Tuesday, June 30, 2026
Google search engine
Homeರಾಜ್ಯ13ನೇ ಮಹಡಿಯಿಂದ ಬಿದ್ದು ತಾಯಿ-ಮಗ ಸಾವು!

13ನೇ ಮಹಡಿಯಿಂದ ಬಿದ್ದು ತಾಯಿ-ಮಗ ಸಾವು!

13ನೇ ಮಹಡಿಯಿಂದ ಬಿದ್ದು ತಾಯಿ ಹಾಗೂ 12 ವರ್ಷದ ಮಗ ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಗೌತಮ್ ಬುದ್ದ ನಗರದಲ್ಲಿ ಶನಿವಾರ ಸಂಭವಿಸಿದೆ.

ದರ್ಪಣ್ ಚಾವ್ಲಾ ಅವರ ಮಾನಸಿಕ ಅಸ್ವಸ್ಥ ಮಗ ದಕ್ಷ್ ಮತ್ತು 38 ವರ್ಷದ ತಾಯಿ ಸಾಕ್ಷಿ ಚಾವ್ಲಾ ಮೃತಪಟ್ಟಿದ್ದಾರೆ.

ಕುಟುಂಬ 13ನೇ ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದು, ಮಗ ಬಾಲ್ಕನಿಯಿಂದ ಆಟವಾಡುತ್ತಿದ್ದಾಗ ವೇಗವಾಗಿ ಓಡುವಾಗ ಜಾರಿ ಮೇಲಿಂದ ಬಿದ್ದಿದ್ದಾನೆ. ಸಮೀಪದಲ್ಲಿಯೇ ಇದ್ದ ತಾಯಿ ಮಗನನ್ನು ರಕ್ಷಿಸಲು ಹೋಗಿ ಆಕೆಯೂ ಬಿದ್ದು ಮೃತಪಟ್ಟಿದ್ದಾರೆ.

ಘಟನೆ ನಡೆಯುವಾಗ ದರ್ಪನ್ ಮತ್ತೊಂದು ಕೊಠಡಿಯಲ್ಲಿ ಇದ್ದರು. ಪೊಲೀಸರು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments