ಭಾರತೀಯ ಬಾಹ್ಯಕಾಶ ಸಂಸ್ಥೆ (ಇಸ್ರೊ) ಮಾಜಿ ಅಧ್ಯಕ್ಷ ಹಾಗೂ ವಿಜ್ಞಾನಿ ಕಸ್ತೂರಿ ರಂಗನ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ಇಸ್ರೊದಲ್ಲಿ 9 ವರ್ಷಗಳ ಕಾಲ ಮುನ್ನಡೆಸಿದ ಕಸ್ತೂರಿ ರಂಗನ್ ಬಾರತೀಯ ಬಾಹ್ಯಕಾಶ ಸಾಧನೆಗೆ ಹೊಸ ಮುನ್ನುಡಿ ಬರೆದರು.
ಇಸ್ರೊದ ಹಲವು ಮಹತ್ವಾಕಾಂಕ್ಷಿ ಯೋಜನೆಗಳಿಗೆ ನೆರವಾಗುವಂತೆ ಭದ್ರ ಬುನಾದಿಯನ್ನು ಕಸ್ತೂರಿ ರಂಗನ್ ಹಾಕಿ ಕೊಟ್ಟಿದ್ದರು.
ಶುಕ್ರವಾರ ಬೆಳಿಗ್ಗೆ 10.40ರ ಸುಮಾರಿಗೆ ಕಸ್ತೂರಿ ರಂಗನ್ ಉಸಿರಾಟ ನಿಲ್ಲಿಸಿದರು. ಭಾನುವಾರ ಅಂತ್ಯ ಸಂಸ್ಕಾರ ನೆರವೇರಲಿದ್ದು, ಅಲ್ಲಿಯವರೆಗೂ ರಾಮನ್ ಇನ್ಸಿಟಿಟ್ಯೂಟ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.



