Tuesday, July 28, 2026
Google search engine
Homeಕ್ರೀಡೆಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಭಾರೀ ಮೊತ್ತದ ಬಹುಮಾನ!

ಚಾಂಪಿಯನ್ಸ್ ಟ್ರೋಫಿ ವಿಜೇತರಿಗೆ ಭಾರೀ ಮೊತ್ತದ ಬಹುಮಾನ!

2017ರ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ವಿಜೇತರಿಗೆ ಐಸಿಸಿ ಭಾರೀ ಮೊತ್ತದ ಬಹುಮಾನ ಘೋಷಿಸಿದೆ.

ಮಾರ್ಚ್ 9ರಿಂದ ಆರಂಭಗೊಳ್ಳಲಿರುವ 8 ತಂಡಗಳ ಚಾಂಪಿಯನ್ಸ್ ಟ್ರೋಫಿಯಲ್ಲಿ ವಿಜೇತ ತಂಡಕ್ಕೆ ಐಸಿಸಿ 2.24 ದಶಲಕ್ಷ ಡಾಲರ್ ಅಂದರೆ ಸುಮಾರು 20.8 ಕೋಟಿ ರೂ. ಬಹುಮಾನ ಮೊತ್ತ ಘೋಷಿಸಿದೆ.

ರನ್ನರ್ ಅಪ್ ತಂಡಕ್ಕೆ 1.12 ದಶಲಕ್ಷ ಡಾಲರ್ ಅಂದರೆ ಸುಮಾರು 10.4 ಕೋಟ ರೂ. ಬಹುಮಾನ ಮೊತ್ತ ಲಭಿಸಲಿದೆ.
ಈ ಬಾರಿಯ ಟೂರ್ನಿಯ ಮತ್ತೊಂದು ವಿಶೇಷ ಅಂದರೆ ಪಾಲ್ಗೊಂಡ 8 ತಂಡಗಳಿಗೂ ದೊಡ್ಡ ಮೊತ್ತ ದೊರೆಯುತ್ತಿರುವುದು. ಈ ಮೂಲಕ 2017ರಲ್ಲಿ ನಡೆದ ಟೂರ್ನಿಗೆ ಹೋಲಿಸಿದರೆ ಈ ಬಾರಿಯ ಬಹುಮಾನ ಮೊತ್ತದಲ್ಲಿ ಶೇ.53ರಷ್ಟು ಏರಿಕೆ ಮಾಡಲಾಗಿದೆ.

ಸೆಮಿಫೈನಲ್ ನಲ್ಲಿ ಸೋತ ತಂಡಗಳಿಗೆ 5,60,000 ಡಾಲರ್ [5.2 ಕೋಟಿ ರೂ.] ದೊರೆಯಲಿದೆ. ಗುಂಪಿನಲ್ಲಿ ಆಡಿದ ಪ್ರತಿಯೊಂದು ತಂಡಗಳಿಗೂ 34 ಸಾವಿರ ಡಾಲರ್ ಮೊತ್ತ ಸಿಗಲಿದೆ. ಅಲ್ಲದೇ 5 ಅಥವಾ 6ನೇ ಸ್ಥಾನಿಯಾಗಿ ಟೂರ್ನಿಯಲ್ಲಿ ಅಭಿಯಾನ ಅಂತ್ಯಗೊಳಿಸಿದ ತಂಡಕ್ಕೆ 3,50,000 ಡಾಲರ್ [1.2 ಕೋಟಿ ರೂ.] ಹಾಗೂ 7 ಮತ್ತು 8ನೇ ಸ್ಥಾನಕ್ಕೆ ಕುಸಿದ ತಂಡಗಳಿಗೆ 1,40,000 ಡಾಲರ್ [29 ಲಕ್ಷ ರೂ.] ದೊರೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments