ಗೋಡೆಯ ಮೇಲೆ ಟೇಪ್ ಹಾಕಿ ಅಂಟಿಸಿದ್ದ ಬಾಳೆಹಣ್ಣನ್ನು 52 ಕೋಟಿ ರೂ.ಗೆ ಖರೀದಿಸಿದ್ದ ಕ್ರಿಸ್ಪೊ ಕರೆನ್ಸಿ ಸಂಸ್ಥಾಪಕ ಚೀನಾದ ಮೂಲದ ಉದ್ಯಮಿ ಜಸ್ಟಿನ್ ಸನ್ ಎಲ್ಲರ ಮುಂದೆ ಸೇವಿಸಿದ್ದಾರೆ.
ಶುಕ್ರವಾರ ಹಾಂಕಾಂಗ್ ನ ಐಷಾರಾಮಿ ಹೋಟೆಲ್ ಮುಂದೆ ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾಮಾಜಿಕ ಜಾಲತಾಣದ ಪ್ರಭಾವಿಗಳ ಸಮ್ಮುಖದಲ್ಲಿ ಕಲಾಕೃತಿಯಾಗಿ ಇಡಲಾಗಿದ್ದ ಬಾಳೆಹಣ್ಣನ್ನು ತಿಂದಿದ್ಧಾರೆ.
ಇಟಲಿಯನ್ ಕಲಾವಿದ ಮೌರಿಜೊ ಕೆಟ್ಟಾಲಿಯನ್ ಗೋಡೆಗೆ ಬಾಳೆಹಣ್ಣನ್ನು ಟೇಪ್ ನಿಂದ ಅಂಟಿಸಿ ಇದೊಂದು ಐತಿಹಾಸಿಕ ಚಿತ್ರ ಎಂದು ಬಣ್ಣಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಬಾಳೆಹಣ್ಣನ್ನು ಹರಾಜಿನಲ್ಲಿ 6.2 ದಶಲಕ್ಷ ಡಾಲರ್ [52.4 ಕೋಟಿ ರೂ.] ಗೆ ಖರೀದಿಸಿದ್ದ ಜಸ್ಟಿನ್ ಸನ್, ಮಾಮೂಲು ಬಾಳೆಹಣ್ಣಿಗಿಂತ ಈ ಬಾಳೆಹಣ್ಣು ಹೆಚ್ಚು ರುಚಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಕಳೆದ ವಾರ ಈ ಬಾಳೆಹಣ್ಣನ್ನು ಖರೀದಿಸಿದ ಬೆನ್ನಲ್ಲೇ ಏನು ಮಾಡುತ್ತೀರಾ ಎಂಬ ಪ್ರಶ್ನೆಗೆ ಆ ಬಾಳೆಹಣ್ಣನ್ನು ತಿನ್ನುತ್ತೇನೆ ಎಂದು ಜಸ್ಟಿನ್ ಸನ್ ಘೋಷಿಸಿದ್ದರು.
ಇದು ಕೇವಲ ಕಲೆ ಅಲ್ಲ, ಕಲೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸುದ್ದಿಗಳ ಪ್ರತೀಕ. ಮುಂದಿನ ದಿನಗಳಲ್ಲಿ ಈ ಬಾಳೆಹಣ್ಣು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದರು.