕಾ ಪಾಟೀಲ್‌ ಮತ್ತು ನಾದಿನೆ ತಲಾ 2 ವಿಕೆಟ್‌ ಪಡೆದು ಮಿಂಚಿದರೆ, ಲೌರೆನ್‌ ಬೆಲ್‌ 1 ವಿಕೆಟ್‌ ಗಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments