ಸೊಸೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಆಕೆಯನ್ನು ಕೊಂದ ಮಾವ ಮನೆಯ ಮುಂದೆಯೇ ಗುಂಡಿ ತೋಡಿ ಹೂತು ಹಾಕಿದ ಆಘಾತಕಾರಿ ಘಟನೆ ಹರಿಯಾಣದ ಫರಿದಾಬಾದ್ ನಲ್ಲಿ ನಡೆದಿದೆ.
ಸೊಸೆ ಎರಡು ತಿಂಗಳಿಂದ ನಾಪತ್ತೆಯಾಗಿದ್ದಾಳೆ ಎಂದು ಅತ್ತೆ ಮತ್ತು ಮಾವ ನೀಡಿದ ದೂರಿನ ತನಿಖೆ ನಡೆಸಿದ ಪೊಲೀಸರು ಮನೆ ಮುಂದೆಯೇ ಸೊಸೆಯ ಶವವನ್ನು ಮಗನ ಜೊತೆ ಸೇರಿ ಮಾವ ಹೂತು ಹಾಕಿರುವುದು ಬೆಳಕಿಗೆ ಬಂದಿದೆ.
24 ವರ್ಷದ ಮಹಿಳೆ ಫಿರೋಜಾಬಾದ್ ನ ಶಿಕೋಹಾಬಾದ್ ನಿವಾಸಿಯಾಗಿದ್ದು 2023ರಲ್ಲಿ ಫರಿದಾಬಾದ್ ನಲ್ಲಿ ಮದುವೆ ಆಗಿದ್ದರು. ಮದುವೆ ಆದ 2 ವರ್ಷಗಳ ನಂತರ ವರದಕ್ಷಿಣೆ ಕಿರುಕುಳ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ.
ಸೊಸೆಯನ್ನು ಕೊಂದು ಮನೆಯ ಮುಂದೆಯೇ 10 ಅಡಿ ಗುಂಡಿ ತೋಡಿ ಮುಚ್ಚಿಹಾಕಲಾಗಿದ್ದು, ನಂತರ ಏನೂ ತಿಳಿಯದಂತೆ ನಾಟಕವಾಡಿದ್ದಾರೆ. ಸ್ವತಃ ಪತ್ನಿಗೂ ತಿಳಿಯದಂತೆ ಪತಿ ಹಾಗೂ ಮಗ ನಾಪತ್ತೆ ಆಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರು ಪ್ರಕರಣ ಭೇದಿಸಿದ ನಂತರ ಮಗ ಹಾಗೂ ಮಾವನನ್ನು ವಿಚಾರಣೆಗೊಳಪಡಿಸಿದಾಗ ಆಘಾತಕಾರಿ ವಿಷಯಗಳು ಬೆಳಕಿಗೆ ಬಂದಿದೆ.
ಏಪ್ರಿಲ್ 14ರಂದು ಸೊಸೆಯನ್ನು ಕೊಲ್ಲುವ ಸಂಚು ರೂಪಿಸಲಾಗಿದ್ದು, ಯೋಜನೆಯಂತೆ ಅತ್ತೆಯನ್ನು ಉತ್ತರ ಪ್ರದೇಶದ ಎಟಾದಲ್ಲಿನ ಮದುವೆ ಕಾರ್ಯಕ್ರಮಕ್ಕೆ ಕಳುಹಿಸಿದ್ದಾರೆ. ಏಪ್ರಿಲ್ 21ರಂದು ರಾತ್ರಿ ಪತ್ನಿ ಹಾಗೂ ತಂಗಿಗೆ ಪತಿ ಊಟದಲ್ಲಿ ನಿದ್ದೆ ಮಾತ್ರೆ ಹಾಕಿದ್ದಾನೆ. ಪತ್ನಿ ಹಾಗೂ ತಂಗಿ ರಾತ್ರಿ ಬೇರೆ ಬೇರೆ ಕೊಠಡಿಗಳಲ್ಲಿ ಮಲಗಿದ್ದಾರೆ.
ರಾತ್ರಿ ಸೊಸೆಯನ್ನು ಕೊಲ್ಲಲು ಗಂಡ ತಂದೆಯನ್ನು ಕಳುಹಿಸಿದ್ದಾನೆ. ಈ ವೇಳೆ ಮಾವ ಸೊಸೆಯ ಮೇಲೆ ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾನೆ. ಆದರೆ ತಾನು ಅತ್ಯಾಚಾರ ಮಾಡಿದ ವಿಷಯವನ್ನು ಮಗ ಹಾಗೂ ಪತ್ನಿಯಿಂದ ಮುಚ್ಚಿಟ್ಟಿದ್ದಾನೆ.
ಶವವನ್ನು ಬಟ್ಟೆಯಿಂದ ಮುಚ್ಚಿ ಮನೆಯ ಮುಂದಿನ ರಸ್ತೆ ಪಕ್ಕದಲ್ಲಿ ಒಳಚರಂಡಿ ದುರಸ್ಥಿ ನೆಪದಲ್ಲಿ ಮೊದಲೇ ತೊಡಲಾಗಿದ್ದ 10 ಅಡಿ ಆಳದ ಗುಂಡಿಯಲ್ಲಿ ಹಾಕಿದ್ದಾರೆ. ನಂತರ ಇಟ್ಟಿಗೆ, ಸೀಮೆಂಟ್ ನಿಂದ ಗುಂಡಿಯನ್ನು ಮುಚ್ಚಿ ಕಾಂಕ್ರಿಟ್ ಸುರಿದಿದ್ದಾರೆ. ಅಕ್ಕಪಕ್ಕದವರು ಒಳಚರಂಡಿ ದುರಸ್ಥಿ ಕಾರ್ಯ ನಡೆದಿದೆ ಎಂದಷ್ಟೇ ಭಾವಿಸಿದ್ದರು.
ಒಳಚರಂಡಿ ದುರಸ್ಥಿ ಬಗ್ಗೆ ಅನುಮಾನಬಂದು ಪೊಲೀಸರು ತೆಗೆಸಿದಾಗ ಮಹಿಳೆಯ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮಾವ ಮತ್ತು ಪತಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಮೃತ ಮಹಿಳೆಯ ತಂಗಿ ಮದುವೆ ಆದ ದಿನದಿಂದ ವರದಕ್ಷಿಣೆ ಹಣ ಸಾಕಾಗಲಿಲ್ಲ ಎಂದು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ.



