ನವದೆಹಲಿ: ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಮಹಿಳಾ ಮೀಸಲಾತಿ ಮಸೂದೆಗೆ ಸೋಲಾಗಿದೆ. ಈ ಮೂಲಕ ನರೇಂದ್ರ ಮೋದಿ ಸರ್ಕಾರಕ್ಕೆ ಮುಖಭಂಗವಾಗಿದೆ.
ಲೋಕಸಭೆ 3 ದಿನಗಳ ವಿಶೇಷ ಅಧಿವೇಶನದ ಎರಡನೇ ದಿನವಾದ ಶುಕ್ರವಾರ ನಡೆದ ಮತದಾನದಲ್ಲಿ ನಿರೀಕ್ಷೆಯಂತೆ ಮಹಿಳಾ ಮೀಸಲಾತಿಗೆ ಸೋಲಾಗಿದೆ. ಮಹಿಳಾ ಮಸೂದೆಗೆ ಸೋಲಾಗುತ್ತಿದ್ದಂತೆ ಕೇಂದ್ರ ಸರ್ಕಾರ ಕ್ಷೇತ್ರ ಪುನರ್ ವಿಂಗಡಣೆ ಮಸೂದೆಗಳನ್ನು ಮತಕ್ಕೆ ಹಾಕದೇ ಹಿಂದೆ ಸರಿಯಲು ಕೇಂದ್ರ ಸರ್ಕಾರ ಪ್ರಕಟಿಸಿತು.
ಮಹಿಳಾ ಮಸೂದೆಗೆ ಸೋಲಾಗುತ್ತಿದ್ದಂತೆ ಕೇಂದ್ರ ಸಂಸದೀಯ ಸಚಿವ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಉಳಿದೆರಡು ಮಸೂದೆಯನ್ನು ಮತಕ್ಕೆ ಹಾಕುವ ನಿರ್ಧಾರದಿಂದ ಕೇಂದ್ರ ಸರ್ಕಾರ ಹಿಂದೆ ಸರಿದಿದ್ದೇವೆ. ಆದರೆ ಮುಂದಿನ ಬಾರಿ ಮತ್ತಷ್ಟು ವಿಶ್ವಾಸದೊಂದಿಗೆ ಮಂಡಿಸಲಿದ್ದೇವೆ ಎಂದು ಹೇಳಿದರು.
542 ಸದಸ್ಯರ ಲೋಕಸಭೆಯಲ್ಲಿ 528 ಸದಸ್ಯರು ಮತ ಚಲಾಯಿಸಿದ್ದು, ಮಸೂದೆ ಪಾಸಾಗಲು 326 ಮತಗಳು ಬೇಕಾಗಿದ್ದವು. ಆದರೆ 48 ಮತಗಳ ಕೊರತೆಯಿಂದ ಸೋಲಾಗಿದೆ.
ಒಟ್ಟಾರೆ ಸೀಮಾ ಮತಗಳಲ್ಲಿ ಮಸೂದೆ ಪರ 298 ಮತ್ತು ವಿರುದ್ಧ 230 ಮತಗಳು ದಾಖಲಾದವು. ಮಸೂದೆ ಪಾಸಾಗಲು ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರಕ್ಕೆ 356 ಮತಗಳು ಬೇಕಾಗಿದ್ದವು.
ಸಂಜೆ 4 ಗಂಟೆಗೆ ಮತದಾನದ ಸಮಯ ನಿಗದಿಯಾಗಿದ್ದು, ಸುದೀರ್ಘ ಚರ್ಚೆಯ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸುದೀರ್ಘ ವಿವರಣೆ ನೀಡಿದ ನಂತರ 7 ಗಂಟೆ 30 ನಿಮಿಷಕ್ಕೆ ಮತದಾನ ನಡೆಯಿತು.
ಸಂಜೆ 7.30ರ ಸುಮಾರಿಗೆ ನಡೆದ ಮತದಾನದಲ್ಲಿ 489 ಸದಸ್ಯರು ಮತ ಚಲಾಯಿಸಿದ್ದು, ಮಸೂದೆ ಪರ ಮಸೂದೆ ಪರ 278 ಹಾಗೂ ಮಸೂದೆ ವಿರೋಧ 211 ಸದಸ್ಯರು ಮತ ಬಿದ್ದವು.
ಬಿಜೆಪಿ ಪರ 293 ಮತಗಳಿದ್ದರೆ ಕಾಂಗ್ರೆಸ್ ಬಳಿ 230 ಮತಗಳು ಇದ್ದವು. ವಿಶೇಷವೆಂದರೆ ಎರಡೂ ಪಕ್ಷಗಳ ಸದಸ್ಯರು ಗೈರು ಹಾಜರಾಗಿದ್ದು, ಈ ಬಗ್ಗೆ ಅಧಿಕೃತ ಹೇಳಿಕೆಯಿಂದ ಬೆಳಕಿಗೆ ಬರಬೇಕಿದೆ.
ಮಸೂದೆ ಮಂಡನೆ ಕುರಿತು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಸದಸ್ಯರಿಗೆ ವಿಪ್ ಜಾರಿ ಮಾಡಿದ್ದವು.



