Wednesday, May 20, 2026
Google search engine
Homeಬೆಂಗಳೂರುನಾಯಿ ಕಡಿತದಿಂದ ಮೃತಪಟ್ಟರೆ 5 ಲಕ್ಷ ರೂ.ಪರಿಹಾರ: ರಾಜ್ಯ ಸರ್ಕಾರ ಘೋಷಣೆ

ನಾಯಿ ಕಡಿತದಿಂದ ಮೃತಪಟ್ಟರೆ 5 ಲಕ್ಷ ರೂ.ಪರಿಹಾರ: ರಾಜ್ಯ ಸರ್ಕಾರ ಘೋಷಣೆ

ಬೆಂಗಳೂರಿನಲ್ಲಿ ನಾಯಿ ಕಚ್ಚಿ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ಘೋಷಿಸಿದೆ.

ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿಗಳ ಹಿನ್ನೆಲೆಯಲ್ಲಿ ನಾಯಿ ಕಡಿತದಿಂದ ಗಾಯಗೊಂಡ ಹಾಗೂ ಮೃತಪಟ್ಟವರ ಪರಿಹಾರ ಕುರಿತು ರಾಜ್ಯ ಸರ್ಕಾರ ನವೀಕರಿಸಿದ ಮಾರ್ಗಸೂಚಿ ಪ್ರಕಟಿಸಿದೆ.

ನಾಯಿಗಳ ದಾಳಿಯಿಂದ ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆಯನ್ನು ನೀಡಲು ಹಾಗೂ ಸಾವನ್ನಪ್ಪಿದವರ ಮನೆಯ ಆರ್ಥಿಕ ಸಹಾಯಕ್ಕಾಗಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ.

ನಾಯಿ ಕಚ್ಚಿದ ಗಾಯ, ಮೂಗೇಟುಗಳು ಮತ್ತು ರಕ್ತಸ್ರಾವದ ಸಮಸ್ಯೆ, ಸೀಳುವಿಕೆ, ಇಂತಹ ಗಾಯಗಳು ಕಂಡು ಬಂದರೆ 5 ಸಾವಿರ ರೂ. ವರೆಗೆ ಪರಿಹಾರವನ್ನು ನೀಡಲಾಗುವುದು. 2023ರಲ್ಲಿ ನಾಯಿಗಳ ದಾಳಿಯಿಂದ ಗಾಯಗೊಂಡ ಅಥವಾ ಸಾವನ್ನಪ್ಪಿದವರಿಗೆ ವಿಶೇಷ ಯೋಜನೆಯನ್ನು ಮಾಡಲಾಗಿತ್ತು.

ಇದೀಗ ಆ ಯೋಜನೆಯನ್ನೇ ಮುಂದುವರಿಸಲಾಗುವುದು. ಆದರೆ ಇದರಲ್ಲಿ ಕೆಲವೊಂದನ್ನು ಬದಲಾವಣೆ ಮಾಡಲಾಗಿದೆ. ಈ 5,000 ರೂ.ಗಳಲ್ಲಿ 3,500 ರೂ.ಗಳನ್ನು ನಗರಾಭಿವೃದ್ಧಿ ಇಲಾಖೆ ನೀಡುತ್ತದೆ. ಉಳಿದ 1,500 ರೂ. ಅನ್ನು ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ವರ್ಗಾಯಿಸಲಾಗುತ್ತದೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.

ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ನಾಯಿ ಕಚ್ಚಿದ ವ್ಯಕ್ತಿಗೆ ತಕ್ಷಣದ ವೈದ್ಯಕೀಯ ಆರೈಕೆ ಸಿಗುವಂತೆ ನೋಡಿಕೊಳ್ಳುವುದು ಈ ನಿಧಿಯ ಉದ್ದೇಶವಾಗಿದೆ. ಪರಿಹಾರದ ಒಂದು ಭಾಗವನ್ನು ಆರೋಗ್ಯ ಟ್ರಸ್ಟ್‌ಗೆ ನೀಡಲಾಗುವುದು. ಸರ್ಕಾರವು ಆರಂಭಿಕ ಚಿಕಿತ್ಸಾ ವೆಚ್ಚವನ್ನು ಮುಂಗಡವಾಗಿ ಭರಿಸುವ ಯೋಜನೆಯನ್ನು ಕೂಡ ಹೊಂದಿದೆ. ಇದರಿಂದ ಯಾರಿಗೆ ಮುಂಗಡವಾಗಿ ಹಣ ಪಾವತಿ ಮಾಡಲು ಸಾಧ್ಯವಾಗುವುದಿಲ್ಲ, ಅವರಿಗೆ ಸಹಾಯವಾಗುತ್ತದೆ ಎಂದು ವರದಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments