ನಾಗಪಟ್ಟಿಣಂ: ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ಕೊರಮಂಡಲ್ ಕರಾವಳಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ೩೦ಕ್ಕೂ ಹೆಚ್ಚು ಬೆಸ್ತರ ಮೇಲೆ ಶ್ರೀಲಂಕಾದ ಕಡಲ್ಗಳ್ಳರ ಗುಂಪೊಂದು ಶುಕ್ರವಾರ ನಡೆಸಿದೆ
ಈ ಘಟನೆಯಲ್ಲಿ 17 ಮಂದಿ ಬೆಸ್ತರು ತೀವ್ರವಾಗಿ ಗಾಯಗೊಂಡಿದ್ದಾರೆ. ಫೈಬರ್ ದೋಣಿಯಲ್ಲಿ ಸಮುದ್ರಕ್ಕೆ ತೆರಳಿದ್ದ ಮೀನುಗಾರರು, ಕೊಡಿಯಾಕ್ಕರೈನ ಆಗ್ನೇಯ ಭಾಗದಲ್ಲಿದ್ದಾಗ, ಸ್ಪೀಡ್ ಬೋಟ್‌ನಲ್ಲಿ ಆಗಮಿಸಿದ ಆರು ಜನರು ಹರಿತವಾದ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸುತ್ತಮುತ್ತಲಿನ ಹಲವು ದೋಣಿಗಳನ್ನು ಗುರಿಯಾಗಿಸುವ ಮೊದಲು ಜಿಪಿಎಸ್ ಉಪಕರಣಗಳು ಮತ್ತು ಮೀನುಗಾರಿಕೆ ಬಲೆಗಳನ್ನು ದಾಳಿಕೋರರು ಲೂಟಿ ಮಾಡಿದ್ದಾರೆ. ಕದ್ದ ವಸ್ತುಗಳ ಮೌಲ್ಯವು ಸುಮಾರು 10 ಲಕ್ಷ ರೂಪಾಯಿಗಳಾಗಿದೆ ಎಂದು ಅಂದಾಜಿಸಲಾಗಿದೆ.
ಗಾಯಗೊಂಡ ೧೭ ಮೀನುಗಾರರನ್ನು ದಡಕ್ಕೆ ಮರಳಿದ ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಘಾತಗೊಂಡಿರುವ ಮೀನುಗಾರರು, ಈ ದಾಳಿಯು ಭಾರತೀಯ ಪ್ರಾದೇಶಿಕ ಜಲಪ್ರದೇಶದಲ್ಲಿ ನಡೆದಿದೆ ಎಂದು ಆರೋಪಿಸಿದ್ದಾರೆ.
ಶ್ರೀಲಂಕಾದ ಕಡಲ್ಗಳ್ಳರು ನಮ್ಮ ಮೇಲೆ ದಾಳಿ ಮಾಡಿದ್ದಾರೆ. ಹಲವು ಮೀನುಗಾರರು ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸುತ್ತೇವೆ.
ನಾವು ಈಗ ಮುಷ್ಕರದಲ್ಲಿದ್ದೇವೆ. ಇಂತಹ ದಾಳಿಗಳು ಮುಂದುವರಿದರೆ, ಅನಿರ್ದಿಷ್ಟಾವಧಿಯ ಪ್ರತಿಭಟನೆ ಆರಂಭಿಸುತ್ತೇವೆ” ಎಂದು ಸೆರುದೂರಿನ ಮೀನುಗಾರ ಗಜೇಂದ್ರನ್ ತಿಳಿಸಿದ್ದಾರೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇದೇ ರೀತಿಯ ಘಟನೆಯೊಂದರಲ್ಲಿ, ಶ್ರೀಲಂಕಾದ ಕಡಲ್ಗಳ್ಳರ ಗುಂಪೊಂದು ತಮಿಳುನಾಡಿನ ಮೂವರು ಮೀನುಗಾರರ ಮೇಲೆ ದಾಳಿ ನಡೆಸಿ ದರೋಡೆ ಮಾಡಿತ್ತು.



