Monday, June 8, 2026
Google search engine
Homeದೇಶದೇಶದ ಇತಿಹಾಸದಲ್ಲೇ ಅತೀ ದೊಡ್ಡ ರಕ್ಷಣಾ ಒಪ್ಪಂದ: ಕೇಂದ್ರದಿಂದ 3.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ...

ದೇಶದ ಇತಿಹಾಸದಲ್ಲೇ ಅತೀ ದೊಡ್ಡ ರಕ್ಷಣಾ ಒಪ್ಪಂದ: ಕೇಂದ್ರದಿಂದ 3.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ 114 ರಾಫೆಲ್‌ ಯುದ್ಧ ವಿಮಾನ ಖರೀದಿ

ದೇಶದ ಇತಿಹಾಸದಲ್ಲೇ ಅತೀ ದೊಡ್ಡ ರಕ್ಷಣಾ ಒಪ್ಪಂದಕ್ಕೆ ಮುಂದಾಗಿರುವ ಕೇಂದ್ರ 3.5 ಲಕ್ಷ ಕೋಟಿ ರೂ. ವೆಚ್ಚದಲ್ಲಿ 114 ರಾಫೆಲ್‌ ಯುದ್ಧ ವಿಮಾನಗಳನ್ನು ಖರೀದಿಸಲಿದೆ.

ಮುಂದಿನ ವಾರ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಲ್‌ ಮಾರ್ಕೊ ಭಾರತಕ್ಕೆ ಭೇಟಿ ನೀಡಲಿದ್ದು, ಈ ವೇಳೆ ಮಹತ್ವದ ರಕ್ಷಣಾ ಒಪ್ಪಂದಕ್ಕೆ ಭಾರತ ಸಹಿ ಹಾಕಲು ಸಿದ್ಥತೆ ನಡೆಸಿದೆ.

ಈಗಾಗಲೇ ಫ್ರಾನ್ಸ್‌ ನಿಂದ ರಾಫೆಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಭಾರತ, ಪಾಕಿಸ್ತಾನ ಮತ್ತು ಚೀನಾದ ದಾಳಿಯ ಒತ್ತಡಗಳ ಕಾರಣ ದೊಡ್ಡ ಮಟ್ಟದಲ್ಲಿ ರಕ್ಷಣಾ ಒಪ್ಪಂದಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.

ಭಾರತದ ವಾಯುಪಡೆಗೆ ರಾಫೆಲ್‌ ಯುದ್ಧ ವಿಮಾನಗಳ ಸೇರ್ಪಡೆ ಕುರಿತು ರಕ್ಷಣಾ ಸಚಿವಾಲಯ ತೀರ್ಮಾನಿಸಿದೆ. ಒಪ್ಪಂದದ ಕುರಿತು ಸಿದ್ಧತೆ ನಡೆಸಿದೆ. ಇದು ದೇಶದ ಇತಿಹಾಸದಲ್ಲೇ ಅತೀ ದೊಡ್ಡ ರಕ್ಷಣಾ ಒಪ್ಪಂದವಾಗಲಿದೆ. ಅಲ್ಲದೇ ಇದರಲ್ಲಿ 100 ರಾಫೆಲ್‌ ಯುದ್ಧ ವಿಮಾನಗಳು ಭಾರತದಲ್ಲಿ ಸಿದ್ಧಪಡಿಸುವ ಷರತ್ತು ವಿಧಿಸಲಿದೆ. ಇದರಿಂದ ಭಾರತದಲ್ಲಿ ಈ ವಿಮಾನಗಳು ಸಿದ್ಧಗೊಳ್ಳುವ ಸಾಧ್ಯತೆ ಇದೆ.

ಡಬಲ್‌ ಇಂಜಿನ್‌ ಹಾಗೂ ಹಲವು ಸ್ತರಗಳಲ್ಲಿ ಬಹುಪಯೋಗಿ ಆಗಿರುವ ರಾಫೆಲ್‌ ಯುದ್ಧ ವಿಮಾನ ಸೇರ್ಪಡೆಯಿಂದ ಜಗತ್ತಿನ ಅತ್ಯಂತ ಅಪಾಯಕಾರಿ ವಿಮಾನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿದ ರಾಷ್ಟ್ರಗಳ ಸಾಲಿಗೆ ಭಾರತ ಸೇರಲಿದೆ.

ಭಾರತ ಈಗಾಗಲೇ 36 ರಾಫೆಲ್‌ ಯುದ್ಧ ವಿಮಾನಗಳನ್ನು ಖರೀದಿಸಿದೆ. ಮೊದಲ ಬಾರಿ ಸಿ ವಿಭಾಗದ ವಿಮಾನಗಳನ್ನು ಖರೀದಿಸಿತ್ತು. 2024 ಡಿಸೆಂಬರ್‌ ನಲ್ಲಿ ಎಂ ದರ್ಜೆಯ 26 ರಾಫೆಲ್‌ ಯುದ್ದ ವಿಮಾನಗಳನ್ನು 63,000 ಕೋಟಿ ರೂ.ಗೆ ಖರೀದಿಸಲಾಗಿತ್ತು. ಈ ಯುದ್ಧ ವಿಮಾನಗಳ ಖರೀದಿ ಮೊತ್ತದ ವ್ಯತ್ಯಾಸದ ಕುರಿತು ಸಾಕಷ್ಟು ವಿವಾದ ಉಂಟಾಗಿತ್ತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments