Monday, May 25, 2026
Google search engine
Homeವಿದೇಶಹಾಂಕಾಂಗ್ ಕಟ್ಟಡದ ಅಗ್ನಿದುರಂತ: ಮೃತರ ಸಂಖ್ಯೆ 128ಕ್ಕೆ ಏರಿಕೆ

ಹಾಂಕಾಂಗ್ ಕಟ್ಟಡದ ಅಗ್ನಿದುರಂತ: ಮೃತರ ಸಂಖ್ಯೆ 128ಕ್ಕೆ ಏರಿಕೆ

ಹಾಂಕಾಂಗ್ ವಸತಿ ಸಮುಚ್ಛಯದ ಬಹುಮಹಡಿ ಕಟ್ಟಡದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 128ಕ್ಕೆ ಏರಿಕೆಯಾಗಿದ್ದು, ಇನ್ನೂ ಸಾಕಷ್ಟು ಮಂದಿ ನಾಪತ್ತೆಯಾಗಿದ್ದಾರೆ.

ಸರ್ಕಾರದ ಭದ್ರತಾ ಇಲಾಖೆಯ ಕಾರ್ಯದರ್ಶಿ ಕ್ರಿಸ್ ಟಾಂಗ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಮೃತರ ಆತ್ಮಗಳಿಗೆ ಶಾಂತಿ ಕೋರಿದರು.

ಹಾಂಕಾಂಗ್ ನ ಪ್ರಮುಖ ಆಕರ್ಷಣೆಯ ಬಹುಮಹಡಿ ಇದಾಗಿದ್ದು, ನ್ಯೂ ಟೆರಿಟರಿಗಳ ಉಪನಗರವಾದ ತೈ ಪೋ ಜಿಲ್ಲೆಯ ವಸತಿ ಸಮುಚ್ಚಯದಲ್ಲಿ 8 ಅಂತಸ್ತುಗಳ 7 ಕಟ್ಟಡಗಳಲ್ಲಿ, 2000 ಅಪಾರ್ಟ್ ಮೆಂಟ್ ಗಳು ಇದ್ದವು. 62 ಮಂದಿ ಗಾಯಗೊಂಡಿದ್ದು, 279 ಮಂದಿ ಕಣ್ಮರೆಯಾಗಿದ್ದಾರೆ.

ಆರ್ಥಿಕತೆಯ ಹಬ್ ಆಗಿರುವ ಹಾಂಕಾಂಗ್ ಇತಿಹಾಸದಲ್ಲೇ ಅತೀ ದೊಡ್ಡ ಅಗ್ನಿ ದುರಂತ ಇದಾಗಿದ್ದು, ದುರಂತ ಸಂಬಂಧ ಮೂವರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಕಟ್ಟಡದಲ್ಲಿ ಫೋಮ್ ಪ್ಯಾಕೇಜಿಂಗ್ ಮಾಡುತ್ತಿದ್ದಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ಹೇಳಲಾಗಿದ್ದು, ಅತಿಯಾದ ನಿರ್ಲಕ್ಷ್ಯ ಕಾರಣಕ್ಕೆ ಮೂವರನ್ನು ಬಂಧಿಸಲಾಗಿದೆ.

ನಿರ್ಮಾಣ ಕಂಪನಿಯೊಂದು ಸ್ಥಾಪಿಸಿರುವ ಗೋಪುರದ ಲಿಫ್ಟ್ ಲಾಬಿ ಬಳಿಯ ಪ್ರತಿ ಮಹಡಿಯ ಕಿಟಕಿಗಳ ಹೊರಗೆ ಹೆಚ್ಚು ದಹಿಸಬಹುದಾದ ಸ್ಟೈರೋಫೋಮ್ ವಸ್ತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರ್ಮಾಣ ಕಂಪನಿಯ ಉಸ್ತುವಾರಿ ವಹಿಸಿದ್ದವರು ತೀವ್ರ ನಿರ್ಲಕ್ಷ್ಯ ಮಾಡಿದರು ಎಂದು ಹಿರಿಯ ಪೊಲೀಸ್ ಅಧೀಕ್ಷಕ ಐಲೀನ್ ಚುಂಗ್ ಹೇಳಿದರು. 52 ರಿಂದ 68 ವರ್ಷ ವಯಸ್ಸಿನ ಬಂಧಿತ ಮೂವರು ವ್ಯಕ್ತಿಗಳು ಸಂಸ್ಥೆಯ ನಿರ್ದೇಶಕರು ಮತ್ತು ಎಂಜಿನಿಯರಿಂಗ್ ಸಲಹೆಗಾರರಾಗಿದ್ದಾರೆ.

ಅಗ್ನಿಶಾಮಕ ಸೇವೆಗಳ ಇಲಾಖೆಯ ಪ್ರಕಾರ, ಇಂದು ಬೆಳಗ್ಗೆ ನಾಲ್ಕು ಕಟ್ಟಡಗಳಲ್ಲಿ ಬೆಂಕಿ ನಿಯಂತ್ರಣಕ್ಕೆ ಬರುತ್ತಿದೆ. ಬೆಂಕಿಯು 32 ಅಂತಸ್ತಿನ ಗೋಪುರವಾದ ಕಟ್ಟಡಗಳಲ್ಲಿ ಒಂದಾದ ಬಾಹ್ಯ ಸ್ಕ್ಯಾಫೋಲ್ಡಿಂಗ್‌ನಲ್ಲಿ ಪ್ರಾರಂಭವಾಯಿತು. ನಂತರ ಕಟ್ಟಡದ ಒಳಗೆ ಮತ್ತು ಹತ್ತಿರದ ಕಟ್ಟಡಗಳಿಗೆ ಹರಡಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments