Wednesday, May 13, 2026
Google search engine
Homeದೇಶನನಗೂ ಮೋದಿಗೂ ಹೆಂಡತಿ ಚಿಂತೆ ಇಲ್ಲ: ರಾಹುಲ್ ಹೇಳಿಕೆಗೆ ಲೋಕಸಭೆಯಲ್ಲಿ ನಗೆಗಡಲು

ನನಗೂ ಮೋದಿಗೂ ಹೆಂಡತಿ ಚಿಂತೆ ಇಲ್ಲ: ರಾಹುಲ್ ಹೇಳಿಕೆಗೆ ಲೋಕಸಭೆಯಲ್ಲಿ ನಗೆಗಡಲು

ನವದೆಹಲಿ: ನನಗೂ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನೆಯಲ್ಲಿ ಪತ್ನಿಯ ಚಿಂತೆ ಇಲ್ಲದಿರುವುದರಿಂದ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ನಾವಿಬ್ಬರೂ ನಿರಾತಂಕವಾಗಿ ಮಾತನಾಡಬಹುದು ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ವಿಶೇಷ ಸಂಸತ್ ಅಧಿವೇಶನದಲ್ಲಿ ಶುಕ್ರವಾರ ನಡೆದ ಮಹಿಳಾ ಮೀಸಲಾತಿ ಮಸೂದೆ  ಕುರಿತ ಚರ್ಚೆ ವೇಳೆ ಅವರು ಮಾತನಾಡಿದ ರಾಹುಲ್ ಮಹಿಳೆಯರು ಕೇಂದ್ರ ಶಕ್ತಿ, ನಮ್ಮ ರಾಷ್ಟ್ರೀಯ ಪರಿಕಲ್ಪನೆಯಲ್ಲಿ, ರಾಷ್ಟ್ರದ ದೃಷ್ಟಿಕೋನದಲ್ಲಿ ಒಂದು ಪ್ರೇರಕ ಶಕ್ತಿ. ಈ ಸದನದಲ್ಲಿರುವ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಹಿಳೆಯರಿಂದ ಪ್ರಭಾವಿತರಾಗಿದ್ದಾರೆ ಎಂದು ಹೇಳಿದರು.

ತಾಯಿ, ಸಹೋದರಿ ಅಥವಾ ಪತ್ನಿ ಅಂತಹ ಸಂಬಂಧಗಳ ರೂಪದಲ್ಲಿ ಪ್ರಭಾವ ಹೊಂದಿದ್ದಾರೆ. ಆದರೆ ನನಗೆ ಮತ್ತು ಮೋದಿ ಅವರಿಗೆ ಪತ್ನಿ ಸಮಸ್ಯೆ ಇಲ್ಲ. ನಮಗೆ ತಾಯಂದಿರು, ಸೋದರಿಯರು ಇದ್ದಾರೆ ಎಂದು ಹೇಳಿದಾಗ ಸದನ ನಗೆಗಡಲಲ್ಲಿ ತೇಲುವಂತೆ ಮಾಡಿತು.

ನನಗೆ ಕಳೆದ 20 ವರ್ಷದ ರಾಜಕೀಯ ಜೀವನದಲ್ಲಿ ಮಾಡಲಾಗದ್ದನ್ನು ನನ್ನ ಸಹೋದರಿ 5 ನಿಮಿಷದಲ್ಲಿ ಸಾಧಿಸಿದ್ದನ್ನು ನಾನು ನೋಡಿದೆ. ಅದು ಅಮಿತ್ ಶಾ ಅವರ ಮುಖದಲ್ಲಿ ನಗು ತರಿಸಲು ಆಕೆಗೆ ಸಾಧ್ಯವಾಗಿದ್ದು ಎಂದು ಮತ್ತೊಂದು ಹಾಸ್ಯ ಚಟಾಕಿ ಹಾರಿಸಿದರು.

ಮಹಿಳಾ ಮೀಸಲಾತಿ ಬೆಂಬಲಿಸಿ ಮಾತನಾಡಿದ ಅವರು, ತಮ್ಮ ಪಕ್ಷವು ಮಹಿಳಾ ಪ್ರಾತಿನಿಧ್ಯವನ್ನು ವಿರೋಧಿಸುತ್ತಿಲ್ಲ. ಆದರೆ ಮಸೂದೆಯ ಸಮಯ ಮತ್ತು ರಚನೆಯ ಹಿಂದಿನ ರಾಜಕೀಯ ಉದ್ದೇಶವನ್ನು ಪ್ರಶ್ನಿಸುತ್ತಿದೆ. ಆಡಳಿತಾರೂಢ ಎನ್‌ಡಿಎ ಸರ್ಕಾರ ಮಹಿಳೆಯರ ಸಬಲೀಕರಣ ಮಡುವುದಕ್ಕಿಂತ ಹೆಚ್ಚಾಗಿ ಚುನಾವಣಾ ತಂತ್ರವಾಗಿ ಬಳಸುತ್ತಿದೆ ಎಂದು ದೂರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments