ಭೂಮಿಗೆ ಅತ್ಯಂತ ಸಮೀಪದ ಅಪಾಯಕಾರಿ ಮಟ್ಟದಲ್ಲಿ ಒಂದಲ್ಲ, ಎರಡಲ್ಲ, 6 ಕ್ಷುದ್ರಗ್ರಹಗಳು ಹಾದು ಹೋಗಲಿವೆ.
ಅಮೆರಿಕದ ಬಾಹ್ಯಕಾಶ ಸಂಸ್ಥೆ ನಾಸಾ ಈ ವಿಷಯವನ್ನು ಪ್ರಕಟಿಸಿದ್ದು, ಭೂಮಿಗೆ ಅತ್ಯಂತ ಸಮೀಪದಲ್ಲಿ ಒಂದೇ ದಿನ ಹೆಚ್ಚು ಕಡಿಮೆ ಒಂದೇ ಅವಧಿಯಲ್ಲಿ ಒಂದರ ಹಿಂದೆ ಒಂದರಂತೆ 6 ಕ್ಷುದ್ರಗ್ರಹಗಳು ಹಾದು ಹೋಗಲಿವೆ.
ಬುಧವಾರ ರಾತ್ರಿ ಅಂದರೆ ಡಿಸೆಂಬರ್ ೧೧ರಂದು ತಡರಾತ್ರಿ 12 ಗಂಟೆಗೆ ಕ್ಷುದ್ರಗ್ರಹಗಳು ಹಾದು ಹೋಗಲಿವೆ. ಈ ಕ್ಷುದ್ರಗ್ರಹಗಳ ಪೈಕಿ ಒಂದು 4.50 ಸಾವಿರ ಕಿ.ಮೀ. ದೂರದಲ್ಲಿ ಅಂದರೆ ಅತೀ ಸಮೀಪವಾಗಿ ಹಾದು ಹೋಗಲಿವೆ.
6 ಕ್ಷುದ್ರಗ್ರಹಗಳ ವಿವರಗಳು
2024 XL11: ಇದು ಇತರೆ ಕ್ಷುದ್ರಗ್ರಹಗಳಿಗೆ ಹೋಲಿಸಿದರೆ ಅತ್ಯಂತ ಸಣ್ಣ ಕ್ಷುದ್ರಗ್ರಹವಾಗಿದೆ. 4.7 ಮತ್ತು 10 ಮೀಟರ್ ವಿಸ್ತೀರ್ಣ ಹೊಂದಿದ್ದು, ಮಧ್ಯರಾತ್ರಿ ಭೂಮಿಯಿಂದ ಸರಿಸುಮಾರು 1.18 ದಶಲಕ್ಷ ಕಿ.ಮೀ. ದೂರದಲ್ಲಿ ಹಾದುಹೋಗುತ್ತದೆ.
2018 XU3: 21ರಿಂದ 48 ಮೀಟರ್ ದೊಡ್ಡದಾಗಿದ್ದು, ಈ ಕ್ಷುದ್ರಗ್ರಹವು ಸುಮಾರು 6.4 ದಶಲಕ್ಷ ಕಿ.ಮೀ. ದೂರದಲ್ಲಿ ಸಮೀಪಿಸುತ್ತದೆ.
2024 XK1: 7.3ರಿಂದ 16 ಮೀಟರ್ ಅಳತೆ ಹೊಂದಿದ್ದು, ಇದು 1.87 ದಶಲಕ್ಷ ಕಿ.ಮೀ. ಅಂತರದಲ್ಲಿ ಹಾದು ಹೋಗಲಿವೆ.
2024 WB14: ಈ ಕ್ಷುದ್ರಗ್ರಹ, 21ರಿಂದ 46 ಮೀಟರ್ ಅಗಲ ಹೊಂದಿದ್ದು, 6.9 ದಶಲಕ್ಷ ಕಿ. ಮೀ.ಹತ್ತಿರ ಬರುತ್ತದೆ.
2007 XB23: 10 ರಿಂದ 23 ಮೀಟರ್ ಗಾತ್ರದಲ್ಲಿ, ಇದು ಚಂದ್ರನ ಕಕ್ಷೆಯೊಳಗೆ ಹಾದು ಹೋಗಲಿವೆ.