Sunday, May 17, 2026
Google search engine
Homeದೇಶಗೌಪ್ಯವಾಗಿ ಪಾಕಿಸ್ತಾನಿ ಮಹಿಳೆ ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧ ಸೇನೆಯಿಂದ ವಜಾ

ಗೌಪ್ಯವಾಗಿ ಪಾಕಿಸ್ತಾನಿ ಮಹಿಳೆ ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧ ಸೇನೆಯಿಂದ ವಜಾ

ಪಾಕಿಸ್ತಾನ ಮಹಿಳೆಯನ್ನು ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧನನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸೇನೆಯಿಂದ ವಜಾಗೊಳಿಸಲಾಗಿದೆ.

ಪಾಕಿಸ್ತಾನಿ ಪ್ರಜೆಯನ್ನು ಮದುವೆ ಆಗಿದ್ದ ಸಿಆರ್ ಪಿಎಫ್ ಯೋಧ ಮುನೀರ್ ಅಹ್ಮದ್ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ಭಾರತದಲ್ಲಿ ನೆಲೆಸುವಂತೆ ನೋಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆದೇಶ ಉಲ್ಲಂಘಿಸಿದ್ದಕ್ಕಾಗಿ ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ.

ಪೆಹಲ್ಗಾವ್ ನಲ್ಲಿ ಉಗ್ರರು 26 ಪ್ರವಾಸಿಗರನ್ನು ಹತ್ಯೆಗೈದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಿ ಪ್ರಜೆಗಳು ಭಾರತ ತೊರೆಯುವಂತೆ ಸೂಚಿಸಿತ್ತು. ಸರ್ಕಾರ ನೀಡಿದ್ದ 72 ಗಂಟೆಗಳ ಅವಧಿ ಮುಕ್ತಾಯಗೊಂಡಿದ್ದರೂ ಮುನೀರ್ ಅಹ್ಮದ್ ಪತ್ನಿಯನ್ನು ಪಾಕಿಸ್ತಾನಕ್ಕೆ ಕಳುಹಿಸದೇ ಮನೆಯಲ್ಲೇ ಉಳಿಸಿಕೊಂಡಿದ್ದ.

ಜಮ್ಮು ಕಾಶ್ಮೀರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮುನೀರ್ ಅಹ್ಮದ್ 2024ರಲ್ಲಿ ಪಾಕಿಸ್ತಾನದ ಪಂಜಾಬ್ ಮೂಲದ ಮಿಲನ್ ಖಾನ್ ಅವರನ್ನು ಮದುವೆ ಆಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಆಗಿದ್ದ ಇಬ್ಬರೂ ಆನ್ ಲೈನ್ ನಲ್ಲಿಯೇ ಮದುವೆ ಕೂಡ ಆಗಿದ್ದರು.

ದೀರ್ಘಕಾಲ ಕಾದ ನಂತರ ಮಿಲನ್ ಖಾನ್ 2025 ಮಾರ್ಚ್ ನಲ್ಲಿ ಭಾರತಕ್ಕೆ ಆಗಮಿಸಿದ್ದರು. ಅಲ್ಪಾವಧಿಯ ವೀಸಾ ಪಡೆದು ಬಂದಿದ್ದ ಮಿಲನ್ ಖಾನ್ ಅವರ ವೀಸಾ ಮಾರ್ಚ್ 22ಕ್ಕೆ ಮುಕ್ತಾಯಗೊಂಡಿತ್ತು.

ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಏಪ್ರಿಲ್ 22ರಂದು ದೇಶ ತೊರೆಯುವಂತೆ ಮಿಲನ್ ಗೆ ನೋಟಿಸ್ ಜಾರಿ ಮಾಡಲಾಗಿತ್ತು. ವಾಘಾ ಗಡಿ ಮೂಲಕ ಪಾಕಿಸ್ಥಾನಕ್ಕೆ ಮರಳುವ ಕೆಲವೇ ಸಮಯಕ್ಕೆ ಮುನ್ನ ಭಾರತದಲ್ಲಿ ತಂಗಲು ನ್ಯಾಯಾಲಯ ಅನುಮತಿ ನೀಡಿತ್ತು.

ಮೂಲಗಳ ಪ್ರಕಾರ ಮುನೀರ್ ಅಹ್ಮದ್ ತನ್ನ ಮದುವೆ ವಿಷಯವನ್ನು ಮುಚ್ಚಿಟ್ಟಿದ್ದೂ ಅಲ್ಲದೇ ಪತ್ನಿಯ ವಿವರ ನೀಡದೇ ಇರುವ ಕಾರಣಕ್ಕೆ ಸೇವೆಯಿಂದ ವಜಾಗೊಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments