ಬಿಸಿಸಿಐ ಮಾಜಿ ಅಧ್ಯಕ್ಷ ಹಾಗೂ ಪಂಜಾಬ್ ರಾಜ್ಯ ಕ್ರಿಕೆಟ್ ಸಂಸ್ಥೆ ಮುಖ್ಯಸ್ಥರಾಗಿದ್ದ ಐಎಸ್ ಬಿಂದ್ರಾ ದೀರ್ಘಾಕಾಲದ ಅನಾರೋಗ್ಯದಿಂದ ಭಾನುವಾರ ಅಸುನೀಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಬಿಸಿಸಿಐ ಅಧ್ಯಕ್ಷರಾಗಿ ನಾಯಕತ್ವ ಮತ್ತು ದೂರದೃಷ್ಟಿಯಿಂದ ಸಂಸ್ಥೆಯನ್ನು ಮುನ್ನಡೆಸಿದ ರೀತಿಗೆ ಪ್ರಶಂಸೆಗೆ ಪಾತ್ರರಾಗಿದ್ದ ಬಿಂದ್ರಾ ಭಾರತೀಯ ಕ್ರಿಕೆಟ್ ಅನ್ನು ಬಹುಕೋಟಿ ಶ್ರೀಮಂತ ಸಂಸ್ಥೆಯನ್ನಾಗಿಸುವತ್ತ ಮುನ್ನಡೆಸಿದರು.
ಬಿಂದ್ರಾ ಕಾಲದಲ್ಲಿ ಕೈಗೊಂಡ ಪರಿಣಾಮಕಾರಿ ಆಡಳಿತದಿಂದ ಭಾರತೀಯ ಕ್ರಿಕೆಟ್ ಗೆ ಹೊಸ ದಿಶೆ ಲಭಿಸಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕ್ರಿಕೆಟ್ ಖ್ಯಾತಿ ಪಡೆದಿದ್ದೂ ಅಲ್ಲದೇ ಹಿಡಿತ ಸಾಧಿಸಿತು. ಐಸಿಸ್ ಮುಖ‍್ಯಸ್ಥ ಜೈ ಶಾ ಬಿಂದ್ರಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಪಿಸಿಎ ಅಧ್ಯಕ್ಷರಾಗಿ 1978ರಿಂದ ೨೦೧೪ರವರೆಗೆ ಸೇವೆ ಸಲ್ಲಿಸಿದ್ದ ಬಿಂದ್ರಾ, 1993ರಿಂದ 1996ರವರೆಗೆ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದರ ನಡುವೆ 1987ರಲ್ಲಿ ಭಾರತ ವಿಶ್ವಕಪ್ ಗೆಲುವಿನಲ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮೀಯಾ ಪ್ರಮುಖ ಪಾತ್ರ ವಹಿಸಿದ್ದರು. ಇವರಿಬ್ಬರ ಸೇವೆಯಿಂದ ಬಿಸಿಸಿಐ ಇಂದು ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿ ಹೊರಹೊಮ್ಮಿದೆ.



