Monday, June 8, 2026
Google search engine
Homeರಾಜ್ಯವಿದ್ಯುತ್ ದರ: ಬೆಂಗಳೂರು- ಮೈಸೂರಿಗೆ ಹೊರೆ, ಉಳಿದೆಡೆ ಇಳಿಕೆ

ವಿದ್ಯುತ್ ದರ: ಬೆಂಗಳೂರು- ಮೈಸೂರಿಗೆ ಹೊರೆ, ಉಳಿದೆಡೆ ಇಳಿಕೆ

ಬೆಂಗಳೂರು: ಇದೇ ಮೊದಲ ಬಾರಿ ಕೆಇಆರ್‌ಸಿ ವಿದ್ಯುತ್ ದರ ಏರಿಕೆ ಮತ್ತು ಇಳಿಕೆ ಎರಡನ್ನೂ ಏಕಕಾಲಕ್ಕೆ ಕೈಗೊಂಡಿದೆ.

ಬೆಸ್ಕಾಂ ಕಂಪನಿಯ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ 35 ಪೈಸೆ, ಮೈಸೂರಿನ ಚೆಸ್ಕೋ ಕಂಪನಿ ವ್ಯಾಪ್ತಿಯ ಗ್ರಾಹಕರಿಗೆ 15 ಪೈಸೆ ಹೆಚ್ಚಳ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಮಂಗಳೂರು ವ್ಯಾಪ್ತಿಯ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 9 ಪೈಸೆ, ಹುಬ್ಬಳ್ಳಿ ಮತ್ತು ಕಲಬುರ್ಗಿಯ ಗ್ರಾಹಕರಿಗೆ ತಲಾ ಪ್ರತಿ ಯೂನಿಟ್‌ಗೆ 10 ಪೈಸೆ ಹಿಂತಿರುಗಿಸಲು ತಿಳಿಸಿದೆ.

2025ರಲ್ಲಿ ಕೆಇಆರ್‌ಸಿ ಅನುಮೋದನೆ ನೀಡಿದ್ದ ವಿದ್ಯುತ್ ಬಳಕೆಯಲ್ಲಿ ಕೆಲವು ಕಂಪನಿಗಳು ಹೆಚ್ಚಿಗೆ ಬಳಸಿವೆ. ಕೆಲವು ಕಂಪನಿಗಳು ಕಡಿಮೆ ಬಳಸಿ ಗ್ರಾಹಕರಿಂದ ಹೆಚ್ಚಿಗೆ ಹಣ ಪಡೆದಿತ್ತು. ಕೆಇಆರ್‌ಸಿ ಪ್ರತಿವರ್ಷದಂತೆ ಪ್ರತಿ ವಿತರಣ ಕಂಪನಿಯ ಹಣಕಾಸು ಲೆಕ್ಕವನ್ನು ಪರಿಶೀಲಿಸಿ ಬೆಂಗಳೂರು ಮತ್ತು ಮೈಸೂರು ಕಂಪನಿಗಳಿಗೆ ಮಾತ್ರ ಆರ್ಥಿಕ ಕೊರತೆ ಇದ್ದು ಅದನ್ನು ಗ್ರಾಹಕರಿಂದ ಪಡೆಯಲು ತಿಳಿಸಿದೆ.

ಇದು ಮೇ 1ರಿಂದ ಜಾರಿಗೆ ಬರುತ್ತದೆ. ಈ ರೀತಿ ಸಂಗ್ರಹಿಸಿದ ಹೆಚ್ಚುವರಿ ಹಣವನ್ನು ಪ್ರತ್ಯೇಕವಾಗಿಡಲು ಸೂಚಿಸಿದೆ. ಮಂಗಳೂರು. ಹುಬ್ಬಳ್ಳಿ ಮತ್ತು ಗುಲ್ಬರ್ಗ ಕಂಪನಿಗಳು ಕಡಿಮೆ ವೆಚ್ಚ ಮಾಡಿದ್ದು ಗ್ರಾಹಕರಿಂದ ಹೆಚ್ಚುವರಿ ಹಣ ಪಡೆದಿರುವುದರಿಂದ ಅವುಗಳನ್ನು ಮೇ೧ ರಿಂದ ನೀಡುವ ಬಿಲ್ ನಲ್ಲಿ ಸಮಕಂತುಗಳಲ್ಲಿ ಹಿಂತಿರುಗಿಸಲು ಸೂಚಿಸಿದೆ.

ಇದರಿಂದ ಪ್ರತಿ ಕಂಪನಿಯಲ್ಲೂ ವಿದ್ಯುತ್ ದರ ವ್ಯತ್ಯಾಸಗೊಳ್ಳಲಿದೆ. ರಾಜ್ಯಕ್ಕೆಲ್ಲ ಒಂದೇ ದರ ಇದ್ದರೂ ಪ್ರತಿ ಕಂಪನಿಯ ಆರ್ಥಿಕ ಪರಿಸ್ಥಿತಿಯ ಮೇಲೆ ಅವಲಂಬನೆ ಆಗಲಿದೆ. ಬಹುವಾರ್ಷಿಕ ವಿದ್ಯುತ್ ದರದ ಪರಿಸ್ಥಿತಿ ಏನು ಎಂಬುದು ಸ್ಪಷ್ಟವಾಗಿಲ್ಲ. ಅಲ್ಲದೆ ವಿದ್ಯುತ್ ಖರೀದಿ ದರದ ಮೇಲೆ ಗ್ರಾಹಕ ದರ ನಿಗದಿಯಾಗುತ್ತದೆ. ಈಗ ವಿತರಣ ಕಂಪನಿಗಳು ಕಡಿಮೆದರದ ವಿದ್ಯುತ್ ನೀಡುವಂತೆ ಕೇಳಬಹುದು. ಬೆಂಗಳೂರು ಕಂಪನಿ ಅತಿ ಹೆಚ್ಚು ವಿದ್ಯುತ್ ಬಳಕೆ ಮಾಡುತ್ತಿದೆ. ಈ ಕಂಪನಿಗಳಲ್ಲಿ ಗ್ರಾಹಕರೂ ಹೆಚ್ಚು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments