Sunday, June 28, 2026
Google search engine
Homeಕ್ರೀಡೆಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ ಗೆದ್ದ ಟೀಂ ಇಂಡಿಯಾ ಇತಿಹಾಸ

ಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ ಗೆದ್ದ ಟೀಂ ಇಂಡಿಯಾ ಇತಿಹಾಸ

ಭಾರತ ತಂಡ 96 ರನ್ ಗಳ ಭಾರೀ ಅಂತರಿಂದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿ ಟಿ-20 ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಇತಿಹಾಸ ಬರೆಯಿತು.

ಅಹಮದಾಬಾದ್ ನಲ್ಲಿ ಭಾನುವಾರ ನಡೆದ ಫೈನಲ್ ನಲ್ಲಿ  ಭಾರತ ತಂಡ 96 ರನ್ ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಸೋಲರಿಯದ ತಂಡವಾಗಿ ಪ್ರಶಸ್ತಿಗೆ ಮುತ್ತಿಟ್ಟಿತು. ಈ ಮೂಲಕ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ನಲ್ಲಿ ಮೊದಲ ಬಾರಿ ಗೆದ್ದ ದಾಖಲೆಯನ್ನೂ ಬರೆಯಿತು.

ನ್ಯೂಜಿಲೆಂಡ್ ಚೊಚ್ಚಲ ವಿಶ್ವಕಪ್ ಕನಸು ಕನಸಾಗಿಯೇ ಉಳಿದರೆ, ಭಾರತ ಸತತ ಎರಡನೇ ಬಾರಿ ಹಾಗೂ ಒಟ್ಟಾರೆ ಮೂರನೇ ಬಾರಿ ವಿಶ್ವಕಪ್ ಗೆದ್ದ ಸಾಧನೆ ಮಾಡಿತು.

ನ್ಯೂಜಿಲೆಂಡ್ ಪರ ಟಿಮ್ ಸೈಫರ್ಟ್ (52) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ ಮನ್ ಪೆವಿಲಿಯನ್ ಪರೇಡ್ ನಡೆಸಿದ್ದರಿಂದ ಭಾರತ ಸುಲಭ ಜಯದೊಂದಿಗೆ ಪ್ರಶಸ್ತಿಗೆ ಮುತ್ತಿಟ್ಟಿತು. ಅಲ್ಲದೇ ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ ನಲ್ಲಿ ಮೊದಲ ಬಾರಿ ಗೆದ್ದ ದಾಖಲೆ ಬರೆಯಿತು.

ಸಂಜು- ಅಭಿಷೇಕ್ ಜೋಡಿ ವಿಶ್ವದಾಖಲೆ

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮ ಜೋಡಿ ಮೊದಲ ಟಿ-20 ವಿಶ್ವಕಪ್ ಫೈನಲ್ ನಲ್ಲಿ ವಿಶ್ವದಾಖಲೆ ಬರೆಯಿತು.

ಅಹಮದಾಬಾದ್ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಲು ಇಳಿದ ಭಾರತ ತಂಡಕ್ಕೆ ಸಂಜು ಮತ್ತು ಅಭಿಷೇಕ್ 98 ರನ್ ಜೊತೆಯಾಟದಿಂದ ಭರ್ಜರಿ ಆರಂಭ ನೀಡಿದರು.

ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಮೊದಲ ವಿಕೆಟ್ ಗೆ 50 ರನ್ ಜೊತೆಯಾಟ ನಿಭಾಯಿಸುವ ಮೂಲಕ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕದ ಜೊತೆಯಾಟ ನಿಭಾಯಿಸಿದ ವಿಶ್ವದಾಖಲೆ ಬರೆಯಿತು. 2009ರಲ್ಲಿ ಪಾಕಿಸ್ತಾನ ಮೊದಲ ವಿಕೆಟ್ ಗೆ 48 ರನ್ ಪೇರಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.

ಅಭಿಷೇಕ್ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ಅವರು 21 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 52 ರನ್ ಬಾರಿಸಿ ಔಟಾದರು. ಸಂಜು ಸ್ಯಾಮ್ಸನ್ ಸತತ ಮೂರನೇ ಅರ್ಧಶತಕ ಬಾರಿಸಿದ ಗೌರವಕ್ಕೆ ಪಾತ್ರರಾದರು. ಸಂಜು 33 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಒಳಗೊಂಡ 50 ರನ್ ಪೂರೈಸಿದರು.

ಭಾರತ 255/5 (ಸಂಜು 89, ಅಭಿಷೇಕ್ 52., ಕಿಶನ್ 54) ನ್ಯೂಜಿಲೆಂಡ್ 19 ಓವರ್ ಗಳಲ್ಲಿ 159 (ಸೈಫರ್ಟ್ 52, ಅಕ್ಸರ್ 27/3, ಬುಮ್ರಾ 15/4)

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments